ಕನ್ನಡದ ಮೂವರು ಸ್ಟಾರ್ಗಳ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ನಿನ್ನೆ ವಿಶ್ವದಾದ್ಯಂತ ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ಈ ಸಿನಿಮಾವನ್ನ ನೋಡಿದ ಅಭಿಮಾನಿಗಳು ಉಪೇಂದ್ರ, ಸುದೀಪ್ ಹಾಗೂ ಶಿವರಾಜಕುಮಾರ್ ಆ್ಯಕ್ಟಿಂಗ್ಗೆ ಫುಲ್ ಫಿದಾ ಆಗಿದ್ದಾರೆ. ಸದ್ಯ ಸ್ಕ್ರೀನ್ ಮೇಲೆ ಅಬ್ಬರಿಸುತ್ತಿರುವ ಕಬ್ಜ 2ನೇ ದಿನಕ್ಕೆ ಕಾಲಿಟ್ಟಿದ್ದು, ಬಾಕ್ಸ್ ಆಫೀಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಪ್ರಪಂಚದ್ಯಾಂತ ಮೊದಲ ದಿನದ ಕಲೆಕ್ಷನ್ 26 ಕೋಟಿ ರೂಪಾಯಿ. ವಿಶ್ವದೆಲ್ಲೆಡೆ 4 ಸಾವಿರ ಥಿಯೇಟರ್ಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆಯಾಗಿದ್ದು ಫುಲ್ ಪೈಸಾ ವಸೂಲ್ ಮಾಡುತ್ತಿದೆ. ಅಭಿಮಾನಿಗಳು ಕೂಡ ಸಿನಿಮಾ ಸೂಪರ್ ಆಗಿದೆ ಎಂದು ಹೇಳುವ ಮೂಲಕ ಸಿನಿಮಾ ಗೆಲುವಿಗೆ ಕಾರಣವಾಗಿದೆ.
ಸಿನಿಮಾದಲ್ಲಿ ಮೇನ್ ರೋಲ್ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯಿಸಿದ್ದಾರೆ. ಶ್ರೀಯಾ ಶರಣ್ ಹೀರೋಯಿನ್ ಆಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್, ಶಿವಕುಮಾರ್ ಆರ್ಟ್ ವರ್ಕ್ ಸ್ಟ್ರೆಂಥ್ ಕೊಡುತ್ತವೆ. ಒಟ್ಟಾರೆ ಕಬ್ಜ ಮೇಕಿಂಗ್ನಲ್ಲಿ ಹೊಸ ಇತಿಹಾಸ ಬರೆದಂತಾಗಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಚಿತ್ರಪ್ರೇಮಿಗಳೇ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post