ವಾರಣಾಸಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಶಿ ವಿಶ್ವನಾಥನ ಪರಮಭಕ್ತ. ಕಾಶಿ ವಿಶ್ವನಾಥನ ಆರಾಧಿಸೋ ಯೋಗಿ ಆದಿತ್ಯನಾಥ್ ಅದೆಷ್ಟು ಬಾರಿ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದಾರೆ ಗೊತ್ತಾ. ಕಾಶಿ ವಿಶ್ವನಾಥನ ಸನ್ನಿಧಿಗೆ ಅತಿ ಹೆಚ್ಚು ಬಾರಿ ಭೇಟಿ ನೀಡುವ ಮೂಲಕ ಹೊಸ ದಾಖಲೆಗೂ ಸಿಎಂ ಯೋಗಿ ಪಾತ್ರರಾಗಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಕಳೆದ 6 ವರ್ಷಗಳಲ್ಲೇ 100 ಬಾರಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. 100 ಬಾರಿ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮೊದಲ ಉತ್ತರ ಪ್ರದೇಶ ಸಿಎಂ ಅನ್ನೋ ಕೀರ್ತಿಗೆ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ.
2017ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾತ್ ಪ್ರತಿ 21 ದಿನಕ್ಕೊಮ್ಮೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಬರುತ್ತಾರೆ. 2017ರಿಂದ 2022ರಲ್ಲೇ 74 ಬಾರಿ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದರು. ವಾರಣಾಸಿಯ ಕಾಲ ಭೈರವ ದೇವಸ್ಥಾನಕ್ಕೂ ಸಿಎಂ ಯೋಗಿ ಆದಿತ್ಯನಾಥ್ 100 ಬಾರಿ ಭೇಟಿ ಕೊಟ್ಟಿರೋದು ಅಷ್ಟೇ ವಿಶೇಷವಾಗಿದೆ.
ಇದನ್ನೂ ಓದಿ: VIDEO: ‘ನನಗೆ ಹೆದರಿ ಸಿದ್ದರಾಮಯ್ಯ ಓಡಿ ಹೋದ್ರು ಎಂದು ಜನ ಮಾತಾಡ್ತವ್ರೆ’- ವರ್ತೂರು ಪ್ರಕಾಶ್
ಸಿಎಂ ಯೋಗಿ ಆದಿತ್ಯನಾಥ್ 113ನೇ ಬಾರಿಗೆ ಇಂದು ವಾರಣಾಸಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಕಾಶಿ ವಿಶ್ವನಾಥ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹೊಸ ದಾಖಲೆ ಬರೆದಿದ್ದಾರೆ. ಪ್ರತಿ ಬಾರಿ ವಾರಣಾಸಿಗೆ ಭೇಟಿ ಕೊಟ್ಟಾಗ ಸಿಎಂ ಯೋಗಿ ಆದಿತ್ಯನಾಥ್, ನಗರದ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post