ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಕಬ್ಜ ಸಿನಿಮಾ ನಿನ್ನೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದೆ. ಉಪ್ಪಿ, ಶಿವಣ್ಣ, ಸುದೀಪ್ ಅಭಿನಯದಲ್ಲಿ ಆರ್ ಚಂದ್ರು ಌಕ್ಷನ್ ಕಟ್ ಹೇಳಿರೋ ಸಿನಿಮಾ ವಿಶ್ವದ ಚಿತ್ರರಂಗವನ್ನು ಕಬ್ಜ ಮಾಡೋಕೆ ಲಗ್ಗೆ ಇಟ್ಟಿದೆ.
ಕಬ್ಜ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಕಬ್ಜ ಸಿನಿಮಾ ಮೂಲಕ ಕನ್ನಡ ಮಾತ್ರವಲ್ಲದೇ ದೇಶದ ಚಿತ್ರರಂಗವನ್ನ ರಿಯಲ್ ಸ್ಟಾರ್ ಉಪ್ಪಿ ಕಬ್ಜ ಮಾಡೋಕೆ ಬಂದಿದ್ದಾರೆ. ನಟೋರಿಯಸ್ ಪಕ್ಕಾ ಔಟ್ ಌಂಡ್ ಔಟ್ ರಾ ಲುಕ್ನಲ್ಲಿ ಉಪ್ಪಿ ಥಿಯೇಟರ್ಗಳಿಗೆ ಲಗ್ಗೆ ಇಟ್ಟಿದ್ದಾರೆ.
50 ದೇಶಗಳು, 7 ಭಾಷೆಗಳಲ್ಲಿ ಕಬ್ಜ ಗ್ರ್ಯಾಂಡ್ ರಿಲೀಸ್
ರಿಯಲ್ ಸ್ಟಾರ್ ಉಪ್ಪಿ, ಹ್ಯಾಟ್ರಿಕ್ ಹೀರೋ ಶಿವಣ್ಣ, ಕಿಚ್ಚ ಸುದೀಪ್ ಹಾಗೂ ಶ್ರೀಯಾ ಅಭಿನಯದ ಆರ್ ಚಂದ್ರು ನಿರ್ದೇಶನದ ಕಬ್ಜಾ ಸಿನಿಮಾ ಇಂದು 50 ದೇಶಗಳಲ್ಲಿ 7 ಭಾಷೆಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಬರೋಬ್ಬರಿ 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಿದೆ. ಎಲ್ಲೆಂದರಲ್ಲಿ ಉಪ್ಪಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿದೆ.
ಸಿನಿಪ್ರೇಮಿಗಳ ‘ಕಬ್ಜ’.. ಉಪ್ಪಿ ಸಖತ್ ಖುಷ್
ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಕಬ್ಜ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಓಪನಿಂಗ್ ಸಿಕ್ಕಿದೆ. ಕರ್ನಾಟಕದಲ್ಲಿ 400 ಥಿಯೇಟರ್ಗಳಲ್ಲಿ ಸಿನಿಮಾ ತೆರೆ ಕಂಡಿದ್ದು ಥಿಯೇಟರ್ಗಳ ಬಳಿ ಉಪ್ಪಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ಬೆಂಗಳೂರಿನ ನರ್ತಕಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಪಟಾಕಿ ಸಿಡಿಸಿ, ತಮ್ಮ ನಾಯಕನ ಸಿನಿಮಾವನ್ನು ವೀಕ್ಷಿಸಿ ಬಹುಪರಾಕ್ ಹೇಳಿದ್ದಾರೆ. ನರ್ತಕಿ ಚಿತ್ರಮಂದಿರಕ್ಕೆ ನಟ ಉಪೇಂದ್ರ ಭೇಟಿ ಕೊಟ್ಟಿದ್ದು ರಿಯಲ್ಸ್ಟಾರ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಕಬ್ಜ ಚಿತ್ರಕ್ಕೆ ಸಿಕ್ಕ ಭರ್ಜರಿ ರೆಸ್ಪಾನ್ಸ್ಗೆ ನಿರ್ದೇಶಕ ಆರ್. ಚಂದ್ರು, ರಿಯಲ್ ಸ್ಟಾರ್ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸೂಪರ್ ಕ್ವೀನ್ಸ್ ತಂಡದ ಕನ್ನಡಿಗರಿಗೆ ಬ್ಯಾಡ್ನ್ಯೂಸ್..!
ಟ್ರೆಂಡ್ ಸೆಟ್ಟರ್ ಉಪೇಂದ್ರ, ಡಾನ್ ಅರ್ಕೇಶ್ವರನಾಗಿ ಮ್ಯಾಜಿಕ್ ಮಾಡಿದ್ದಾರೆ. ಡೆಡ್ಲಿ ಅಂಡ್ ಡೇರಿಂಗ್ ರೋಲ್ನಲ್ಲಿ ನೋಡುಗರ ಎದೆ ನಡುಗಿಸುತ್ತಾರೆ. ಪೈಲಟ್ ಹಾಗೂ ಡಾನ್ ಎರಡು ಶೇಡ್ಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಇನ್ನು ಪೊಲೀಸ್ ಕಾಪ್ ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಖದರ್ ಜೋರಿದೆ. ಅವರ ವಾಯ್ಸ್, ಆ ಅಧಿಕಾರದ ಗತ್ತು ನೆಕ್ಸ್ಟ್ ಲೆವೆಲ್ನಲ್ಲಿದೆ. ಕ್ಲೈಮ್ಯಾಕ್ಸ್ನಲ್ಲಿ ಕಿಕ್ ಕೊಡೋ ಶಿವಣ್ಣ ನೋಡುಗರನ್ನ ಸೀಟ್ ಅಂಚಿನಲ್ಲಿ ಕೂರಿಸ್ತಾರೆ.
ಕತ್ತಿಯಲ್ಲಿ ನೆತ್ತರು ಹರಿಸೋ ದೃಶ್ಯಗಳು ಆ್ಯಕ್ಷನ್ ಪ್ರಿಯರಿಗೆ ಹಬ್ಬ. ಕಥೆ, ಪಾತ್ರಗಳು, ಮೇಕಿಂಗ್ ಸೇರಿದಂತೆ ರೆಟ್ರೋ ಬ್ಯಾಕ್ಡ್ರಾಪ್. ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಆರ್ ಚಂದ್ರು. ರವಿ ಬಸ್ರೂರು ಮ್ಯೂಸಿಕ್ ಹಾಗೂ ಶಿವಕುಮಾರ್ ಆರ್ಟ್ ವರ್ಕ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ. ಒಟ್ಟಾರೆ ಮೆಕಿಂಗ್ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಲಿದ್ದು, ಇಡೀ ಭಾರತೀಯ ಚಿತ್ರರಂಗ ನೆನಪಿನಲ್ಲಿ ಇಟ್ಕೊಳ್ಳೋ ಅಂತಹ ಮೈಲಿಗಲ್ಲು ಸಿನಿಮಾ ಆಗಲಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post