ಬೆಳಗಾವಿಯ 18 ಕ್ಷೇತ್ರಗಳಲ್ಲಿ ಗೋಕಾಕ್, ಬೆಳಗಾವಿ ಗ್ರಾಮಾಂತರ ಹೊರತುಪಡಿಸಿ ಅತ್ಯಂತ ಕುತೂಹಲ ಕೆರಳಿಸಿದ್ದು ಕ್ಷೇತ್ರವೆಂದರೆ ಅದರು ಅಥಣೆ. ಅಥಣಿ ಬಿಜೆಪಿ ಟಿಕೆಟ್ಗಾಗಿ ಮಾಜಿ ಡಿಸಿಎಂ ಸವದಿ, ಹಾಲಿ ಶಾಸಕ ಕುಮಟಳ್ಳಿ ಮಧ್ಯೆ ಬಿಗ್ ಫೈಟ್ ನಡಿತಿದೆ. ನಿನ್ನೆ ಈ ಫೈಟ್ಗೆ ಸವದಿ ಹೊಸ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಿತ್ರಮಂಡಳಿಗೆ ಟಿಕೆಟ್ ಒಪ್ಪಿಸೋದು ಸಾಹುಕಾರ್ಗೆ ಸವಾಲಾಗಿದೆ. ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರ ರಣರಂಗ ಸೃಷ್ಟಿಸುವ ಸಾಧ್ಯತೆಯಿದೆ. ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಅಥಣಿ ಕ್ಷೇತ್ರವೊಂದೇ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಕೈಬಿಟ್ಟು ಬಂದ ಕುಮಟಳ್ಳಿ ಪರ ಗೋಕಾಕ್ ಸಾಹುಕಾರ್ ಗಟ್ಟಿಯಾಗಿ ನಿಂತಿದ್ದು, ಸವದಿಯನ್ನ ಕೆರಳಿಸುವಂತೆ ಮಾಡಿದೆ.
ಕುಮಟಳ್ಳಿ-ಜಾರಕಿಹೊಳಿಗೆ ಟಾಂಗ್ ಕೊಟ್ಟ ಲಕ್ಷ್ಮಣ ಸವದಿ!
ಲಕ್ಷ್ಮಣ ಸವದಿ. ಬಿಜೆಪಿ ಪಾಲಿನ ಲಕ್ಕಿ ಮ್ಯಾನ್. ಅಥಣಿಯಲ್ಲಿ ಸೋತರು ರಾಜ್ಯದ ಡಿಸಿಎಂ ಆಗಿ ಗೂಟದ ಕಾರು ಹತ್ತಿದ ನಾಯಕ. ಈಗ ಮತ್ತದೇ ಅಥಣಿ ಕ್ಷೇತ್ರದ ಟಿಕೆಟ್ಗಾಗಿ ಪಟ್ಟು ಹಿಡಿದು ಠಿಕಾಣಿ ಹೂಡಿದ್ದಾರೆ. ಬೆಳಗಾವಿಯ ಕಿಡಿ ಆರಿಸಲು ಸಂಧಾನಗಳು ಅದೆಷ್ಟೇ ನಡೆದ್ರೂ ಫಲ ಕೊಟ್ಟಿಲ್ಲ. ಸದ್ಯ ಲಕ್ಷ್ಮಣ ಸವದಿ ಮಾತ್ರ ಟಿಕೆಟ್ಗಾಗಿ ಸಮುದಾಯಗಳ ಸಮಾವೇಶದ ಮೊರೆ ಹೋಗಿದ್ದಾರೆ.
ಚುನಾವಣೆ ಸ್ಪರ್ಧೆ ಬಗ್ಗೆ ಡೆಡ್ಲೈನ್ ಇಟ್ಟ ಲಕ್ಷ್ಮಣ ಸವದಿ
ಅಥಣಿ ಪಟ್ಟಣದಲ್ಲಿ ನಿನ್ನೆ ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸವದಿ, ನಾನು ಮನೆಯಲ್ಲಿ ಸುಮನ್ನೇ ಕುಳಿತಿದ್ದೆ, ಆದರೆ ಕೆಲವರು ನನ್ನನ್ನು ಕುರುಲು ಬಿಡುತ್ತಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಅಂತ ಪರೋಕ್ಷವಾಗಿ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಟಿಕೆಟ್ ವಾರ್ಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಚೆಕ್ಮೆಟ್ ಇಟ್ಟಿದ್ದಾರೆ.
ಇನ್ನು, ಸಮಾವೇಶದ ಬಳಿಕ ಮಾತನಾಡಿದ ಸವದಿ, ಚುನಾವಣೆಗೆ ಸ್ಪರ್ಧಿಸುವುದೊ ಇಲ್ಲವೊ ಅನ್ನೋದು ಮಾರ್ಚ್ 27ರ ಬಳಿಕ ನಿರ್ಧಾರ ಎಂದಿದ್ದಾರೆ. ಅಲ್ಲಿವರೆಗೆ ಕ್ಷೇತ್ರದ ಎಲ್ಲಾ ಸಮುದಾಯಗಳ ಸಭೆ ನಡೆಸೋದಾಗಿ ಹೇಳಿದ್ದು, ಹೈಕಮಾಂಡ್ ಟಿಕೆಟ್ ನೀಡಿದ್ರೆ ಸ್ಪರ್ಧೆ ಎಂದಿದ್ದಾರೆ. ಆದ್ರೆ, ಟಿಕೆಟ್ ಇಲ್ಲ ಅಂದ್ರೆ ಮುಂದೇನು ಅನ್ನೋ ಪ್ರಶ್ನೆಗೆ ಸದ್ಯ ಸವದಿ ಬಳಿ ಉತ್ತರ ಇದ್ದಂತಿಲ್ಲ.
ಒಟ್ಟಾರೆ, ಅಥಣಿ ಬಿಜೆಪಿ ಟಿಕೆಟ್ ವಿಚಾರವಾಗಿ ಸದ್ಯ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ನಡುವೆ ಅಂತರ್ಯುದ್ಧ ಶುರುವಾಗಿದ್ದು, ಸ್ವಪಕ್ಷದಲ್ಲಿ ಯಾರು ಅಭ್ಯರ್ಥಿ ಅನ್ನೋ ಗೊಂದಲ ಸೃಷ್ಟಿ ಆಗಿದೆ. ಅಷ್ಟಕ್ಕೂ ಹೈಕಮಾಂಡ್ ನಿರ್ಧಾರ ಏನು ಅನ್ನೋದು ಸದ್ಯಕ್ಕೆ ಮೂಡಿರುವ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post