ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ರಾಜ್ಯಾದ್ಯಂತ ಚುನಾವಣಾ ಕಾವು ಹೆಚ್ಚುತ್ತಿದ್ದು, ಅಖಾಡ ಸಿದ್ಧವಾಗಿದೆ. ಚುನಾವಣಾ ಭರಾಟೆಯ ಮಧ್ಯೆ ಸಿಎಂ ಆಗೋ ಕನಸಿನಲ್ಲಿ ಹಲವು ನಾಯಕರಿದ್ದಾರೆ. ಪಟ್ಟಕ್ಕೆ ಏರೋರು ಯಾರು ಅನ್ನೋ ಕುತೂಹಲ ಜನರಲ್ಲೂ ಇದೆ.
ಯಾವುದೇ ಉನ್ನತ ಹುದ್ದೆ ಏರಲು ರಾಜಯೋಗ ಇರಬೇಕು ಅಂತಾರೆ. ಸಿಎಂ ಆಗೋ ಕನಸು ಹೊಂದಿರುವ ಯಾವ ನಾಯಕರಿಗೆ ರಾಜಯೋಗ ಇದೆ. ಈ ಬಗ್ಗೆ ನ್ಯೂಸ್ ಫಸ್ಟ್ನಲ್ಲಿ ‘ಸಿಂಹಾಸನ’ ಭವಿಷ್ಯ ಅನ್ನೋ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಸಿಂಹಾಸನ ಭವಿಷ್ಯ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ವಿದ್ವಾಂಸರಿಂದ 12 ಜನರ ಜಾತಕವನ್ನ ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಯಾರಿಗೆ ಜಾಸ್ತಿ ಇದೆ ಅನ್ನೋ ಕುತೂಹಲಕ್ಕೆ ಅವರೇ ಉತ್ತರಿಸಿದ್ದಾರೆ.
ಜ್ಯೋತಿಷ್ಯ ವಿದ್ವಾಂಸರು ಮತ್ತು ತಾಳೇಗರಿ ತಜ್ಞರಾದ ಡಾ. ಬೆಳವಾಡಿ ಹರೀಶ ಭಟ್ಟರು ಹೇಳುವ ಪ್ರಕಾರ ಈ ಬಾರಿ ಬಿಜೆಪಿಯ ನಾಯಕರಿಗೆ ಹೆಚ್ಚಿನ ಅವಕಾಶವಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ಆಗುವ ವ್ಯತ್ಯಾಸಗಳು. ರಾಜಕೀಯ ಒತ್ತಡಗಳು. ಹೈಕಮಾಂಡ್ ನಾಯಕರು ಕೊಡುವ ಜವಾಬ್ದಾರಿಗಳನ್ನ ಗಮನಿಸಬೇಕಾಗುತ್ತದೆ. ಪಕ್ಷದ ದೃಷ್ಟಿಯಿಂದಲೂ ಬಿಜೆಪಿ ಪಕ್ಷಕ್ಕೆ ಮತ್ತೊಂದು ಅವಕಾಶವಿದೆ ಎಂದಿದ್ದಾರೆ.
ಜ್ಯೋತಿಷ್ಯ ವಿದ್ವಾಂಸ ಶಂಕರ್ ಗಣೇಶ ಹೆಗಡೆ ಅವರು ಹೇಳುವಂತೆ ಹೆಚ್.ಡಿ ಕುಮಾರಸ್ವಾಮಿ ಅವರ ಜಾತಕ ಚೆನ್ನಾಗಿದೆ. ಡಿ.ಕೆ.ಶಿವಕುಮಾರ್ ಅವರಿಗೂ ಚೆನ್ನಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಅವಕಾಶವಿಲ್ಲ. ಸಿ.ಟಿ ರವಿ ಅವರು ಇನ್ನೂ ಹೆಚ್ಚು ದಿನಗಳ ಕಾಲ ಕಾಯಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೊಮ್ಮೆ ಸಿಎಂ ಆದರೂ ಆಶ್ಚರ್ಯವಿಲ್ಲ. ಇಷ್ಟು ಜನರನ್ನ ಹೊರತುಪಡಿಸಿ ಬೇರೆ ಯಾರು ಸಿಎಂ ಆಗುವುದು ಕಷ್ಟ ಎಂದಿದ್ದಾರೆ.
ಇದನ್ನು ಓದಿ: ಸೈಲೆಟ್ ಸುನೀಲ್ ಬೆನ್ನಲ್ಲೇ ಫೈಟರ್ ರವಿಗೆ ಶಾಕ್; ಶಿವರಾಮೇಗೌಡರಿಗೆ BJP ಟಿಕೆಟ್ ಫಿಕ್ಸ್!
ಜ್ಯೋತಿಷ್ಯ ವಿದ್ವಾಂಸ ಶ್ರೀರಾಮ ಜೋಷಿ ಅವರ ಪ್ರಕಾರ ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇಬ್ಬರಿಗೂ ಸಿಎಂ ಅಥವಾ ಡಿಸಿಎಂ ಆಗುವ ಯೋಗ ಚೆನ್ನಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಜಾತಕ ಕೂಡ ಅದ್ಭುತವಾಗಿದೆ. ಈ ಮೂರರಲ್ಲಿ ಒಬ್ಬರು ಖಂಡಿತ ಮುಖ್ಯಮಂತ್ರಿ ಆಗಬಹುದು ಎಂದು ಶ್ರೀರಾಮ ಜೋಶಿ ವಿಶ್ಲೇಷಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post