ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದಕ್ಕೆ ಮನೆ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಕಾಂಪೌಂಡ್ ತೆರವುಗೊಳಿಸುವ ವೇಳೆ ಮಹಿಳೆ ಅನ್ನೋದನ್ನು ಲೆಕ್ಕಿಸದೆ ಅವಾಚ್ಯ ಶಬ್ದಗಳಿಂದ ಬಿಜೆಪಿ ಮುಖಂಡ ನಿಂದನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ಬಿಜೆಪಿ ಮುಖಂಡನಿಗೆ ಕಪಾಳಮೊಕ್ಷ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಸದಸ್ಯ ಉಮೇಶ್ ಮಹಿಳೆಯಿಂದ ಕಪಾಳಮೋಕ್ಷಕ್ಕೆ ಒಳಗಾಗಿದ್ದಾರೆ. ಚಿಕ್ಕಗೊಲ್ಲರಹಟ್ಟಿ ರಂಗಮ್ಮ ಮನೆ ಕಾಂಪೌಂಡ್ ಧ್ವಂಸ ಮಾಡಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾರೆ.
ರಂಗಮ್ಮ ಹಾಗೂ ಪುತ್ರ ನವೀನ್ ಮೇಲೆ ಚಿಕ್ಕಗೊಲ್ಲರಹಟ್ಟಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಆರೋಪ ಕೇಳಿಬಂದಿತ್ತು. ಮೂರು ದಿನದ ಹಿಂದೆ ಮನೆಗೆ ನವೀನ್ ಕಾಂಪೌಂಡ್ ನಿರ್ಮಿಸಿದರಂತೆ.
ಪುತ್ರ ನವೀನ್ ಈ ಹಿಂದೆ ಬಿಜೆಪಿ ನಾಯಕ ಉಮೇಶ್ ಜೊತೆಗಿದ್ದರಂತೆ. ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡಿದ್ದ ಬಿಜೆಪಿ ನಾಯಕರು ಏಕಾಏಕಿ ಹೋಗಿ ಅಂಗನವಾಡಿ ಜಾಗದಲ್ಲಿದ್ದ ಮನೆಯ ಕಾಂಪೌಂಡ್ ತೆರವುಗೊಳಿಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ರಂಗಮ್ಮನ ಮೇಲೆ ಉಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.
ನಿಂದನೆಗಳಿಂದ ಆಕ್ರೋಶಗೊಂಡ ರಂಗಮ್ಮನಿಂದ ಜಿ. ಪಂ ಸದಸ್ಯ ರಮೇಶ್ ಕಪಾಳಮೋಕ್ಷಕ್ಕೆ ಎದುರಾಗಿದ್ದಾರೆ. ಬಳಿಕ ಉಮೇಶ್ ಅಂಡ್ ಟೀಂ ನಿಂದ ರಂಗಮ್ಮ ಹಾಗೂ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ರಂಗಮ್ಮ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post