ಚಾಮರಾಜನಗರ: ಬೆಟ್ಟದ ಮೇಲೆ ತಲೆ ಎತ್ತಿರುವ ಮಲೆ ಮಹದೇಶ್ವರ. ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯ ದೈವ. ಕೇಳಿದ ವರವ ಕೊಡುವ ಮಾದಪ್ಪನ ಬೆಟ್ಟಕ್ಕಿಗ ಮುಗಿಲೆತ್ತರದ ಈ ಪ್ರತಿಮೆ, ಮತ್ತೊಂದು ಆಕರ್ಷಣೆ.
ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಈ ಬೆಟ್ಟದ ನೆತ್ತಿಯ ಮೇಲಿಂದ ಬಂದ ಭಕ್ತರಿಗೆ ಮಲೆ ಮಹದೇಶ್ವರ ಆಶೀರ್ವಾದ ಮಾಡಲಿದ್ದಾನೆ. ಮುಗಿಲೆತ್ತರದ ಮಾದಪ್ಪನ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪ್ರತಿಮೆಯನ್ನು ಬೆಳಗ್ಗೆ 10 ಗಂಟೆಗೆ ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.
ಬೆಟ್ಟದಲ್ಲಿ ನಿರ್ಮಿಸಿರುವ 108 ಅಡಿ ಮಲೆಮಹದೇಶ್ವರನ ಪ್ರತಿಮೆ ಇವತ್ತು ಅನಾವರಣ ಆಗ್ತಿದೆ. ಪ್ರತಿಮೆ ಮೊದಲನೇ ಹಂತದ ಕಾಮಗಾರಿ ಮುಗಿದಿದ್ದು ಇವತ್ತು ಪ್ರತಿಮೆಯನ್ನ ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಜೊತೆಗೆ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡ ಬೆಳ್ಳಿರಥವು ಮಾದಪ್ಪನಿಗೆ ಅರ್ಪಣೆ ಆಗಲಿದೆ.
ಮಹದೇಶ್ವರನ ಪ್ರತಿಮೆ ವಿಶೇಷತೆಗಳೇನು..?
- ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ 108 ಅಡಿ ಪ್ರತಿಮೆ
- ದೀಪದಗಿರಿ ಒಡ್ಡು ಎಂಬಲ್ಲಿ 20 ಎಕರೆ ಜಾಗದಲ್ಲಿ ನಿರ್ಮಾಣ
- 20 ಕೋಟಿ ವೆಚ್ಚದಲ್ಲಿ ಬೃಹತ್ ಪ್ರತಿಮೆ ನಿರ್ಮಾಣವಾಗಿದೆ
- ಕಲ್ಲುಬಂಡೆಯ ರಚನೆ ಮೇಲೆ ಹುಲಿ ಮೇಲೆ ಕುಳಿತ ಮಾದಪ್ಪ
- ಆಕರ್ಷಣೀಯವಾಗಿದೆ ತ್ರಿಶೂಲ ಹಿಡಿದ ಮಹದೇಶ್ವರ ಪ್ರತಿಮೆ
- ತಳಭಾಗದಲ್ಲಿ ಗುಹೆ ಮಾದರಿಯ 2 ಮಹಡಿ ನಿರ್ಮಾಣ
- ಮಹದೇಶ್ವರ ಚಾರಿತ್ರಿಕ ಘಟ್ಟಗಳ ಕಲಾಕೃತಿಗಳ ಮ್ಯೂಸಿಯಂ
- ಪಾರ್ಕ್, ವಿಶ್ರಾಂತಿ ತಾಣ & ಶೌಚಾಲಯ ನಿರ್ಮಾಣ ಬಾಕಿ
- ಗದಗದ ಸಿಎಸ್‌ಎಪಿ ಆರ್ಕಿಟೆಕ್ಟ್ ಸಂಸ್ಥೆ ನಿರ್ಮಿಸಿರುವ ಪ್ರತಿಮೆ
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ,ಸಚಿವರಾದ ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಆರ್.ಅಶೋಕ್ ,ಸಿ.ಸಿ ಪಾಟೀಲ್ಗೆ ಆಹ್ವಾನ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post