ಕೋಲಾರ: ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಮಹಾ ಸಂಗ್ರಾಮಕ್ಕೆ ಕಾಲ ಸನ್ನಿತವಾಗಿದೆ. ಮೇ 24ನೇ ತಾರೀಕಿನೊಳಗೆ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಹೀಗಾಗಿ ಸದ್ಯದಲ್ಲೇ ನಡೆಯಲಿರೋ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್, ಆಡಳಿತರೂಢ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಅದಕ್ಕಾಗಿ ಹಗಲು ರಾತ್ರಿಯೆನ್ನದೇ ಮೂರು ಪಕ್ಷಗಳ ರಾಜ್ಯ ನಾಯಕರು ಶ್ರಮಿಸುತ್ತಿದ್ದಾರೆ ಎಂದ ಅತಿಶಯೋಕ್ತಿ ಆಗಲಾರದು. ಹೀಗಿರುವಾಗ ಮತ್ತೊಮ್ಮೆ ಸಿಎಂ ಆಗಲು ಜೆಡಿಎಸ್ ವರಿಷ್ಠ ಎಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಅದರಲ್ಲೂ ತಾವು ಯಾವುದೇ ಕಾರಣಕ್ಕೂ ಸೋಲಬಾರದು ಎಂದು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಈ ಪೈಕಿ ಸಿದ್ದರಾಮಯ್ಯ ಕೇವಲ ಕೋಲಾರ ಮಾತ್ರವಲ್ಲ ಈಗ ವರುಣ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೋಲಾರದಿಂದ ನಿಲ್ಲಿ ಎಂದು ಪಂಥಾಹ್ವಾನ ನೀಡಿ ತನ್ನ ಸ್ಥಾನವನ್ನೇ ತ್ಯಾಗ ಮಾಡಿದ್ದ ಶಾಸಕ ಶ್ರೀನಿವಾಸಗೌಡ ಅವರು, ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂಬ ಕಾರಣಕ್ಕೆ ಬಹಿರಂಗವಾಗಿ ಮುನಿಸು ಹೊರಹಾಕಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಮಾತಾಡಿದ ಕೋಲಾರ ಶಾಸಕ ಶ್ರೀನಿವಾಸಗೌಡ, ಸಿದ್ದರಾಮಯ್ಯ ನಿಂತರೆ ಮಾತ್ರ ಕೆಲಸ ಮಾಡುತ್ತೇನೆ. ಇಲ್ಲದೆ ಹೋದಲ್ಲಿ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಅವರು ಕೋಲಾರದಿಂದ ಕಣಕ್ಕಿಳಿಯುವುದಾಗಿ ಹೇಳಿದ ಮೇಲೆಯೇ ನಾನು ರಾಜಕೀಯದಿಂದ ನಿವೃತ್ತಿಯಾಗೋ ನಿರ್ಧಾರ ಮಾಡಿದ್ದು. ಈಗ ನಾನು ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದರೆ ನನಗೆ ಬೇಸರ ಆಗುತ್ತದೆ ಎಂದಿದ್ದಾರೆ.
ಇದನ್ನು ಓದಿ: ಆರ್ಸಿಬಿಗೆ ಎದುರಾಯ್ತು ಅಗ್ನಿ ಪರೀಕ್ಷೆ; ಸ್ಮೃತಿ ಮಂದಾನ ಪಡೆ ಇಂದು ಗೆಲ್ಲಲೇಬೇಕು!
ರಾಜ್ಯಕ್ಕೆ ಕೆ.ಸಿ ರೆಡ್ಡಿ ಅವರನ್ನು ಮೊದಲನೇ ಮುಖ್ಯಮಂತ್ರಿಯಾಗಿ ನೀಡಿದ್ದು ಕೋಲಾರ. 2ನೇ ಮುಖ್ಯಮಂತ್ರಿ ಈ ಬಾರಿ ನೀಡೋಣ ಅಂದುಕೊಂಡಿದ್ದೆವು. ಅದಕ್ಕಾಗಿ ಸಿದ್ದರಾಮಯ್ಯ ಗೆಲುವಿಗೆ ಕೆಲಸ ಮಾಡಲು ಮುಂದಾಗಿದ್ದೆವು. ಈಗ ನೋಡಿದ್ರೆ ತಾನು ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಗೆಲುವು ಖಚಿತ. ಅವರು ಚುನಾವಣೆಗೆ ಇಲ್ಲಿಗೆ ಬರಲ್ಲ ಅಂದಮೇಲೆ ನಾನ್ಯಾಕೆ ಮಾತಾಡಲಿ. ಬೇಕಾದರೆ ಸಿದ್ದರಾಮಯ್ಯ ಅವರೇ ನನ್ನೊಂದಿಗೆ ಮಾತಾಡಲಿ. ನಾನು ಅವರಷ್ಟು ದೊಡ್ಡ ರಾಜಕಾರಣಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post