ದೇಶಾದ್ಯಂತ ಕೋವಿಡ್-19 ಮಹಾಮಾರಿಯ ಅಬ್ಬರ ದಿಢೀರನೇ ಏರಿಕೆಯಾಗಿದೆ. 24 ಗಂಟೆಯಲ್ಲಿ 1,071 ಕೋವಿಡ್-19 ಹೊಸ ಕೇಸ್ ದಾಖಲಾಗಿದೆ. ಕಳೆದ 129 ದಿನಗಳ ಬಳಿಕ ದೇಶದಲ್ಲಿ ಕೊರೊನಾ ಸೋಂಕಿಗೆ ಸಿಲುಕಿದವರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಅನ್ವಯ 1,071 ಹೊಸ ಕೇಸ್‌ಗಳಿಂದಾಗಿ ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 5,915ಕ್ಕೆ ಏರಿಕೆಯಾಗಿದೆ. ಕೇರಳ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಅತಿ ಹೆಚ್ಚು ಕೊರೊನಾ ಕೇಸ್‌ಗಳು ದಾಖಲಾಗಿದೆ.
ಇತ್ತೀಚಿಗೆ ಕೊರೊನಾ ಸೋಂಕಿನಿಂದಾಗಿ ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಸತತ ಎರಡು ಸಾವು ಸಂಭವಿಸಿರೋದು ಆರೋಗ್ಯ ಇಲಾಖೆಯ ಚಿಂತೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 121 ಹೊಸ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿಯೂ 577 ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: Kantara 2: ಅಂತಾರಾಷ್ಟ್ರೀಯ ಭಾಷೆಯಲ್ಲಿ ಕಾಂತಾರ-2! ವಿಶ್ವದಾದ್ಯಂತ ಕನ್ನಡ ಕಂಪು ಸೂಸಲಿದ್ದಾರೆ ರಿಷಬ್ ಶೆಟ್ಟಿ
ಇತ್ತೀಚಿಗೆ H3N2 ವೈರಸ್ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿತ್ತು. ಇದೀಗ ಕೋವಿಡ್ ಏರಿಕೆಗೆ XBB 1.16 ಉಪತಳಿಯೇ ಕಾರಣವಾಗುತ್ತಿದೆ. ಬದಲಾದ ವಾತಾವರಣದ ಜೊತೆಗೆ ಶೀತ, ಕೆಮ್ಮು ಹೆಚ್ಚಳವಾಗುತ್ತಿದೆ. ವ್ಯಾಪಕವಾಗಿ ಏರಿಕೆಯಾಗುತ್ತಿರುವ ಸಕ್ರಿಯ ಪ್ರಕರಣಗಳಿಂದಾಗಿ ಮತ್ತೊಂದು ಕೋವಿಡ್ ಅಲೆಗೆ ಭಾರತ ಸಾಕ್ಷಿಯಾಗುತ್ತಾ ಅನ್ನೋ ಆತಂಕ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post