ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ. ಕೃಷ್ಣಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಶನಿವಾರ ಬೆಳಗ್ಗೆ 9 ರಿಂದ 10:30 ರವರೆಗೆ ಇರಲಿದೆ.
ಮೇಷ :
- ಎಷ್ಟೇ ಹಣ ಬಂದರೂ ಕೈಯಲ್ಲಿರುವುದಿಲ್ಲ ಎಂಬ ಕೊರಗು ಕಾಡಬಹುದು
- ಎದುರಾಳಿಗಳು ನಿಮ್ಮ ನಿರ್ಧಾರಕ್ಕೆ ಹೆದುರುತ್ತಾರೆ
- ಇಂದು ಉತ್ತಮ ಭೋಜನಕ್ಕೆ ಅವಕಾಶವಿದೆ
- ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಯಶಸ್ಸು ಸಿಗಲಿದೆ
- ಮಾನಸಿಕವಾದ ನೆಮ್ಮದಿಯಿಂದ ಕಾರ್ಯಸಾಧನೆ ಆಗಲಿದೆ
- ದುಡುಕದೆ ಮಾಡುವ ಕೆಲಸಗಳೆಲ್ಲವೂ ಶುಭವಾಗುವುದು
- ಕುಲದೇವಾತಾ ಆರಾಧನೆ ಮಾಡಿ
ವೃಷಭ :
ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಮನಸ್ಸಿಗೆ ಸಮಾಧಾನವನ್ನು ಕೊಡಲಿದೆ
- ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ಕಷ್ಟಕ್ಕೆ ಸಿಲುಕಬಹುದು
- ಮಾನಸಿಕ ಒತ್ತಡ ತುಂಬಾ ಬರಬಹುದು
- ತಂದೆಯವರಿಂದ ಆಸ್ತಿಯ ವಿಚಾರವಾಗಿ ಸಿಹಿಸುದ್ದಿ ಸಿಗಲಿದೆ
- ಕಾನೂನಿನ ಹೋರಾಟಕ್ಕೆ ಕೆಲವು ಸಿದ್ಧತೆಯನ್ನು ಮಾಡಿಕೊಳ್ಳಬಹುದು
- ಪ್ರಾಮಾಣಿಕವಾಗಿರಿ, ನಿಧಾನದ ಜಯ ನಿಮ್ಮದಾಗುತ್ತದೆ
- ಗಣೇಶನ ಆರಾಧನೆ ಮಾಡಿ
ಮಿಥುನ :
ವಾಹನ ಸವಾರರಿಗೆ ಸ್ವಲ್ಪ ತೊಂದರೆಯಾಗಬಹುದು
- ತಾಯಿಯವರಿಂದ ಶುಭ ಹಾರೈಕೆ ಸಿಗಲಿದೆ
- ಧನ ಸಹಾಯದಿಂದ ಸಮಾಧಾನ ಆಗಲಿದೆ
- ಆತ್ಮೀಯರ ಭೇಟಿಯಿಂದ ಹಲವಾರು ಮಾಹಿತಿಗಳು ಸಿಗಬಹುದು
- ಇಂದು ಪ್ರೇಮಿಗಳಿಗೆ ಸಮಸ್ಯೆಯ ದಿನ
- ವಿನಾಕಾರಣ ಯಾವ ವಿಷಯಕ್ಕೂ ಜಗಳ ಮಾಡಬೇಡಿ
- ದುರ್ಗಾದೇವಿ ಆರಾಧನೆ ಮಾಡಿ
- ದುರ್ಗಾಯೈ ನಮಃ 48 ಬಾರಿ ಜಪಿಸಿ
ಕಟಕ :
ಅಧಿಕವಾದ ತಿರುಗಾಟದಿಂದ ಶ್ರಮ ಆಯಾಸ ಆಗಲಿದೆ
- ಇಷ್ಟ ವಸ್ತುಗಳ ಖರೀದಿಯ ಯೋಗವಿದೆ
- ಸರ್ಕಾರಿ ಕೆಲಸಗಳಲ್ಲಿ ಜಯ ಸಿಗುವುದರಿಂದ ನೆಮ್ಮದಿ ಸಿಗಲಿದೆ
- ಪಿತ್ರಾರ್ಜಿತ ಆಸ್ತಿ ಕುರಿತು ಮಾತುಕತೆ ನಡೆಯಲಿದೆ
- ಕಾನೂನಾತ್ಮಕ ವಿಚಾರಗಳು ಕಗ್ಗಂಟಾಗಬಹುದು
- ಎಲ್ಲಾ ರೀತಿಯ ಸಾಮರ್ಥ್ಯವಿರುವ ನೀವು ಧೈರ್ಯಗೆಡಬಾರದು
- ನವಗ್ರಹರ ಆರಾಧನೆ ಮಾಡಿ
ಸಿಂಹ :
ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತದೆ
