ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗುತ್ತಲೇ ಇರುವ ಬಾಲಿವುಡ್ ಹಾಟ್ ಬ್ಯೂಟಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ಧರಿಸಿದ ದುಬಾರಿ ಸ್ಯಾಂಡಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನು ಓದಿ: ಆದಿಲ್ ಖಾನ್ ನನಗೆ ಜೈಲಿನಿಂದಲೇ ಮೆಸೇಜ್ ಮಾಡುತ್ತಿದ್ದಾನೆ ಎಂದ ರಾಖಿ ಸಾವಂತ್!
ಇತ್ತೀಚೆಗಷ್ಟೇ ಸಾವಂತ್ ಮೈಸೂರಿನ ಆದಿಲ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಕೆಲ ದಿನಗಳ ನಂತರ ಸಾವಂತ್ಗೆ ಮಾನಸಿಕ ಮತ್ತು ದೈಹಿಕವಾಗಿ ಪತಿ ಆದಿಲ್ ಖಾನ್ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದರು.
ಇದೇ ವಿಚಾರದಲ್ಲಿ ಅದಿಲ್ ಖಾನ್ನನ್ನ ಈಗಾಗಲೇ ಜೈಲಿಗೆ ಹಾಕಲಾಗಿದೆ. ಇದರ ಮಧ್ಯೆ ರಾಖಿ ಸಾವಂತ್ ದುಬೈನಲ್ಲಿ ನಟನೆ, ಡ್ಯಾನ್ಸ್ ಹೇಳಿಕೊಡುವ ಅಕಾಡೆಮಿ ಆರಂಭಿಸಿದ್ದಾರೆ.
ಸದ್ಯ ನಟಿ ರಾಖಿ ಸಾವಂತ್ ತಾವು ಧರಿಸಿದ ದುಬಾರಿ ಸ್ಯಾಂಡಲ್ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸುಮಾರು 80 ಸಾವಿರ ರೂಪಾಯಿ ಬೆಲೆ ಬಾಳುವ ಸ್ಯಾಂಡಲ್ ಅನ್ನು ಹಾಕಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಅದನ್ನು ನೋಡಿದ ಕ್ಯಾಮರಾ ಮ್ಯಾನ್ಗಳು ವಾವ್ ರಾಖಿ ಮೇಡಂ ಅಷ್ಟು ದುಬಾರಿಯ ಸ್ಯಾಂಡಲ್ ಧರಿಸಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post