ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ICC ಅಂದ್ರೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಉಕ್ರೇನ್‌ನ ಸಾವಿರಾರು ಮಕ್ಕಳನ್ನು ಗಡಿಪಾರು, ಅಪಹರಣದಲ್ಲಿ ಭಾಗಿಯಾದ ಆರೋಪದಲ್ಲಿ ಅಪರಾಧಿಯನ್ನಾಗಿಸಿದೆ. ಈ ಅರೆಸ್ಟ್ ವಾರೆಂಟ್ ಸದ್ಯ ವಿಶ್ವದಾದ್ಯಂತ ಬಹುಚರ್ಚೆಯ ವಿಚಾರವಾಗಿದೆ.
2022 ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಇಂದಿಗೂ ತನ್ನ ಹಠ ಬಿಟ್ಟಿಲ್ಲ. ಹೀಗಿರುವಾಗ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಉಕ್ರೇನ್ ಆಕ್ರಮಿತ ಪ್ರದೇಶಗಳಿಂದ ಮಕ್ಕಳನ್ನು ರಷ್ಯಾಕ್ಕೆ ಗಡಿಪಾರು ಮಾಡಿರೋದು ಯುದ್ಧ ಅಪರಾಧ. ಕಾನೂನುಬಾಹಿರವಾಗಿ ಉಕ್ರೇನ್ ಮಕ್ಕಳನ್ನು ಸಾಗಿಸುವ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ದೂರಿದೆ.
ರೋಮ್ ಕಾನೂನಿನ 8(2)(ಎ) (vii) ಮತ್ತು 8(2)(ಬಿ) (viii) ವಿಧಿಯಡಿ ಇದು ಅಪರಾಧ. ರೋಮ್ ಕಾನೂನು ಸೆಕ್ಷನ್ 25 (3)(ಎ) ಅಡಿ ಅಪರಾಧವಾಗಿದೆ. ಕೃತ್ಯ ಎಸಗಿದವರು & ಕೃತ್ಯಕ್ಕೆ ಅನುಮತಿ ನೀಡಿದವರ ವಿರುದ್ಧ ಕ್ರಮ ತಗೆದುಕೊಂಡಿಲ್ಲ. ರಷ್ಯಾ ಅಧ್ಯಕ್ಷರಿಗೆ ಸಿವಿಲ್ ಮತ್ತು ಮಿಲಿಟರಿ ಅಧೀನ ಅಧಿಕಾರಿಗಳ ವಿರುದ್ಧ ಸೂಕ್ತ ನಿಯಂತ್ರಣವಿಲ್ಲ. ಪುಟಿನ್‌ಗೆ ಇವರ ವಿರುದ್ಧ ನಿಯಂತ್ರಣ ಸಾಧಿಸಲು ಆಗಿಲ್ಲ. ಈ ಕಾರಣಕ್ಕೆ ಪುಟಿನ್, ವೈಯಕ್ತಿಕ ಕ್ರಿಮಿನಲ್ ಹೊಣೆಗಾರರಾಗಿದ್ದಾರೆ ಎನ್ನಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿರೋದು ಐತಿಹಾಸಿಕ ನಿರ್ಧಾರ. ಇದು ನ್ಯಾಯಯುತವಾಗಿದೆ. ಪುಟಿನ್ ಅವರು ಅಪರಾಧ ಮಾಡಿರೋದು ಸ್ಪಷ್ಟವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ವಿಡಿಯೋ ಪ್ರಕಟಣೆಯಲ್ಲಿ ಮಾತನಾಡಿರುವ ಝೆಲೆನ್‌ಸ್ಕಿ ICC ಕೋರ್ಟ್‌ಗೆ ಧನ್ಯವಾದಗಳನ್ನು ತಿಳಿಸಿ ಸದೃಢ ಉಕ್ರೇನ್ ದೇಶವನ್ನ ಕಟ್ಟಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.
ಇನ್ನು, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮುಂದಿನ ವಾರ ರಷ್ಯಾಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಉಕ್ರೇನ್ ಯುದ್ಧದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ. ಉಕ್ರೇನ್‌ನೊಂದಿಗಿನ ಯುದ್ಧ ಕೊನೆಗೊಳಿಸುವ ಶಾಂತಿ ಮಾತುಕತೆ ನಡೆಸಲು ಜಿನ್‌ಪಿಂಗ್ ತಯಾರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: VIDEO: ಅಬ್ಬಬ್ಬಾ.. ವಧುವಿಗೆ ಲಕ್ಷ, ಲಕ್ಷ ಕ್ಯಾಶ್, ಚಿನ್ನಾಭರಣ, ಆಸ್ತಿ ಪತ್ರ, ಟ್ರ್ಯಾಕ್ಟರ್ ಸೇರಿ 3 ಕೋಟಿ ಗಿಫ್ಟ್!
ವಿಶ್ವ ನಾಯಕರು ಉಕ್ರೇನ್ ಯುದ್ಧ ಕೊನೆಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ. ಆದರೆ ರಷ್ಯಾ ಸರ್ಕಾರ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ ಆರೋಪಗಳನ್ನ ತಳ್ಳಿ ಹಾಕಿದೆ. ICC ನ್ಯಾಯಾಂಗದ ವ್ಯಾಪ್ತಿಯಲ್ಲಿ ಮಾಸ್ಕೋ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನ ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಂತರಾಷ್ಟ್ರೀಯ ತಜ್ಞರು ಸಹ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಬಂಧನ ಸಾಧ್ಯವಿಲ್ಲ ಎಂದೇ ವಿಶ್ಲೇಷಿಸಿದ್ದಾರೆ.
International Criminal Court issues warrant of arrest for Putin. The historic decision, from which historical responsibility will begin. pic.twitter.com/cUW0WbeGKJ
— Володимир Зеленський (@ZelenskyyUa) March 17, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post