ಅಮೃತ್ಸರ: ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಅವರನ್ನ ಪಂಜಾಬ್ ಪೊಲೀಸರು ಹೈಸ್ಪೀಡ್‌ನಲ್ಲಿ ಚೇಸ್ ಮಾಡಿ ಬಂಧಿಸಲು ಯತ್ನಿಸಿದ್ದಾರೆ. ಅಮೃತ್‌ಪಾಲ್ ಸಿಂಗ್ ಅವರನ್ನ ಅರೆಸ್ಟ್ ಮಾಡಲು ಹಲವು ದಿನಗಳಿಂದ ಪೊಲೀಸರು ಬಲೆ ಬೀಸಿದ್ದರು. ಇಂದು ಆಪರೇಷನ್ ಅಮೃತ್‌ಪಾಲ್ ಕಾರ್ಯಾಚರಣೆ ನಡೆಸಿ ಬಂಧಿಸೋ ಸಾಹಸಕ್ಕೆ ಮುಂದಾಗಿದ್ದರು.
ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್, ಪಂಜಾಬ್ ಪೊಲೀಸರಿಗೆ ಅತಿ ದೊಡ್ಡ ಸವಾಲಾಗಿದ್ದ. ಅಮೃತ್‌ಪಾಲ್ ಹಿಂಬಾಲಕರನ್ನ ಬಂಧಿಸಿದ್ರೆ ಆತನ ಬೆಂಬಲಿಗರೆಲ್ಲಾ ಖಡ್ಗ, ದೊಣ್ಣೆಗಳನ್ನ ಹಿಡಿದುಕೊಂಡು ಬೀದಿಗೆ ಇಳಿದು ಬಿಡುತ್ತಿದ್ರು. ಕಳೆದ ಒಂದು ತಿಂಗಳ ಹಿಂದಷ್ಟೇ ಅಂಜಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪಂಜಾಬ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ; ಖಡ್ಗ, ಬಂದೂಕು ಹಿಡಿದು ಬೀದಿಗಿಳಿದ ಖಲಿಸ್ತಾನ್ ಬೆಂಬಲಿಗರು; ಆಗಿದ್ದೇನು?
ಅಮೃತ್‌ಪಾಲ್ ಸಿಂಗ್ ಬೆಂಬಲಿಗರ ದಾಂಧಲೆಯಿಂದ ಹಲವು ಪೊಲೀಸರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸಿ ಅಮೃತ್ ಪಾಲ್ ಸಿಂಗ್ ಅವರನ್ನ ಬಂಧಿಸಲು ಮುಂದಾಗಿದ್ದಾರೆ. ಅಮೃತ್ ಪಾಲ್ ತನ್ನ ಬೆಂಬಲಿಗನ ಜೊತೆ ಕಾರಿನಲ್ಲಿ ಹೋಗುತ್ತಿದ್ದರು. ಆಗ ಹೈಸ್ಪೀಡ್‌ನಲ್ಲಿ ಕಾರು ಚೇಸ್ ಮಾಡಿದ ಪೊಲೀಸರು ಅಮೃತ್ ಪಾಲ್ ಸಿಂಗ್ ಬಂಧನಕ್ಕೆ ಯತ್ನಿಸಿದರು. ಈ ಚೇಸಿಂಗ್ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಮೃತ್ ಪಾಲ್ ಸಿಂಗ್ ಬಂಧನದ ಕಾರ್ಯಾಚರಣೆಯಿಂದ ಪಂಜಾಬ್‌ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಖಲಿಸ್ತಾನಿ ಬೆಂಬಲಿಗರು ಬೀದಿಗಿಳಿದಿದ್ದು ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಪಂಜಾಬ್‌ನಲ್ಲಿ ನಾಳೆವರೆಗೂ ಇಂಟರ್‌ನೆಟ್ ಸೇವೆಯನ್ನೇ ಬಂದ್ ಮಾಡಲಾಗಿದೆ.
BREAKING:#AmritpalSingh fleeing in an #SUV has asked his supporters to gather.
District Borders have been SEALED. Op Continues.pic.twitter.com/VWrFP7Wcxd
— The Analyzer (News Updates🗞️) (@Indian_Analyzer) March 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post