ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಇನ್ನೇನು ಶುರುವಾಗಲಿದೆ. ಹೇಗಾದರೂ ಮಾಡಿ ಈ ಬಾರಿ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಯಾರಿ ನಡೆಸಿಕೊಂಡಿದೆ. ಈಗ ಐಪಿಎಲ್ ಶುರುವಾಗೋ ಮುನ್ನವೇ ಆರ್ಸಿಬಿಗೆ ಸ್ಟಾರ್ ಆಲ್‌ರೌಂಡರ್ ಕೈ ಕೊಟ್ಟಿದ್ದಾರೆ.
ಯೆಸ್, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ವಿಲ್ ಜಾಕ್ಸ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಐಪಿಎಲ್‌ನಿಂದ ಅವರು ಹೊರಗುಳಿಯುವುದು ಅನಿವಾರ್ಯ ಇದೆ. ಹೀಗಾಗಿ ಈ ಸ್ಥಾನಕ್ಕೆ ಯಾರು ಬರಲಿದ್ದಾರೆ ಅನ್ನೋ ಕುತೂಹಲ ಜೋರಾಗಿ ಇತ್ತು.
ಇನ್ನು, ವಿಲ್ ಜಾಕ್ಸ್ ಸ್ಥಾನಕ್ಕೆ ಸ್ಟಾರ್ ಆಲ್‌ರೌಂಡರ್ ನ್ಯೂಜಿಲೆಂಡ್ ತಂಡದ ಆಟಗಾರ ಮೈಕಲ್ ಬ್ರೇಸ್‌ವೆಲ್ ಬಂದಿದ್ದಾರೆ. ಮೂಲ ಬೆಲೆ 1 ಕೋಟಿಗೆ ರೂಪಾಯಿ ನೀಡಿ ಆರ್‌ಸಿಬಿ ಬ್ರೇಸ್‌ವೆಲ್ ಅವರನ್ನು ಸೇರಿಸಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ಮೈಕಲ್ ಬ್ರೇಸ್‌ವೆಲ್ ಆರ್‌ಸಿಬಿ ತಂಡದೊಂದಿಗೆ ಸಹಿ ಹಾಕಿದ್ದಾರೆ.
ಮೈಕಲ್ ಬ್ರೇಸ್ವೆಲ್ಗೆ ಒಟ್ಟಾರೆಯಾಗಿ 117 ಟಿ20 ಪಂದ್ಯಗಳನ್ನು ಆಡಿದ ಅನುಭವ ಇದೆ. 31 ಸರಾಸರಿಯಲ್ಲಿ 134 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಂದು ಶತಕ ಹಾಗೂ 13 ಅರ್ಧ ಶತಕಗಳು ಬ್ರೇಸ್‌ವೆಲ್ ಹೆಸರಿನಲ್ಲಿದೆ. ಹಾಗೆಯೇ 40 ವಿಕೆಟ್ ಕೂಡ ಸಂಪಾದಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post