ಟರ್ಕಿಯಲ್ಲಿ ಸಂಭವಿಸಿದ ಈ ಶತಮಾನದ ಭೂಕಂಪ 45 ಸಾವಿರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾಗಿದೆ. ಫೆಬ್ರವರಿ 6ರಂದು ಪ್ರಬಲ ಭೂಕಂಪ ಸಂಭವಿಸಿದಾಗ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಟರ್ಕಿಯ ನೆರವಿಗೆ ಧಾವಿಸಿ ಬಂದವು. ಕುಸಿದು ಬಿದ್ದ ಕಟ್ಟಡದಲ್ಲಿ ಸಿಲುಕಿರುವವರ ರಕ್ಷಣೆಗೆ ಸಾಕಷ್ಟು ಶ್ರಮಿಸಲಾಯಿತು.
ಭೂಕಂಪದ ರಕ್ಷಣಾ ಕಾರ್ಯಾಚರಣೆಯಲ್ಲಿ ರಷ್ಯಾ ರಕ್ಷಣಾ ತಂಡ ಟರ್ಕಿಗೆ ಹೋಗಿತ್ತು. ಈ ತಂಡದ ಸದಸ್ಯನೊಬ್ಬ ಭೂಕಂಪದಿಂದ ಕುಸಿದ ಮನೆಗಳಲ್ಲೂ ಕಳ್ಳತನ ಮಾಡಿದ್ದಾರೆ ಅನ್ನೋ ವಿಷಯ ಇದೀಗ ಬಯಲಾಗಿದೆ. ರಷ್ಯಾದ FSB ಅಧಿಕಾರಿಗಳು ಈ ಕಳ್ಳನ ಅಸಲಿ ಮುಖವಾಡ ಕಳಚಿದ್ದಾರೆ.
ರಕ್ಷಣಾ ತಂಡದ ಈ ಸದಸ್ಯ ಮನೆಯ ಅವಶೇಷಗಳಡಿ ಸಿಕ್ಕ ಅರ್ಧ ಮಿಲಿಯನ್ ಡಾಲರ್‌ನಷ್ಟು ಹಣವನ್ನ ಕದ್ದು ತಂದಿದ್ದಾನೆ. ಈ ವಿಷಯ ತಿಳಿದ ರಷ್ಯಾದ FSB ಅಧಿಕಾರಿಗಳು ಆತನ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಈ ದರೋಡೆಕೋರ ದಾಳಿಯಲ್ಲಿ ಸಿಕ್ಕಿ ಬೀಳದಂತೆ ತಪ್ಪಿಸಿಕೊಳ್ಳಲು ಕಿಟಕಿಯಿಂದ ಹಣ ಎಸೆದಿದ್ದಾನೆ. ಹೀಗೆ ಎಸೆದಾಗ ಅಪಾರ್ಟ್‌ಮೆಂಟ್ ಕೆಳಗೆ ಗರಿ, ಗರಿಯ ಡಾಲರ್ ನೋಟುಗಳು ಬಿದ್ದಿವೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅರೆಸ್ಟ್ ಆಗ್ತಾರಾ?; ಉಕ್ರೇನ್, ಅಮೆರಿಕಾ, ಚೀನಾದ ನಿರೀಕ್ಷೆಗಳೇನು?
📹 #Russia– A Russian rescue team member who worked in Türkiye after the earthquake stole nearly half a million dollars in euro, dollars from the debris.
Russian intell. FSB raided his apartment in Moscow.
He tried to throw the money from the window. pic.twitter.com/KapzsfWaGF— Mete Sohtaoğlu (@metesohtaoglu) March 18, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post