ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜನ ಮೆಚ್ಚಿದ ರಾಜಕಾರಣಿ. ಕರ್ನಾಟಕದ ಸಮ್ಮಿಶ್ರ ಸರ್ಕಾರದಲ್ಲಿ 2 ಬಾರಿ ಮುಖ್ಯಮಂತ್ರಿಯಾದವರು. ಇವರ ಪೂರ್ಣ ಹೆಸರು ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ. 1986 ಮಾರ್ಚ್ 13 ರಂದು ಅನಿತಾರನ್ನು ವಿವಾಹವಾದರು. ಈ ದಂಪತಿ ರಾಜಕಾರಣದಲ್ಲಿ ತೊಡಗಿದ್ದಾರೆ. ಸದ್ಯ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಜನಪ್ರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ನಡೆಸಿಕೊಡುತ್ತಿರುವ ‘ನಾನು ಮುಖ್ಯಮಂತ್ರಿ’ ಪ್ರೊಗ್ರಾಮ್ನಲ್ಲಿ ಕುಮಾರಸ್ವಾಮಿ ತಮ್ಮ ಧರ್ಮ ಪತ್ನಿ ಬಗ್ಗೆ ಸ್ವಾರಸ್ಯಕರವಾದ ಮಾತುಗಳನ್ನಾಡಿದ್ದಾರೆ. ಸಂಜೆ 7 ಗಂಟೆಗೆ ಕುಮಾರಸ್ವಾಮಿ ಅವರ ಅಂತರಂಗದ ಮಾತುಗಳು ಪ್ರಸಾರವಾಲಿವೆ.
ಮದುವೆಯಾದ ಮೇಲೆ ರಾಜಕೀಯ ಚರ್ಚೆ ಹಾಗೂ ರಾಜಕೀಯ ತೀರ್ಮಾನಗಳ ಬಗ್ಗೆ ನಿಮ್ಮ ಧರ್ಮ ಪತ್ನಿ ಅನಿತಾ ಜೊತೆ ಚರ್ಚೆ ಮಾಡ್ತೀರಾ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಹೆಚ್.ಡಿ ಕುಮಾರಸ್ವಾಮಿ, ರಾಜಕೀಯವಾಗಿ ಪತ್ನಿ ಅನಿತಾ ಬಳಿ ನಾನು ಚರ್ಚೆ ಮಾಡಲ್ಲ. ಇತ್ತೀಚೆಗೆ ಅವರು ರಾಜಕಾರಣಕ್ಕೆ ಬಂದ್ಮೇಲೆ ನನ್ನ ಬಳಿ, ಅದು ತಪ್ಪು, ಇದು ಸರಿ. ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ ಎಂದು ಹೇಳುತ್ತಿರುತ್ತಾರೆ.
‘ಅವರು ನನಗೆ ವಿಶೇಷವಾದ ದೊಡ್ಡ ಶಕ್ತಿ..!’
ಆದರೆ ಆಗ ನಾನು ರೇಗಿಸಿ ಬಿಡುತ್ತೇನೆ. ಏನ್ ಗೊತ್ತು ಬಿಡಮ್ಮಾ.. ರಾಜಕಾರಣ ನನಗೆ ಗೊತ್ತಿಲ್ವಾ..? ನೀನು ನನಗೆ ಬುದ್ಧಿ ಹೇಳಿತ್ತಿಯಾ ಎಂದು ರೇಗಿಸಿ ಬಿಡ್ತೀನಿ. ಅಲ್ಲಿಗೆ ಅವರು ಸುಮ್ಮನಾಗಿ ಬಿಡ್ತಾರೆ. ಆದರೂ ಒಂದು ಸಲ ಹೇಳುತ್ತಾರೆ, ನೋಡಿ ಇದು ಸರಿಪಡಿಸಿಕೊಳ್ಳಿ ಎಂದು. ಆದರೆ ಅಂತಿಮ ನಿರ್ಣಯ ನಾನೇ ಮಾಡುತ್ತೇನೆ ಎಂದು ನಕ್ಕರು.
ಇದನ್ನು ಓದಿ: BJP ನಾಯಕರ ಮುಂದೆ ಕಿತ್ತಾಡಿದ HDK, ಅನಿತಾ ಕುಮಾರಸ್ವಾಮಿ; ಕ್ಯೂಟ್ ವಿಡಿಯೋ ನೋಡಿ!
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಗಣ್ಯರು ಬಂದು ಹೂವಿನ ಹಾರ ಹಾಕಿ, ಬೊಕ್ಕೆ ಕೊಡ್ತಾರೆ. ಆದ್ರೆ ಅನಿತಾ ಕುಮಾರಸ್ವಾಮಿ ಆತ್ಮೀಯವಾಗಿ ಬಂದು ಥ್ಯಾಂಕ್ಸ್ ಕೊಡ್ತಾರೆ ಅಂತಾ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನನ್ನ ಈಗಿನ ಬೆಳವಣಿಗೆಗೆ ಅವರದ್ದು ಪ್ರಮುಖ ಕಾರಣ ಇದೆ. ನಾನು ದಾರಿ ತಪ್ಪಿದಾಗಲೂ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕೊಟ್ಟಂತ ಹೆಣ್ಣಿನ ಗುಣ ಅವರಲ್ಲಿದೆ. ನನ್ನ ಬೆಳವಣಿಗೆಗೆ ಧರ್ಮ ಪತ್ನಿ ಎನ್ನುವುದಕ್ಕಿಂತ ಸ್ನೇಹಿತೆಯಾಗಿ ಎಲ್ಲಾ ರೀತಿ ಸಹಕಾರ ಕೊಟ್ಟಿದ್ದಾಳೆ. ಜನರಲ್ಲಿ ತಪ್ಪು ತಿಳುವಳಿಕೆಗೆ ಅವಕಾಶ ಕೊಡದೆ ನನಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಇದು ವಿಶೇಷವಾಗಿ ನನಗೆ ದೊಡ್ಡ ಶಕ್ತಿಯಾಗಿದೆ ಅಂತಾ ಹೇಳಿದರು.
ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿಯನ್ನು ಹೇಗೆಲ್ಲಾ ರೇಗಿಸುತ್ತಾರಂತೆ ಗೊತ್ತಾ..!? ವೀಕ್ಷಿಸಿ ಇಂದು ಸಂಜೆ 7 ಗಂಟೆಗೆ #ನಾನುಮುಖ್ಯಮಂತ್ರಿ #Newsfirstkannada #Newsfirstlive #HDKumaraswamy @hd_kumaraswamy pic.twitter.com/AQHkTxaNd4
— NewsFirst Kannada (@NewsFirstKan) March 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post