ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಕಷ್ಟ ಕಷ್ಟ. ಹೀಗೆ ಕಾಂಗ್ರೆಸ್ ಹೈ ಕಮಾಂಡ್ ಏನೋ ಮಾಜಿ ಸಿಎಂಗೆ ಸಲಹೆ ಕೊಟ್ಟಿದೆ. ಆದ್ರೆ, ಈ ಮಾತನ್ನ ಸಿದ್ದರಾಮಯ್ಯಗೆ ಅರಗಿಸಿಕೊಳ್ಳೋದು ಅಸಾಧ್ಯವಾಗಿದೆ. ಒಳಗೊಳಗೆ ಬೇಸರವನ್ನ ಅಡಗಿಸಿಟ್ಟುಕೊಂಡಿದ್ದಾರೆ. ದೆಹಲಿಗೆ ಹೋಗಿ ಬಂದ್ಮೇಲೆ ಚಿನ್ನದಂಥ ಕ್ಷೇತ್ರ ‘ಕೈ’ ತಪ್ಪುವ ಆತಂಕದಲ್ಲಿ ಫುಲ್ ಅಪ್‌ಸೆಟ್ ಆಗಿದ್ದಾರೆ. ಬೆಂಗಳೂರಿಗೆ ಬದಾಮಿ ದೂರ. ಕೋಲಾರ ಹತ್ತಿರ ಅಂತಾ ಸಿದ್ದರಾಮಯ್ಯ ಚಿನ್ನದ ನಾಡಿನಿಂದ ಸ್ಪರ್ಧಿಸೋ ನಿರ್ಧಾರ ಮಾಡಿದ್ರು. ಬಂಗಾರದ ಗಣಿಯಲ್ಲಿ ಗೆಲುವಿನ ರಣತಂತ್ರ ರೂಪಿಸಿದ್ರು. ಆದ್ರೆ, ನಿನ್ನೆ ನಡೆದ ಸಿಇಸಿ ಸಭೆ ಸಿದ್ದರಾಮಯ್ಯಗೆ ಬೇಸರದ ಕಾರ್ಮೋಡ ಕವಿಯುವಂತೆ ಮಾಡಿದೆ.
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಡೌಟ್!
‘ಹೈ’ ಕಮಾಂಡ್ ಮೇಲೆ ಭಾರ ಹಾಕಿ ಸಿದ್ದು ಅಪ್‌ಸೆಟ್!
ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆಕಾಂಕ್ಷಿಗಳು ಹಾಕಿದ್ದ ಭಾರವನ್ನ ಇಳಿಸಿ ರಾಜ್ಯಕ್ಕೆ ಮರಳಿದ್ದಾರೆ. ಆದ್ರೆ, ಸಿದ್ದರಾಮಯ್ಯಗೆ ದೆಹಲಿಯಾತ್ರೆ ಖುಷಿಗಿಂತ ಬೇಸರವನನ್ನ ತರಿಸಿದೆ. ತಮ್ಮ ಚುನಾವಣಾ ಭವಿಷ್ಯವನ್ನೇ ಅತಂತ್ರ ಮಾಡಿದೆ. ಇದು ಸಿದ್ದರಾಮಯ್ಯರ ಅಂತರಾಳವನ್ನ ಭಾರವಾಗಿಸಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ. ಅವರು ಹೇಳಿದಲ್ಲಿ ಸ್ಪರ್ಧಿಸ್ತೇನೆ ಎಂಬ ಬೇಸರ ಮಾತುಗಳನ್ನಾಡುವಂತೆ ಮಾಡಿದೆ. ಕೋಲಾರದಲ್ಲಿ ಸ್ಪರ್ಧಿಸೋ ನಿರ್ಧಾರ ಮಾಡಿದ್ದ ಸಿದ್ದರಾಮಯ್ಯ ಅಲ್ಲಿಯೇ ಮನೆಯನ್ನೂ ನೋಡಿದ್ರು. ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ವಾಸ್ತವ್ಯ ಹೂಡಲು ಸೂರೊಂದನ್ನ ಫೈನಲ್ ಮಾಡಿದ್ರು. ಆದ್ರೀಗ ಕೋಲಾರದ ಟಿಕೆಟ್ ಸಿಗೋದೆ ಅನುಮಾನವಿದ್ದು, ಮನೆ ಮಾಡೋದು ಮುಗಿದ ಅಧ್ಯಾಯವಾಗಿದೆ. ಅಷ್ಟಕ್ಕೂ ಸಿದ್ದರಾಮಯ್ಯರ ಈ ಪರಿ ಬೇಸರಕ್ಕೂ ಹಲವು ಕಾರಣಗಳಿವೆ. ಸ್ವಪಕ್ಷೀಯರ ವಿರುದ್ಧ ಒಳಗೊಳಗೆ ಕೋಪ-ತಾಪವೂ ಇದೆ.
ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ತೀವ್ರ ಆಸಕ್ತಿ ಹೊಂದಿದ್ರು. ಕೋಲಾರ ನಾಯಕರು, ಜನರ ಅಭಿಪ್ರಾಯ ಆಲಿಸಿ, ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಗೆಲ್ಲುವ ವಿಶ್ವಾಸದಲ್ಲಿದ್ರು. ಆದ್ರೆ, ವರಿಷ್ಠರು ದಿಢೀರನೇ ಕೋಲಾರ ಬೇಡ ಎಂದಿದ್ದಕ್ಕೆ ಸಿದ್ದು ಬೇಸರಗೊಂಡಿದ್ದಾರೆ. ಕೋಲಾರ ಕ್ಷೇತ್ರದ ಸ್ಪರ್ಧೆಗೆ ತಡೆ ನೀಡಿದ್ದಾರೆಂದು ಅಸಮಾಧಾನಗೊಂಡಿದ್ದಾರೆ. ಅಲ್ಲದೇ ಸ್ವಪಕ್ಷದ ನಾಯಕರೇ ಕೋಲಾರ ಸ್ಪರ್ಧೆಗೆ ಬ್ರೇಕ್ ಹಾಕಿಸಿದ್ದಾರೆ. ರಾಹುಲ್ ಗಾಂಧಿ ಮೂಲಕ ಅಡ್ಡಿಪಡಿಸಿದ್ದಾರೆ ಅಂತಾ ಅಪ್‌ಸೆಟ್ ಆಗಿದ್ದಾರೆ. ಪಕ್ಷದೊಳಗಿನ ಈ ಎಲ್ಲಾ ಬೆಳವಣಿಗೆಗಳಿಂದ ವಿಪಕ್ಷ ನಾಯಕರನ್ನ ದುಗುಡಕ್ಕೆ ತಳ್ಳಿದೆ.
ಇನ್ನೂ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ ಸಿದ್ದರಾಮಯ್ಯ ಮಾರ್ಚ್ 24ರಿಂದ ಏಪ್ರಿಲ್ 1ರವರೆಗೆ ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆ ರದ್ದುಗೊಳಿಸಿದ್ದಾರೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಧಾರವಾಡ, ಉತ್ತರ ಕನ್ನಡ, ವಿಜಯನಗರ, ಬಾಗಲಕೋಟೆ ಪ್ರವಾಸ ಕ್ಯಾನ್ಸಲ್ ಮಾಡಿದ್ದಾರೆ. ಒಟ್ಟಾರೆ, ಕೋಲಾರ ಕೈತಪ್ಪೋ ಸೂಚನೆಯಿಂದ ಸಿದ್ದು ಅಪ್‌ಸೆಟ್ ಆಗಿದ್ದಾರೆ. ಆದ್ರೆ, ಇವರ ಬೇಸರವನ್ನ ದೂರವಾಗಿಸಲು ಹೈ ಕಮಾಂಡ್ ಯಾವ ಮದ್ದು ಅರೆಯುತ್ತೆ ಅನ್ನೋದೆ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post