ಬೆಂಗಳೂರು: 8 ವರ್ಷಗಳ ಹಿಂದೆ ಸ್ವಂತ ತಮ್ಮನನ್ನೇ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಈಗ ಜಿಗಣಿ ಪೊಲೀಸ್ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗ್ಯಶ್ರೀ ಮತ್ತು ಶಿವಪುತ್ರ ಬಂಧಿತ ಆರೋಪಿಗಳು. ಲಿಂಗರಾಜ್ ಪೂಜಾರಿ ಕೊಲೆಯಾದ ಯುವಕ.
2015 ಆಗಸ್ಟ್ 11ರಂದು ಯುವಕನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರು. ಬಳಿಕ ಯಾರಿಗೂ ಸಿಗದಂತೆ ದೇಹದ ಭಾಗಗಳನ್ನು ಬೇರೆ ಬೇರೆ ಕಡೆ ಎಸೆದಿದ್ದರು. ಇದಾದ ನಂತರ ಮಹಾರಾಷ್ಟ್ರದ ನಾಸಿಕ್ಗೆ ಹೋಗಿ ತಲೆಮರೆಸಿಕೊಂಡಿದ್ದರು ಆರೋಪಿಗಳು. ಈಗ ಬರೋಬ್ಬರಿ 8 ವರ್ಷದ ಬಳಿಕ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರನ್ನು ಬೆಂಗಳೂರಿನ ಜಿಗಣಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮೂಲತಃ ವಿಜಯಪುರ ಜಿಲ್ಲೆಯವರು. ಬೆಂಗಳೂರು ಹೊರವಲಯ ಜಿಗಣಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಭಾಗ್ಯಶ್ರೀ ಮತ್ತು ಶಿವಪುತ್ರ ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಜೊತೆಗೆ ವಡೇರಮಂಚನ ಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಒಂದು ದಿನ ಇಲ್ಲಿಗೆ ಆರೋಪಿ ಭಾಗ್ಯಶ್ರೀಯ ತಮ್ಮ ಲಿಂಗರಾಜು ಆಗಮಿಸಿದ್ದ. ಭಾಗ್ಯಶ್ರೀ ಹಾಗೂ ಶಿವಪುತ್ರ ಇಬ್ಬರು ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವ ವಿಷಯ ತಿಳಿದ ಕೂಡಲೇ ಅಕ್ಕನ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ.
ಇದನ್ನು ಓದಿ: VIDEO: ಹೈಸ್ಪೀಡ್‌ನಲ್ಲಿ ಚೇಸ್ ಮಾಡಿದ ಪೊಲೀಸ್ರು; ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಅರೆಸ್ಟ್
ಈ ಇಬ್ಬರ ಪ್ರೀತಿಗೆ ಲಿಂಗರಾಜು ವಿರೋಧ ವ್ಯಕ್ತಪಡಿಸಿದಕ್ಕೆ ಪ್ರಿಯಕರ ಶಿವಪುತ್ರನ ಜೊತೆ ಸೇರಿ ಭಾಗ್ಯಶ್ರೀ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಬಳಿಕ ಆತನ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬ್ಯಾಗ್ನಲ್ಲಿ ತುಂಬಿಕೊಂಡು ಬೇರೆ ಬೇರೆ ಕಡೆ ಬಿಸಾಡಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳಿಗೆ ಕೆರೆಯಲ್ಲಿ ಮೃತ ಲಿಂಗರಾಜ್ ಪೂಜಾರಿ ಕಾಲು ಮಾತ್ರ ಪೊಲೀಸರಿಗೆ ಸಿಕ್ಕಿತ್ತು. ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ಇಬ್ಬರು ಆರೋಪಿಗಳು ಎಂಟು ವರ್ಷದಿಂದ ಹೆಸರು ಬದಲಿಸಿಕೊಂಡು ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಇದೀಗ ಈ ಖತರ್ನಾಕ್ ಆರೋಪಿಗಳು 8 ವರ್ಷಗಳ ಬಳಿಕ ಸಿ ರಿಪೋರ್ಟ್ ಮೂಲಕ ಜಿಗಣಿ ಪೊಲೀಸ್ ಅಧಿಕಾರಿಗಳ ಅಥಿತಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post