ಮೈಸೂರು: ಗುರು-ಹಿರಿಯರು, ನಂಜನಗೂಡು ಕ್ಷೇತ್ರದ ಜನತೆಯ ತೀರ್ಮಾನಕ್ಕೆ ನಾನು ಬದ್ಧ. ಅವರು ಏನು ಹೇಳ್ತಾರೆ, ಆ ದಾರಿಯಲ್ಲಿ ಸಾಗ್ತೀನಿ ಅಂತಾ ದಿವಂಗತ ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ ಹೇಳಿದ್ದಾರೆ.
ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಮೊದಲ ಆದ್ಯತೆ ತಂದೆ ಅವರ ಕಾರ್ಯ ಆಗಬೇಕಾಗಿದೆ. ಅದರ ಕಡೆಗೆ ನನ್ನ ಗಮನ. ಅದನ್ನು ಬಿಟ್ಟು ಸದ್ಯ ರಾಜಕೀಯ ಬಗ್ಗೆ ಯೋಚನೆ ಮಾಡಿಲ್ಲ. ತಂದೆಯ ಕಾರ್ಯ ಮುಗಿದ ಬಳಿಕವೇ, ನನ್ನ ಮುಂದಿನ ನಿರ್ಧಾರ.
ನನಗೆ ರಾಜಕೀಯದ ಬಗ್ಗೆ ಯಾವುದೇ ವಿಚಾರಗಳು ಗೊತ್ತಿಲ್ಲ. ನನ್ನ ಬಳಿ ತಂದೆಯವರು ರಾಜಕಾರಣದ ಬಗ್ಗೆ ಮಾತನಾಡುತ್ತಿರಲಿಲ್ಲ. ನಾನು ಎಲ್ಎಲ್ಬಿ ಸೇರಿದಾಗ ಖುಷಿ ಪಟ್ಟಿದ್ದರು. ನನ್ನ ಹಾಗು ನನ್ನ ತಮ್ಮನ ಆಯ್ಕೆ ವಿಚಾರದಲ್ಲಿ ಸ್ವತಂತ್ರ್ಯವಿತ್ತು. ನಮ್ಮದು ರೈತಾಪಿ ಕುಟುಂಬ ಎಂದರು.
ಇದನ್ನೂ ಓದಿ: ನಂಜನಗೂಡು ಟಿಕೆಟ್ ವಿಚಾರ; ಮಹದೇವಪ್ಪ ಮಾದರಿ ಹೆಜ್ಜೆಯ ಹಿಂದಿನ ಸೂತ್ರದಾರ ಯಾರು ಗೊತ್ತಾ?
ತಂದೆ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಅಪ್ಪ ನಿಧನದ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ತಂದೆ ಸಾಯುವ ಹಿಂದಿನ ದಿನ ನನ್ನ ಜೊತೆ ಮಾತನಾಡಿದ್ದರು. ಚುನಾವಣಾ ಕ್ಯಾಂಪೇನ್ಗೆ ವಾಹನ ರೆಡಿ ಮಾಡಿಸುವಂತೆ ತಿಳಿಸಿದ್ದರು. ರಾಜಕಾರಣಕ್ಕೆ ಯಾವತ್ತೂ ನಮ್ಮನ್ನೂ ಕರೆದಿಲ್ಲ. ನನಗೆ ರಾಜಕಾರಣದಲ್ಲಿ ಆಸಕ್ತಿಯೇ ಇರಲಿಲ್ಲ. ನನ್ನ ತಾಯಿಯ ಆರೋಗ್ಯ ಕೂಡ ಸರಿಯಿಲ್ಲ. ಅವರ ಬಗ್ಗೆಯೂ ನಾನು ಗಮನಕೊಡಬೇಕಿದೆ ಎಂದರು.
‘ನನ್ನ ಮೊದಲ ಆದ್ಯತೆ..’: ನಂಜನಗೂಡು ಟಿಕೆಟ್ ಬಗ್ಗೆ ಧ್ರುವನಾರಾಯಣ್ ಪುತ್ರ ಹೇಳಿದ್ದೇನು? #darshandhruvanarayan #Najanagudhttps://t.co/rfAERjKIO3 pic.twitter.com/RZPZeAFYAv
— NewsFirst Kannada (@NewsFirstKan) March 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post