ಬಿಸಿಲಿನ ಜ್ವಾಲೆಯಲ್ಲಿದ ಜನರಿಗೆ ಮಳೆಯ ಸಿಂಚನವಾಗಿದೆ. ರಾಜ್ಯದ ಹಲವೆಡೆ ಗುಡುಗು ಸಹಿತ ವರುಣದೇವ ಅಬ್ಬರಿಸಿದ್ದಾನೆ. ಇನ್ನು ಮೇಘರಾಜನ ಎಂಟ್ರಿಗೆ ನಗರದ ಜನ ಫುಲ್ ಖುಶ್ ಆದ್ರೆ. ಬೆಳೆ ಕಳೆದುಕೊಂಡ ರೈತರ ಪಾಡು ಹೇಳತೀರದಂತಾಗಿದೆ.
ಹಿಮದ ರಾಶಿಯಲ್ಲಿ ಆಟವಾಡುತ್ತಿರುವ ಜನ. ಬೀದರ್ನ ಗ್ರಾಮಗಳು ಕಾಶ್ಮೀರದಂತೆ ಭಾಸವಾಗುತ್ತಿವೆ. ಮಳೆಯಿಂದ ಬೆಳೆ ಕಾಪಾಡಿಕೊಳ್ಳಲು ಅನ್ನದಾತರು ಹರಸಾಹಸ ಪಟ್ಟಿದ್ದಾರೆ. ಮುಂಗಾರು ಪೂರ್ವ ಮಳೆ ಅವಾಂತರ ಸೃಷ್ಟಿಸಿದರಿಂದ ರೈತರಿಗೆ ಸಮಸ್ಯೆಯಾಗಿದೆ.
ರಣ ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನರಿಗೆ ಮಳೆರಾಯ ತಂಪನ್ನ ಎರೆದಿದ್ದಾನೆ. ಬಿಸಿಲ ಝಳದಿಂದ ಕಂಗೆಟ್ಟ ಜನತೆ ವರುಣನ ಸಿಂಚನದಿಂದ ಪುಳಕಿತರಾಗಿದ್ದಾರೆ. ಆದ್ರೆ ಹಲವೆಡೆ ಪೂರ್ವ ಮುಂಗಾರು ಮಳೆ ರೈತರನ್ನ ಕಂಗಾಲಾಗಿಸಿದೆ. ವರುಣನ ಕಡುಕೋಪ ಅನ್ನದಾತನನ್ನ ಬೀದಿಗೆ ತಳ್ಳಿದೆ.
ಆಲಿಕಲ್ಲು ಮಳೆ.. ಕಾಶ್ಮೀರದ್ದಂತಾದ ಬಿಸಿಲನಾಡು ಬೀದರ್
ಸದಾ ಬಿಸಿಲಿನ ತಾಪದಿಂದ ಬೆಂದು ಹೋಗಿದ್ದ ಬೀದರ್ ಜಿಲ್ಲೆಯ ಬಹುತೇಕ ಕಡೆ ಆಲಿಕಲ್ಲು ಮಳೆ ಆಗಿದೆ. ಆಲಿಕಲ್ಲು ಮಳೆ ಜಿಲ್ಲೆಯ ಜನರಿಗೆ ಕಾಶ್ಮೀರದ ಫೀಲ್ ಕೊಟ್ಟಿದೆ. ಹಿಮದ ಮಳೆಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗು ಆಡಿ ಸಂಭ್ರಮಿಸಿದ್ದಾರೆ.
ಭವಿಷ್ಯ ನಮ್ಮ ಲೈಫ್ನಲ್ಲಿ ಎಲ್ಲೂ ಈ ರೀತಿ ಬರ್ಫ್ ಎಲ್ಲು ನೋಡಿರಲಿಲ್ಲ. ಶಿಮ್ಲಾ, ಮನಾಲಿ, ಕುಲು, ಜಮ್ಮು ಕಾಶ್ಮೀರಗೆ ಹೋದರೆ ಸಾಕಷ್ಟು ಬರ್ಫ್ ಇರುತ್ತೆ ಎಂಜಾಯ್ ಮಾಡಬಹುದು ಎನ್ನುತ್ತಾರೆ. ಆದರೆ ನಮ್ಮ ಭಾಗದ ಜನರು ಅಲ್ಲಿಗೆ ಹೋಗಲು ಅವಕಾಶ ಸಿಗುತ್ತದೆಯೋ ಇಲ್ಲೊ ಗೊತ್ತಿಲ್ಲ. ಅಂತಹದೊಂದು ಪರಿಸರ ನೋಡೋಕೆ ನಮಗೆ ಇವತ್ತು ಇಲ್ಲಿ ಸಿಕ್ಕಿದೆ.
