ಬೆಂಗಳೂರಲ್ಲಿ ಪ್ರಿಮಿಯರ್ ಫ್ಯಾಷನ್ ವೀಕ್-2 ಸ್ವರ್ಗವೇ ಧರೆಗಿಳಿಸ್ತು. ಫ್ಯಾಶನ್ ಶೋನಲ್ಲಿ ಕಲರ್ ಫುಲ್ ವೇದಿಕೆಯಲ್ಲಿ ಸುಂದರಿಯರ ಕ್ಯಾಟ್‌ವಾಕ್ ಗಮನ ಸೆಳೆಯಿತು. ಝಗಮಗಿಸುವ ವೇದಿಕೆ, ಮನಸನ್ನು ಕುಣಿಸುವ ಮ್ಯೂಸಿಕ್ ಆ ಮ್ಯೂಸಿಕ್ಕಿನ ಸೌಂಡ್ಗೆ ತಕ್ಕಂತೆ ಸೊಂಟ ಬಳುಕಿಸಿದ ಚೆಲುವೆಯರು ಮೋಹಕ ಹೆಜ್ಜೆ ಹಾಕಿದರು. ದೇಶಿ ಮತ್ತು ವೆಸ್ಟರ್ನ್ ಕಲ್ಚರ್ ಸೇರಿ ಹಲವು ಶೈಲಿಯ ಆಭರಣ ಧರಿಸಿ ಱಂಪ್ ಮೇಲೆ ಬಳುಕುತ್ತಾ ಹೆಜ್ಜೆ ಹಾಕಿದರು.
ರಂಗು-ರಂಗಿನ ಲೋಕವೇ ಐಟಿಸಿ ಹೋಟೆಲ್ನಲ್ಲಿ ಅನಾವರಣಗೊಂಡಿತ್ತು. ಈ ವೇಳೆ ಫ್ಯಾಷನ್ ಡಿಸೈನರ್ ರೂಪ ಸುಧಾ ಗಂಗಾಧರ್, ತನುಗೌಡ ಭಾಗಿಯಾಗಿದ್ರು. ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್ ಕೂಡ ಱಂಪ್ ವಾಕ್ ಮಾಡಿದ್ರು. ಈ ಮೂಲಕ ಫ್ರೀಮಿಯರ್ ಫ್ಯಾಷನ್ ವೀಕ್ ಸೀಸನ್ -2 ಮಿನಿ ಸ್ವರ್ಗವೇ ಅನಾವರಣ ಮಾಡಿತ್ತು.
ಹಲವು ಬಗೆಯ ನೂತನ ಶೈಲಿ ಡ್ರೇಸ್ ಆಭರಣಗಳನ್ನ ಧರಿಸಿದ ಸುಂದರಿಯರು ಱಂಪ್ ಮೇಲೆ ಬಳುಕುತ್ತಾ ಕ್ಯಾಟ್‌ವಾಕ್ ಮಾಡಿದ್ರು. ಇನ್ನು, ಪ್ರೀತಿ ಕದಮ್ ಎಂಬ ಪ್ಯಾಷನ್ ಶೋ ಸ್ಪರ್ಧಿ, ಪ್ರಿಮಿಯರ್ ಫ್ಯಾಷನ್ ವೀಕ್ ಸೀಸನ್-2ನಲ್ಲಿ ಭಾಗವಹಿಸ್ತಿರುವ ತುಂಬ ಖುಷಿಯಾಗಿದೆ.
ಇಟ್ ಈಜ್ ಅಮೆಜಿಂಗ್, ಇದು ನಾನು ಫಸ್ಟ್ ಟೈಮ್ ಇವರ ಜೊತೆ ಸ್ಪರ್ಧೆ ಮಾಡುತ್ತಿರುವುದು. ಐ ನೆವರ್ ಎಕ್ಸಪ್ಲೆನ್ ಇಟ್ಸ್ ಬ್ಯೂಟಿಫುಲ್. ಪ್ರತಿಯೊಬ್ಬರು ಟ್ಯಾಲೆಂಟ್ ಅನ್ನು ಪ್ರೋತ್ಸಾಹ ಮಾಡುತ್ತಿದ್ದಾರೆ. ಮುಂದೆ ಡೆವಲಪ್ಮೆಂಟ್ ಆಗೋಕೆ ಅವಕಾಶಗಳನ್ನ ಕೊಡುತ್ತಾರೆ.
ಪ್ರೀತಿ ಕದಮ್, ಫ್ಯಾಶನ್ ಶೋನ ಸ್ಪರ್ಧಿ
ಇದೇ ವೇಳೆ ಮಾತನಾಡಿದ ಫ್ರೀಮಿಯರ್ ಫ್ಯಾಷನ್ ವೀಕ್ನ ಕೋ ಫೌಂಡರ್ ಸೈಯದ್ ಸಲಾಂ, ಫ್ಯಾಷನ್ ವೀಕ್-2ನಲ್ಲಿ ಬ್ರೈಡ್, ವೆಸ್ಟನ್ ಹಾಗೂ ಸ್ಫೋರ್ಟ್ಸ್ ವೇರ್ನಲ್ಲೂ ಕಲೆಕ್ಷನ್ನ ಮಾಡಿದ್ವಿ. ಹೀಗಾಗಿ ಬೋಲ್ಡ್ ಌಂಡ್ ಬ್ಯೂಟಿಫುಲ್ ಈವೆಂಟ್ ಆಗಿದೆ ಅಂತ ಹೇಳಿದ್ರು.
ಪ್ರೀಮಿಯರ್ ಫ್ಯಾಷನ್ ವೀಕ್ ಸೀಸನ್-2ನಲ್ಲಿ ಚಲುವೆಯರು ನ್ಯೂ ಡಿಸೈನ್ ಡ್ರೇಸ್ ತೊಟ್ಟು ಮಿಂಚಿದ್ರು. ಪ್ರೇಕ್ಷಕರಂತು ಈ ಬಿಂಕದ ಸಿಂಗಾರಿಗಳ ನಡಿಗೆಗೆ ಫಿದಾ ಆದರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post