ಯುಗಾದಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದ ಪ್ರಾರಂಭ ಎಂದೇ ಹೇಳಲಾಗುವ ಇದೇ ಯುಗಾದಿ, ರಾಜ್ಯ ಕಾಂಗ್ರೆಸ್ ಪಡೆಗೆ ಹೊಸ ಉತ್ಸಾಹ ತುಂಬಲು ಸಜ್ಜಾಗಿದೆ. 2023ರ ಮತಯುದ್ಧದ ಅಖಾಡದಲ್ಲಿ ಹೋರಾಡಲು ದೇಶದ ಹಳೆಯ ಪಾರ್ಟಿ, ತಮ್ಮ ಸೇನಾನಿಗಳ ಹೆಸರು ಅಂತಿಮ ಮಾಡಿದೆ.
ಮತ ಕುರುಕ್ಷೇತ್ರದಲ್ಲಿ ಹೋರಾಟಕ್ಕೆ ಸಜ್ಜಾದ ‘ಕೈ’ ಸೇನಾನಿಗಳು
ಮೊದಲ ಹಂತದಲ್ಲಿ 125 ಹುರಿಯಾಳುಗಳ ಹೆಸರು ಘೋಷಣೆ!?
ಅಳೆದು ತೂಗಿ, ಪಕ್ಕಾ ಲೆಕ್ಕಾ ಹಾಕಿಯೇ ಗೆಲ್ಲುವ ಕುದುರೆಗಳಿಗೆ ಈ ಬಾರಿ ಮತ ಕದನದ ಭೂಮಿಗೆ ಇಳಿಸಲಾಗ್ತಿದೆ.. ಶತ್ರು ಪಡೆಯ ಅಭ್ಯರ್ಥಿಯನ್ನ ಮತದಿಂದಲೇ ಸೋಲಿಸಿ, ಗೆದ್ದು ಬೀಗುವ ರಣಕಲಿಯನ್ನೇ ಕೈ ಕೋಟೆಯ ರಾಜರು ಸಿದ್ಧ ಪಡಿಸಿದ್ದಾರೆ.. ಮೇಲಿಂದ ಮೇಲೆ ಸಭೆಗಳು, ಅಭ್ಯರ್ಥಿ ಬಗ್ಗೆ ಅವಲೋಕನ ಮಾಡಿಯೇ ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಸೇನಾನಿಗಳನ್ನ ಆಯ್ಕೆ ಮಾಡಲಾಗಿದೆ. ಅದರಲ್ಲೂ ಮೊದಲ ಪಟ್ಟಿಯಲ್ಲಿ ಸುಮಾರು 125 ಹುರಿಯಾಳುಗಳ ಹೆಸರನ್ನ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅಂತಿಮಗೊಳಿಸಿದ್ದಾರೆ ಎನ್ನಲಾಗ್ತಿದೆ.
ಯುಗಾದಿ ದಿನ ಕಾಂಗ್ರೆಸ್‌ನ ಮೊದಲ ಟಿಕೆಟ್ ಪಟ್ಟಿ ರಿಲೀಸ್!
ರಾಜ್ಯ ಚುನಾವಣೆ ಅಖಾಡದಲ್ಲಿ ಧುಮುಕಿರೋ ದಳಪತಿಗಳು, ಭರ್ಜರಿ ಮತ ತಂತ್ರಗಳನ್ನ ಜಾರಿಗೊಳಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿ, ಮತಬೀಕ್ಷೆಗಿಳಿದಿದ್ದಾರೆ. ಮತ್ತೊಂದ್ಕಡೆ ಲೇಟಾದ್ರೂ ಲೇಟೆಸ್ಟ್ ಆಗಿ ಕುರುಕ್ಷೇತ್ರದ ನೆಲಕ್ಕೆ ಕಾಲಿಡ್ತಿರೋ ಕೈ ಪಡೆ, ಹಬ್ಬದ ದಿನವೇ ತಮ್ಮ ಹುರಿಯಾಳುಗಳ ಹೆಸರನ್ನ ಘೋಷಣೆ ಮಾಡಲು ಸಜ್ಜಾಗಿದೆ. ಇದೇ ಮಾರ್ಚ್ 22 ಅಂದ್ರೆ ಯುಗಾದಿ ದಿನವೇ ಕಾಂಗ್ರೆಸ್‌ನ ಮೊದಲ ಟಿಕೆಟ್ ಪಟ್ಟಿ ರಿಲೀಸ್ ಆಗೋಕೆ ಸಜ್ಜಾಗಿದೆ.
ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೈನಲ್ ಮಾಡಿದೆ. 3 ಗಂಟೆಗಳ ಕಾಲ ಸಭೆ ನಡೆಸಿ, ಗೆಲ್ಲುವ ಅಭ್ಯರ್ಥಿಗಳನ್ನ ಅಂತಿಮ ಮಾಡಿದೆ. ಅವರ ಹೆಸರುಗಳನ್ನ ಯುಗಾದಿ ದಿನ ಘೋಷಣೆ ಮಾಡೋದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ಗೆ ರೆಡಿಯಾಗ್ತಿದ್ದಂತೆ, ಹಾಲಿ ಶಾಸಕರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಈ ಬಾರಿಯ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ಕೊಡಲಾಗುತ್ತೆ ಎಂಬ ಸುದ್ದಿ, ಕೈ ಪಡಸಾಲೆಯಲ್ಲಿ ಸಿಕ್ಕಾಪಟ್ಟೆ ಗುಲ್ಲೆದಿತ್ತು. ಆದ್ರೆ ಈ ಅಂತೆ ಕಂತೆ ಸುದ್ದಿಗಳಿಗೆ ಕೆಪಿಸಿಸಿ ಸಾರಥಿ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್ ಹಂಚಿಕೆಯಲ್ಲಿ ಸಮಸ್ಯೆ ಇಲ್ಲ ಎಂದ ಡಿಕೆಶಿ
ಕಾಂಗ್ರೆಸ್ ಕೋಟೆಯ ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಅನ್ನೋದನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಹಾಲಿ ಶಾಸಕರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಹೈಕಮಾಂಡ್ ಅಂತಿಮಗೊಳಿಸಿರೋ ಸುಮಾರು 125 ಮಂದಿ ಕಾಂಗ್ರೆಸ್ ಹುರಿಯಾಳುಗಳಲ್ಲಿ ಅಲ್ ಮೋಸ್ಟ್ 81 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಅನ್ನೋದು ಹೇಳಲಾಗ್ತಿದೆ. ಅದನ್ನೇ ಡಿಕೆಶಿ ಕೂಡ ಒತ್ತಿ ಹೇಳಿದ್ದಾರೆ.. ಒಟ್ಟಾರೆ, ಗೆಲ್ಲುವ ಸೂತ್ರವನ್ನ ಅನ್ವಯಿಸಿ, ತಮ್ಮ ಸೇನಾನಿಯನ್ನ ಯುದ್ಧದ ಅಖಾಡಕ್ಕಿಳಿಸಲು ಕೈ ಪಡೆ ಸಜ್ಜಾಗಿದೆ.. ಆದ್ರೆ ಮೊದಲ ಪಟ್ಟಿ ಹೊರ ಬರ್ತಿದ್ದಂತೆ ಅಸಮಾಧಾನ ಬೇಗುದಿ ಯಾವ ಮಟ್ಟದಲ್ಲಿ ಹೊಗೆಯಾಡುತ್ತೆ ಅನ್ನೋದೇ ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post