- ಸ್ತ್ರೀಯರಿಗೆ ತೊಂದರೆ,ಅಪಾಯ ಆಗುವ ಸೂಚನೆ ಇದೆ
- ವಿನಾಕಾರಣ ಕಲಹ, ಬಗೆಹರಿಯದ ಸಮಸ್ಯೆಯಲ್ಲಿ ಸಿಲುಕುತ್ತೀರಿ
- ಆಸ್ತಿಯ ವಿಚಾರಕ್ಕೆ ಹೆಂಗಸರಲ್ಲಿ ಶೀತಲ ಸಮರ ಆಗಬಹುದು
- ಬೇರೆಯವರ ವಿಚಾರಕ್ಕೆ ತಲೆ ಹಾಕಿ ಮುಖ್ಯ ಉದ್ದೇಶವನ್ನು ಮರೆತುಬಿಡುತ್ತೀರಿ
- ಅನಗತ್ಯವಾದ ಪ್ರಯಾಣ, ತಪ್ಪು ನಿರ್ಧಾರಗಳು ಬೇಡ
- ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ಕನ್ಯಾ :
ವಿನಾಕಾರಣ ವಾದ-ವಿವಾದಗಳಲ್ಲಿ ಹೀನಾಯ ಸೋಲು ಕಾಣುತ್ತೀರಿ
- ಪ್ರಯಾಣದ ಸಕಲ ಸಿದ್ದತೆ, ಕೊನೆ ಕ್ಷಣದಲ್ಲಿ ರದ್ದು ಆಗುವ ಸಾಧ್ಯತೆ ಇದೆ
- ಮಾನಸಿಕ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು
- ಸಮಯದ ಬಗ್ಗೆ ಬೇಜವಾಬ್ದಾರಿತನ ತೋರಿದರೆ ಅವಕಾಶ ವಂಚಿತರಾಗುತ್ತೀರಿ
- ಎಲ್ಲರ ಜೊತೆಯಲ್ಲಿ ಸೌಹಾರ್ಧಯುತರಾಗಿ ವರ್ತಿಸಿ ಒಳ್ಳೆಯದು
- ಅಗತ್ಯವಾದ ಮಾಹಿತಿಯನ್ನು ಒಳ್ಳೆಯತನದಿಂದ ಸಂಗ್ರಹಿಸಿ
- ನವಗ್ರಹರ ಆರಾಧನೆ ಮಾಡಿ
ತುಲಾ :
ಆಧ್ಯಾತ್ಮಿಕ ಚಿಂತನೆಗಳು, ಹಲವಾರು ಸಾಧಕರ ಭೇಟಿ ಆಗಲಿದೆ
- ನಿದ್ರಾಭಂಗದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗುವುದು
- ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ಅವಕಾಶ ಇರುತ್ತದೆ
- ಬಂಧುಗಳಿಂದ ಕೆಲವು ವಿಚಾರದಲ್ಲಿ ಸಹಕಾರ ಸಿಗಲಿದೆ
- ಮಾನಸಿಕವಾಗಿ ಯಾವುದೇ ರೀತಿಯ ಗೊಂದಲಗಳು ಬೇಡ
- ನಿಮ್ಮ ನಿರ್ಧಾರಗಳು ಅಂತಿಮವಾಗಿದ್ದರೆ ನಿಮಗೆ ಒಳ್ಳೆಯದು
- ರಾಹು ಮತ್ತು ಸುಬ್ರಹ್ಮಣ್ಯನಿಗೆ ಅರ್ಚನೆ ಮಾಡಿಸಿ
ವೃಶ್ಚಿಕ :
ಉತ್ತಮ ಧನಾಗಮದಿಂದ ಸಮಾಧಾನ, ಸಂತೋಷ ಆಗಲಿದೆ
- ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಿಂದ ಜಗಳ ಆಗುವ ಸಾಧ್ಯತೆ ಇದೆ
- ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆ ಉಂಟಾಗಬಹುದು
- ಕುಟುಂಬದ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ
- ಕೆಲಸವನ್ನು ಮುಂದೂಡುವ ಮನಸ್ಥಿತಿ ಕಾಣುವುದರಿಂದ ನಷ್ಟವಿದೆ
- ಧನಾತ್ಮಕವಾಗಿ ಚಿಂತಿಸಿ ಕಾರ್ಯಸಾಧನೆ ಮಾಡಿ ಶುಭವಿದೆ
- ಸೂರ್ಯನಾರಾಯಣನ ಪ್ರಾರ್ಥನೆ ಮಾಡಿ
