ದೆಹಲಿ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕಾಗಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಓಡಾಡಿ ಅದ್ಧೂರಿಯಾಗಿ ಸಮಾವೇಶ, ಱಲಿ ಮಾಡಿ ಜನರ ಬಳಿ ವೋಟ್ ಕೂಡ ಕೇಳಿದ್ದರು. ಆದ್ರೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಡೌಟ್. ಏಕೆಂದರೆ ದೆಹಲಿಯಲ್ಲಿ ಅವರು ಹೇಳಿದ ಈ ಮಾತುಗಳು ಅನುಮಾನಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಿನ್ನೆ ನಡೆದ AICC ಸಭೆಯಲ್ಲಿ ನನ್ನ ಟಿಕೆಟ್ ಕ್ಲಿಯರ್ ಮಾಡಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಮಾಡಲಿ. ಈ ಎಲೆಕ್ಷನ್ನಲ್ಲಿ ಕೋಲಾರ ಕ್ಷೇತ್ರದಿಂದ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಹೇಳಿದ್ದಾರೆ.
ಇನ್ನು ಇದೇ ವೇಳೆ ಮೈಸೂರಿನ ನಂಜನಗೂಡು ಟಿಕೆಟ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಂಜನಗೂಡು ಟಿಕೆಟ್ ಬಗ್ಗೆ ನಿನ್ನೆ ಚರ್ಚೆ ಆಗಿಲ್ಲ. ಆದರೆ, ದಿವಂಗತ ಮಾಜಿ ಸಂಸದ ಧ್ರುವನಾರಾಯಣ ಅವರ ಪುತ್ರ ದರ್ಶನ್ಗೆ ಕಾಂಗ್ರೆಸ್ ಟಿಕೆಟ್ ಕೊಡುವುದು ಬಹುತೇಕ ಖಚಿತವಾಗಿದೆ. ನಂಜನಗೂಡುಗೆ ಇಬ್ಬರೆ ಅರ್ಜಿ ಹಾಕಿದ್ದರು. ಇದರಲ್ಲಿ ಹೆಚ್.ಸಿ ಮಹದೇವಪ್ಪ ಹಿಂದೆ ಸರಿದಿದ್ದಾರೆ. ನಾನು ದರ್ಶನ್ಗೆ ಟಿಕೆಟ್ ಕೊಡಿಯೆಂದು ಒತ್ತಾಯಿಸಿದ್ದೇನೆ. ಯುಗಾದಿ ಹಬ್ಬದ ದಿನವೇ ಕಾಂಗ್ರೆಸ್ ಟಿಕೆಟ್ ಪಟ್ಟಿ ಹೊರ ಬರಲಿದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post