SS ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ RRR ಸಿನಿಮಾದ ನಾಟು ನಾಟು ಹವಾ ಇಡೀ ವಿಶ್ವವ್ಯಾಪಿ ಹಬ್ಬಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದುಕೊಂಡ ಬಳಿಕ ದೇಶ, ಭಾಷೆ ಗಡಿ, ಗುಡಿ ಲೆಕ್ಕಿಸದೆ ನಾಟು ನಾಟು ಅನ್ನುತ್ತಾ ಕುಣಿದ್ದಿದ್ದಾರೆ ಯೂನಿವರ್ಸೆಲ್ ಪ್ರೇಕ್ಷಕರು. ಈಗ ರಾಷ್ಟ್ರ ರಾಜಧಾನಿಯಲ್ಲಿ ಒಂದು ವಿಶೇಷ ವಿಡಿಯೋ ಅಂತರಾಷ್ಟ್ರಿಯ ಮಟ್ಟದಲ್ಲಿ ಸೌಂಡ್ ಆಗೋ ಹಾಗೆ ಹೊರಬಂದಿದೆ. ಶತಮಾನದ ಭವ್ಯ ಇತಿಹಾಸದಲ್ಲಿ ಆಸ್ಕರ್ ಪ್ರಶಸ್ತಿ ಪ್ರತಿಷ್ಠಿತ ಗರಿಮೆ. ಸಿನಿಮಾ ಮಂದಿಗೆ ಆಸ್ಕರ್ ಅನ್ನೋದು ಸಾಧನೆ ಹಿರಿಮೆ. ಇಂತಹ ಪ್ರಶಸ್ತಿ ಸುಂದರಿಯನ್ನ ಭಾರತೀಯ ಚಿತ್ರರಂಗಕ್ಕೆ ಮೊದಲ ಬಾರಿಗೆ ತಂದು ಕೊಟ್ಟಿರೋದು ತ್ರಿಬಲ್ ಆರ್ ತಂಡಕ್ಕೆ ಹೆಗ್ಗಳಿಕೆ ಸಲ್ಲುತ್ತದೆ.
ಎಮ್.ಎಮ್ ಕೀರವಾಣಿ ಸಂಗೀತ ಚಂದ್ರಬೋಸ್ ಸಾಹಿತ್ಯ ಪ್ರೇಮ್ ರಕ್ಷಿತ್ ನೃತ್ಯ ಕಲ್ಪನೆ, ರಾಹುಲ್ ಮತ್ತು ಕಾಲಬೈರವ ಹಾಡುಗಾರಿಯ ನಾಟು ನಾಟು ಹಾಡು ಇವತ್ತು ವಿಶ್ವವ್ಯಾಪಿ ಹಬ್ಬಿದೆ. ಸಣ್ಣವರಿಂದ ಹಿಡಿದು ದೊಡ್ಡವರ ತನಕ ನಾಟು ನಾಟು ಹಾಡಿಗೆ ತಲೆ ಆಡಿಸುತ್ತಾ, ಗೊತ್ತೋ ಗೊತ್ತಿಲ್ಲದನೋ ಕೈಕಾಲು ಕುಣಿಸುತ್ತಾರೆ. ಅಂಥಹ ಪವರ್ ಈ ಹಾಡಿಗಿದೆ. ವಿಶ್ವವ್ಯಾಪಿ ಹಬ್ಬಿರುವ ನಾಟು ನಾಟು ಹಾಡಿಗೆ ರೀಲ್ಸ್ ಲೋಕದಲ್ಲಂತು ಡಿಮ್ಯಾಂಡೋ ಡಿಮ್ಯಾಂಡ್. ಭಾರತೀಯರು ಅಲ್ಲದೆ ಅನ್ಯ ದೇಶದವರು ನಾಟು ನಾಟು ಹಾಡಿಗೆ ನಾಟ್ಯ ಮಾಡಿದ್ದಾರೆ. ವಿಶ್ವದ ಎಲ್ಲಾ ಸಂಗೀತ ಪ್ರಿಯರು ನಾಟು ನಾಟು ಹಾಡನ್ನ ಇಷ್ಟ ಪಟ್ಟಿದ್ದಾರೆ ಎನ್ನಬಹುದು.
ಇದನ್ನು ಓದಿ: ಕೋಚ್ ರಾಹುಲ್ ದ್ರಾವಿಡ್ ಬಿಗ್ ಪ್ಲಾನ್; ಇನ್ಮುಂದೆ ವಿರಾಟ್ ಕೊಹ್ಲಿ ಪ್ಲೇಸ್‌ಗೆ ಶುಭ್ಮನ್ ಗಿಲ್ ಖಾಯಂ?
ನಮ್ಮ ದೇಶದಲ್ಲಿರುವ ಇಂಡೋ-ಜರ್ಮನಿಯರು ಒಂದು ಕೈ ಮುಂದೆ ಹೋಗಿ ನಾಟು ನಾಟು ಹಾಡಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಬ್ ಸ್ಮಾಶ್ ಪರಿಕಲ್ಪನೆಯಲ್ಲಿ ಕುಣಿದಿರೋದು ಈಗ ವೈರಲ್ ಆಗ್ತಾ ಇದೆ. ದೆಹಲಿಯ ಚಾಂದಿನಿ ಚೌಕ್ ಏರಿಯಾದಲ್ಲಿ ಇಂಡೋ ಜರ್ಮನಿಯರು ನಾಟು ನಾಟು ಹಾಡಿಗೆ ಒಂದು ಸ್ಪೆಷನ್ ವಿಡಿಯೋ ಮಾಡಿ ಸೋಶಿಯಲ್ ಸಮುದ್ರಲ್ಲಿ ಈಗ ತೇಲಿ ಬಿಟ್ಟಿದ್ದಾರೆ.
ತ್ರಿಬಲ್ ಆರ್ ತಂಡಕ್ಕೆ ಇಂಡಿಯನ್ ಡ್ಯಾನ್ ಕಿಂಗ್ ಪ್ರಭುದೇವ ಅವರು ಒಂದು ವಿಶೇಷ ವಿಡಿಯೋಂದರ ಮೂಲಕ ವಿಶ್ ಮಾಡಿದ್ರು.. ಈಗ ಜರ್ಮನಿಯರು ಈ ವಿಶೇಷ ವಿಡಿಯೋ ಮೂಲಕ ಖುಷ್ ಮಾಡಿದ್ದಾರೆ.
Germans can't dance? Me & my Indo-German team celebrated #NaatuNaatu’s victory at #Oscar95 in Old Delhi. Ok, far from perfect. But fun!
Thanks @rokEmbIndia for inspiring us. Congratulations & welcome back @alwaysRamCharan & @RRRMovie team! #embassychallange is open. Who's next? pic.twitter.com/uthQq9Ez3V
— Dr Philipp Ackermann (@AmbAckermann) March 18, 2023
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post