ರಾಜ್ಯ ವಿಧಾನಸಭಾ ಚುನಾವಣೆಗೆ 3 ಪಕ್ಷಗಳ ನಾಯಕರು ಸಕಲ ಸಿದ್ಧತೆ ನಡೆಸಿದ್ದಾರೆ. ಅಲ್ಲಲ್ಲಿ ಪಕ್ಷಾಂತರ ಚಟುವಟಿಕೆಗಳು ನಡೆಯುತ್ತಿವೆ. ರಾಜಕೀಯ ನಾಯಕರು ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನ ಸೇರುತ್ತಿದ್ದಾರೆ. ಇದೀಗ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆಂದು ಹೇಳಲಾಗುತ್ತಿದೆ. ಆದರೆ ಸಚಿವರು ಅತಂತ್ರಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರಿದ್ರೆ ಬಿ.ವೈ.ವಿಜಯೇಂದ್ರ ಅಡ್ಡಿಯಾಗುವ ಆತಂಕ ನಾರಾಯಣಗೌಡರನ್ನು ಕಾಡುತ್ತಿದೆಯಂತೆ. ಹೀಗಾಗಿ ಸದ್ಯ ಯಾವ ಪಕ್ಷದಲ್ಲಿದ್ದರೆ ಸೇಫ್ ಎನ್ನುವ ಆಲೋಚನೆಯಲ್ಲಿ ಸಚಿವರಿದ್ದಾರೆ. ಯಾಕಂದ್ರೆ ಕೆ.ಆರ್ ಪೇಟೆ ಉಪಚುನಾವಣೆ ಗೆಲುವಿನಲ್ಲಿ ವಿಜಯೇಂದ್ರ ತಂತ್ರಗಾರಿಕೆ ವರ್ಕೌಟ್ ಆಗಿತ್ತು. ಕ್ಷೇತ್ರದ ಗ್ರೌಂಡ್ ರಿಪೋರ್ಟ್ ವಿಜಯೇಂದ್ರಗೆ ಗೊತ್ತಿದೆ.
ಒಂದು ವೇಳೆ ಕಾಂಗ್ರೆಸ್ನಿಂದ ಕಣಕ್ಕಿಳಿದ್ರೆ, ಬೈ-ಎಲೆಕ್ಷನ್ ತಂತ್ರವನ್ನೇ ವಿಜಯೇಂದ್ರ ಬಳಸಿ ತಮ್ಮನ್ನು ಸೋಲಿಸಬಹುದು ಅಂತಾ ನಾರಾಯಣಗೌಡರಿಗೆ ಭಯ ಶುರುವಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಸಂಸದೆ ಸುಮಲತಾ ಕೂಡಾ ಬಿಜೆಪಿಗೆ ಬೆಂಬಲ ಘೋಷಿಸಿರೋದು ಸಚಿವರಿಗೆ ಗೊಂದಲ ಮೂಡಿಸಿದೆ ಅಂತಾ ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post