ಶಿವಲಿಂಗ ಹೆಗಡೆ, ಗ್ರಾಮಸ್ಥ
ಬಳ್ಳಾರಿಯಲ್ಲಿ ಒಣಮೆಣಸು ಬೆಳೆ ನೀರುಪಾಲು.. ಅನ್ನದಾತ ಕಂಗಾಲು
ಇನ್ನು ವರುಣ ಮಾಡಿದ ಅವಾಂತರದಿಂದ ಬಳ್ಳಾರಿಯ ಅನ್ನದಾತರು ಕಂಗೆಟ್ಟಿದ್ದಾರೆ. ಕುರುಗೋಡು ತಾಲೂಕಿನಲ್ಲಿ ಏಕಾಏಕಿ ಆಲಿಕಲ್ಲು ಮಳೆಯಿಂದ 80 ಅಧಿಕ ರೈತರ ಸಾವಿರಾರು ಕ್ವಿಂಟಲ್ ಒಣ ಮೆಣಸಿನಕಾಯಿ ನಾಶವಾಗಿದೆ.
ಮಂಡ್ಯದಲ್ಲಿ ವರುಣನ ಅಬ್ಬರ.. ಮರ ಬಿದ್ದು ರೈತ ಸಾವು
ಇನ್ನು, ಸಕ್ಕರೆ ನಾಡು ಮಂಡ್ಯದಲ್ಲಿ ಬಿರುಗಾಳಿ ಮಳೆಗೆ ದಿಢೀರ್ ಮರ ಬಿದ್ದು ರೈತ ಶಿವಲಿಂಗೇಗೌಡ ಎನ್ನುವರು ಸಾವನ್ನಪ್ಪಿದ್ದಾನೆ. ಮದ್ದೂರಿನ ಹಾಡ್ಲಿ ಗ್ರಾಮದಲ್ಲಿ ಮನೆಗೋಡೆ ಕುಸಿದು 19 ಕುರಿ, ಒಂದು ಹಸು ಸಾವನಪ್ಪಿವೆ. ಅಂಕನಹಳ್ಳಿಯಲ್ಲಿ ಲಕ್ಷಾಂತರ ಮೌಲ್ಯದ ರೇಷ್ಮೆ ಗೂಡುಗಳು ಹಾಳಾಗಿವೆ.
ಯಾದಗಿರಿಯಲ್ಲಿ ಮಳೆಯಾರ್ಭಟಕ್ಕೆ ಕೊಚ್ಚಿಹೋದ ರೈತರ ಬದುಕು
ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ಯಾದಗಿರಿ ಜಿಲ್ಲೆಯ ರೈತರು ಸಾಲಸೂಲ ಮಾಡಿ ಬೆಳೆದಿದ್ದ ಬೆಳೆ ನೀರಲ್ಲಿ ಕೊಚ್ಚಿ ಹೋಗಿದೆ. ಸಜ್ಜೆ, ಟೊಮ್ಯಾಟೊ, ಮೆಣಸಿನಕಾಯಿ, ಜೋಳದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
ರಾಜ್ಯದ ಹಲವೆಡೆ ಪೂರ್ವ ಮುಂಗಾರು ಮಳೆ ಹಲವು ಅವಾಂತರನೇ ಅವನ್ನೇ ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ವರುಣ ಎಷ್ಟು ಅದ್ವಾನ ಮಾಡಲಿದ್ದಾನೆ ಎನ್ನುವುದಕ್ಕೆ ಈಗಲೇ ಹಿಂಟ್ ಕೊಟ್ಟಂತೆ ಇದೆ ಅನಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post