ಧನುಸ್ಸು :
ಬಂಧುಗಳು ಮತ್ತು ಆತ್ಮೀಯರಿಂದ ಕಿರಿಕಿರಿಯಾಗಲಿದೆ
- ನವವಿವಾಹಿತರಿಗೆ ಭಯ, ಆತಂಕ ಉಂಟಾಗಬಹುದು
- ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಚಿಂತೆ ಇರಲಿದೆ
- ಯಾವುದೇ ನಿರ್ಧಾರಗಳು ನಿಮ್ಮ ಪರವಾಗಿ ಕೆಲಸ ಮಾಡುವುದಿಲ್ಲ
- ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ, ಸದುಪಯೋಗ ಮಾಡಿಕೊಳ್ಳಿ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಸಿಗಬಹುದು
- ಲಕ್ಷ್ಮೀ ನಾರಾಯಣನ ಸ್ತೋತ್ರ ಪಾರಾಯಣ ಮಾಡಿ
ಮಕರ :
ಇಂದು ಶುಭಯೋಗ ಪ್ರಾಪ್ತಿಯಾಗುವ ದಿವಸ
- ಕಾನೂನು ಬಾಹಿರ ಸಂಪಾದನೆಗೆ ಒಳಗಾಗುವುದು ಬೇಡ
- ಉತ್ತಮ ಸ್ನೇಹಿತರ ಪರಿಚಯವಾಗಬಹುದು
- ವೈಯಕ್ತಿಕ ಅಭಿವೃದ್ಧಿಗೆ ಸಾಲ ಮಾಡಬೇಕಾಗಬಹುದು
- ತಂದೆಯವರಿಗೆ ತುರ್ತು ಅನಾರೋಗ್ಯ ಕಾಡಬಹುದು
- ಧೈರ್ಯ ಮತ್ತು ಸಹನೆಯಿಂದ ಎಲ್ಲವನ್ನು ಎದುರಿಸಬೇಕಾಗಬಹುದು
- ಅರುಣಪ್ರಶ್ನ ಮಂತ್ರ ಪಾರಾಯಣ ಮಾಡಿ
ಕುಂಭ :
ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾಗಬಹುದು
- ನಿಮ್ಮಿಂದ ನೆರೆಹೊರೆಯವರಿಗೆ ತೊಂದರೆಯಾಗಬಹುದು
- ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು
- ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಹಿನ್ನಡೆಯ ಭಯ ಕಾಡಬಹುದು
- ವಿದ್ಯಾವಂತರ ಸಹವಾಸ ಮಾಡಿ, ವಿಷಯ ಸಂಗ್ರಹಣೆ ಮಾಡಿ
- ವಾಹನದಿಂದ ಅಪಘಾತದ ಸೂಚನೆಯಿದೆ ಜಾಗ್ರತೆವಹಿಸಿ
- ಕಾಳಿಕಾ ದೇವಿಯನ್ನು ಆರಾಧನೆ ಮಾಡಿ
ಮೀನಾ :
ಹಲವಾರು ವಿಚಾರಗಳಲ್ಲಿ ನಿಮ್ಮ ನಿರ್ಧಾರಕ್ಕೆ ಬಂಧುಗಳಿಂದ ಅವಮಾನ ಆಗಲಿದೆ
- ಮಾನಸಿಕ ಬೇಸರ, ಧೈವ ಚಿಂತನೆಯಿಂದ ಸಮಾಧಾನ ಆಗಲಿದೆ
- ಮನೆಯ ಹೆಣ್ಣು ಮಕ್ಕಳು ಅಥವಾ ಸಹೋದರಿಯರು ನಿಮಗೆ ಅನುಕೂಲ ಮಾಡುತ್ತಾರೆ
- ಆಸ್ತಿಯ ವಿಚಾರದಲ್ಲಿ ಸಂಧಾನದ ಮಾತುಕತೆ ನಡೆಯಬಹುದು
- ಆರ್ಥಿಕ ಸಂಕಷ್ಟ ನಿಮ್ಮನ್ನು ಬಾಧಿಸುತ್ತದೆ, ಗಮನಿಸಿ
- ಮನೆ,ಕಾರ್ಯಕ್ಷೇತ್ರ,ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಬೇಡಿ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post