ಬೆಂಗಳೂರು: ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್ ತಡೆಯೊಡ್ಡಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಪ್ರಜಾಧ್ವನಿ ಯಾತ್ರಾ ಪ್ರವಾಸವನ್ನು ರದ್ದುಪಡಿಸಿದ್ದಾರೆ.ಇನ್ನು, ಇದೇ ತಿಂಗಳ 24ರಿಂದ ಏಪ್ರಿಲ್ 1 ತಾರೀಖಿನವರೆಗೆ ನಿಗದಿಯಾಗಿದ್ದ ಬಳ್ಳಾರಿ, ಕೊಪ್ಪಳ, ರಾಯಚೂರು, ಧಾರವಾಡ, ಉತ್ತರ ಕನ್ನಡ, ವಿಜಯನಗರ ಹಾಗೂ ಬಾಗಲಕೋಟೆ ಪ್ರಜಾಧ್ವನಿ ಯಾತ್ರಾ ಪ್ರವಾಸವನ್ನ ಸಿದ್ದರಾಮಯ್ಯ ರದ್ದುಗೊಳಿಸಿದ್ದಾರೆ. ಸದ್ಯ ಸಿದ್ದರಾಮಯ್ಯನವರ ಈ ದಿಢೀರ್ ನಿರ್ಧಾರದಿಂದ ಹಲವು ಗೊಂದಲಗಳು ಸೃಷ್ಠಿಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post