ಮನೆಗೆ ಕನ್ನ ಹಾಕಿ ಚಿನ್ನ-ಬೆಳ್ಳಿ ಕದಿಯುತ್ತಿದ್ದ ಕಳ್ಳರು ಇದೀಗ ಶ್ವಾನವನ್ನು ಬಿಟ್ಟಿಲ್ಲ. ದುಬಾರಿ ನಾಯಿ ಕಂಡ್ರೆಯಂತೂ ಬಿಸ್ಕೆಟ್ ಹಾಕಿ ಯಾಮಾರಿಸಿ ಕದ್ದೊಯ್ಯತ್ತಿದ್ದಾರೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಇಂತಹದ್ದೇ ಒಂದು ಸುದ್ದಿ ಹೊರಬಿದ್ದಿದೆ.
ಸಿಲಿಕಾನ್ ಸಿಟಿಯ ಪುಲಕೇಶಿ ನಗರ ಠಾಣಾ ವ್ಯಾಪ್ತಿಯ ಫ್ರೆಜರ್ ಟೌನ್ ನಲ್ಲಿ ಮನೆ ಮುಂದೆ ಆಡ್ತಿದ್ದ ಹಸ್ಕಿ ನಾಯಿಯನ್ನು ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ. ಜಿಯಾನ್ ಸೈಯದ್ ಎಂಬುವವರಿಗೆ ಸೇರಿದ ಶ್ವಾನವನ್ನು ಬಿಸ್ಕೆಟ್ ಹಾಕೋ ರೀತಿಯಲ್ಲಿ ಕೆರೆದು ಅಲ್ಲಿಂದ ಶ್ವಾನ ಸಮೇತ ಪರಾರಿಯಾಗಿದ್ದಾರೆ.
ಸಿಲಿಕಾನ್ ಸಿಟಿಯ ಪುಲಕೇಶಿ ನಗರ ಠಾಣಾ ವ್ಯಾಪ್ತಿಯ ಫ್ರೆಜರ್ ಟೌನ್ ನಲ್ಲಿ ಮನೆ ಮುಂದೆ ಆಡ್ತಿದ್ದ ಹಸ್ಕಿ ನಾಯಿಯನ್ನು ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ.#NewsFirstKannada #Dog pic.twitter.com/ukMaEbDlNx
— NewsFirst Kannada (@NewsFirstKan) March 19, 2023
ಸದ್ಯ ಖದೀಮರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶ್ವಾನ ಮಾಲೀಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮೇರೆಗೆ ಆ ದೃಶ್ಯವನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post