ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲಿಸಿದ ಬೆನ್ನಲ್ಲೇ ಮಂಡ್ಯ ರಾಜಕೀಯದ ದಿಕ್ಕು ಬದಲಾಗಿದೆ. ಮಂಡ್ಯದ ಮತ್ತೊಬ್ಬ ಪ್ರಭಾವಿ ರಾಜಕಾರಣಿಗೆ ಬಿಜೆಪಿ ಗಾಳ ಹಾಕಿರುವ ಸುಳಿವು ಸಿಕ್ಕಿದೆ.
ನಾಳೆ ಬೆಂಗಳೂರಿನಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಬೃಹತ್ ಸಭೆಯನ್ನ ಬಿಜೆಪಿ ಆಯೋಜಿಸಿದೆ. ಈ ಸಭೆಯಲ್ಲಿ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಬಿಜೆಪಿ ಸೇರ್ತಾರೆ ಅನ್ನೋ ಮಾತು ಕೇಳಿ ಬಂದಿದೆ. ಇದಕ್ಕೆ ಪೂರಕ ಎನ್ನುವಂತೆ ಎಲ್.ಆರ್ ಶಿವರಾಮೇಗೌಡರು ಕೂಡ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ಗಳನ್ನ ಹಾಕಿಕೊಂಡಿದ್ದಾರೆ.
ನಾಳೆ 10 ಗಂಟೆಗೆ ನಾಯಂಡಹಳ್ಳಿಯ ನಂದಿಲಿಂಕ್ ಗ್ರೌಂಡ್ಸ್‌ನಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಗಳೂರು ನಿವಾಸಿಗಳ ಬೃಹತ್ ಸ್ವಾಭಿಮಾನಿ ಸಭೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಚಿವರಾದ ವಿ. ಸೋಮಣ್ಣ, ಸುಧಾಕರ್, ಎಸ್.ಟಿ ಸೋಮಶೇಖರ್ ಅವರಿಗೆ ಆದರದ ಸ್ವಾಗತ ಕೋರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಇದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಬಿಜೆಪಿ ಸೇರ್ತಾರೆ ಅನ್ನೋ ಅನುಮಾನ ಹೆಚ್ಚುವಂತೆ ಮಾಡಿದೆ. ನಾಳೆ ನಡೆಯುವ ಬೃಹತ್ ಸಮಾವೇಶದಲ್ಲಿ ಶಿವರಾಮೇಗೌಡ ಬಿಜೆಪಿ ಸೇರುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ವಿಜಯೇಂದ್ರ, ಸುಮಲತಾ ನಡೆ ಮೇಲೆ ನಾರಾಯಣಗೌಡಗೆ ಆತಂಕ; ಅತಂತ್ರಕ್ಕೆ ಸಿಲುಕಿದ್ರಾ ಸಚಿವರು..?
ಜೆಡಿಎಸ್‌ನಿಂದ ಉಚ್ಛಾಟನೆ ಬಳಿಕ ಶಿವರಾಮೇಗೌಡರು ತಟಸ್ಥವಾಗಿದ್ದರು. ಪಕ್ಷೇತರವಾಗಿ ಸ್ಪರ್ಧೆ ಮಾಡ್ತೀನಿ ಎಂದು ಕ್ಷೇತ್ರದಾದ್ಯಂತ ಓಡಾಡ್ತಿದ್ದಾರೆ. ಇದೀಗ ಶಿವರಾಮೇಗೌಡರು ಮತ್ತೆ ಬಿಜೆಪಿ ಬಾಗಿಲು ತಟ್ಟುವ ಸಾಧ್ಯತೆಯಿದೆ. ನಾಗಮಂಗಲ ಕ್ಷೇತ್ರದಿಂದ ಶಿವರಾಮೇಗೌಡರನ್ನ ಬಿಜೆಪಿ ಅಭ್ಯರ್ಥಿ ಮಾಡಲು ತಯಾರಿ ನಡೆದಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post