ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಏಕದಿನ ಸರಣಿಯಲ್ಲಿ ಈಗಾಗಲೇ ಭಾರತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಮೊದಲ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ಗ್ಯಾಲರಿ ಫುಲ್ ಕುಳಿತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ನೋಡಿ ಸಂಭ್ರಮಿಸಿದರು. 2ನೇ ಮ್ಯಾಚ್ ನಾಳೆ ವಿಶಾಖಪಟ್ಟಣಂ ನಗರದಲ್ಲಿ ನಡೆಯಲಿದೆ. ಆದ್ರೆ ಈ ಮ್ಯಾಚ್ ನಡೆಯುವುದಕ್ಕೂ ಮೊದಲೇ 3ನೇ ಮ್ಯಾಚ್ನ ಒಂದು ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
3ನೇ ಏಕದಿನ ಪಂದ್ಯ ಮಾರ್ಚ್ 22 ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 13 ರಂದು ಆನ್ಲೈನ್ನಲ್ಲಿ ಟಿಕೆಟ್ಗೆ ಅವಕಾಶ ನೀಡಲಾಗಿತ್ತು. ಆನ್ಲೈನ್ನಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಈಗ ಕೇವಲ ಆಫ್ಲೈನ್ ಟಿಕೆಟ್ ಮಾತ್ರ ಸ್ಟೇಡಿಯಂನಲ್ಲಿ ಇವತ್ತಿನಿಂದ ನೀಡಲಾಗುತ್ತಿದೆ. ಅಭಿಮಾನಿಗಳು ಮಧ್ಯೆ ರಾತ್ರಿಯೇ ಕಿಲೋ ಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಬೆಡ್ಶೀಟ್ ಸಮೇತ ಬಂದು ಅಲ್ಲಿಯೇ ನಿದ್ದೆ ಮಾಡಿ ಬೆಳಗಾಗುವರೆಗೆ ಕಾದಿದ್ದಾರೆ.
ಸ್ಟೇಡಿಯಂ ಮ್ಯಾನೆಜ್ಮೆಂಟ್ ಇವತ್ತು 11 ಗಂಟೆಯಿಂದ ಟಿಕೆಟ್ಗಳನ್ನ ನೀಡುತ್ತಿದೆ. ಒಬ್ಬರಿಗೆ 2 ಟಿಕೆಟ್ಗಳನ್ನ ನೀಡಲಾಗುತ್ತಿದ್ದು, ಒಂದು ಟಿಕೆಟ್ ಬೆಲೆ 1,200 ರೂಪಾಯಿ ಎಂದು ಹೇಳಲಾಗಿದೆ. ಬೆಳಗ್ಗೆ 11 ರಿಂದ ರಾತ್ರಿ 8:30ರವರೆಗೆ ಟಿಕೆಟ್ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
Massive crowd near Chepauk stadium, Chennai at 1:30AM for #INDvsAUS 3rd odi offline tickets craze towards cricket never ends for Indians 🔥 #ViratKohli #MSDhoni #Chennai #ChennaiRains #CSK #bolu #นิกกี้ก้อย #WBC準々決勝 #TREASURE_HELLOinJKT #ShadowAndBone #ShadowAndBone pic.twitter.com/4oz4xu31HK
— LOKESH (@lokesh_lucky__) March 17, 2023
Today's scenerio at MA Chidambaram Stadium, Chennai for IND vs AUS 3rd ODI match ticket. @BCCI @arjunkumar318 #INDvsAUS #ODI pic.twitter.com/A2GjJhesCg
— gunadat (@gunadat) March 18, 2023
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post