ಚೆನ್ನೈ: ವಿದ್ಯುತ್ ತಂತಿ ತಗುಲಿ ಕಾಡಾನೆ ಮೃತಪಟ್ಟಿರೋ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ಸುಮಾರು 20 ವರ್ಷದ ಗಂಡಾನೆಯೊಂದು ರೈತರ ಜಮೀನಿಗೆ ನುಗ್ಗಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದೆ.
ಧರ್ಮಪುರಿಯಲ್ಲಿ ಅಕ್ರಮವಾಗಿ ರೈತರೊಬ್ಬರು ಜಮೀನಿನಲ್ಲಿ ಕರೆಂಟ್ ಅಳವಡಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇನ್ನು ಮೃತ ಗಂಡಾನೆಯ ಮುಂದೆ ಮರಿ ಆನೆಯ ಆಕ್ರಂದನ ಕಂಡು ಗ್ರಾಮಸ್ಥರು ಮರುಗಿದ್ದಾರೆ.
ಇದನ್ನು ಓದಿ: VIDEO: ಅಬ್ಬಬ್ಬಾ.. ವಧುವಿಗೆ ಲಕ್ಷ, ಲಕ್ಷ ಕ್ಯಾಶ್, ಚಿನ್ನಾಭರಣ, ಆಸ್ತಿ ಪತ್ರ, ಟ್ರ್ಯಾಕ್ಟರ್ ಸೇರಿ 3 ಕೋಟಿ ಗಿಫ್ಟ್!
ಇನ್ನು ಈ ಹಿಂದೆಯು ಇದೇ ರೀತಿಯಲ್ಲಿ ವಿದ್ಯುತ್ ಶಾಕ್ ತಗುಲಿ ಕಾಡಾನೆ ಮೃತಪಟ್ಟಿತ್ತು. ಹೀಗಾಗಿ ಜಮೀನು ಮಾಲೀಕ ಮುರುಗೇಶ್ ಎಂಬುವವರನ್ನು ಪೊಲೀಸ್ ಅಧಿಕಾರಿಗಳು ಅರೆಸ್ಟ್ ಸಹ ಮಾಡಿದ್ದರು. ಆ ಘಟನೆ ಮಾಸುವ ಮುನ್ನವೇ ಧರ್ಮಪುರಿ ಜಿಲ್ಲೆಯಲ್ಲಿ ಮತ್ತೊಂದು ಘಟನೆ ಸಂಭವಿಸಿದೆ.
ವಿದ್ಯುತ್ ತಂತಿ ತಗುಲಿ ಕಾಡಾನೆ ಮೃತಪಟ್ಟಿರೋ ಮತ್ತೊಂದು ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ. ರೈತರ ಜಮೀನಿಗೆ ನುಗ್ಗಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಗಂಡಾನೆಯೊಂದು ಸ್ಥಳದಲ್ಲೇ ಕುಸಿದು ಬಿದ್ದಿದೆ. #Newsfirstlive #newsfirstkannada #elephantdeath pic.twitter.com/MN8wGMzVXR
— NewsFirst Kannada (@NewsFirstKan) March 19, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post