ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮುಂದಿನ ತಿಂಗಳು ಟೀಮ್ ಇಂಡಿಯಾ ಪ್ರಕಟಗೊಳ್ಳಲಿದೆ. ಶಿವ್ಸುಂದರ್ ದಾಸ್ ನೇತೃತ್ವದ ಸಮಿತಿ ತಂಡವನ್ನ ಆಯ್ಕೆ ಮಾಡಲಿದೆ. ಕನ್ನಡಿಗ ಕೆಲ್ ರಾಹುಲ್ ಮತ್ತೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗ್ತಾರೆ ಎನ್ನಲಾಗ್ತಿದೆ.
ಆಸ್ಟ್ರೇಲಿಯಾ ಏಕದಿನ ಸರಣಿಗೆ ಅಲಭ್ಯರಾಗಿರೋ ಶ್ರೇಯಸ್ ಅಯ್ಯರ್ ಡಬ್ಲ್ಯುಟಿಸಿ ಟ್ರೋಫಿ ಆಡುವುದು ಅನುಮಾನ. ತಂಡ ಪ್ರಕಟಿಸಲು ಮಾರ್ಚ್ 7 ವರೆಗೆ ಗಡುವು ನೀಡಲಾಗಿದೆ.
ಇನ್ನು ಬದಲಾವಣೆಗೆ ಮಾರ್ಚ್ 22 ರ ತನಕ ಅವಕಾಶವಿದೆ. ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿ ಜೂನ್ 7 ರಿಂದ 11 ರ ತನಕ ಇಂಗ್ಲೆಂಡ್ನ ಓವಲ್ ಅಂಗಳಲ್ಲಿ ನಡೆಯಲಿದೆ. ಭಾರತ-ಆಸೀಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post