ಮಂಡ್ಯ: ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ನಾಯಕರ ಮಾತಿನ ವರಸೆ ಬದಲಾಗಿದೆ. ಮಂಡ್ಯದ ರಣರಂಗದಲ್ಲಿ ವಾಗ್ಯುದ್ಧ ಸಂಘರ್ಷವಾಗಿ ಮಾರ್ಪಟ್ಟಿದೆ. ಮಳವಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನರೇಂದ್ರಸ್ವಾಮಿ, ಜೆಡಿಎಸ್ ವಿರುದ್ಧ ಪುಟ್ಗೋಸಿ ಪಕ್ಷ ಅನ್ನೋ ಶಬ್ಧ ಬಳಸಿದ್ದು ದಳಪತಿಗಳು ಕೆರಳಿ ಕೆಂಡವಾಗುವಂತೆ ಮಾಡಿದೆ.
ಅಧಿಕಾರಿಗಳ ಜೊತೆ ಮಾತನಾಡಿದ್ದ ನರೇಂದ್ರಸ್ವಾಮಿ, ನಮ್ಮದು ರಾಷ್ಟ್ರೀಯ ಪಕ್ಷ. ನಿಮ್ಮ ದುರಾಡಳಿತ, ದಬ್ಭಾಳಿಕೆಯನ್ನೆಲ್ಲಾ ನೋಡಿಕೊಂಡು ಕುಳಿತುಕೊಳ್ಳೋದಕ್ಕೆ ಅದ್ಯಾವುದೋ ಪುಟ್ಗೋಸಿ ಪಕ್ಷದವರಲ್ಲ ನಾವು ಎಂದಿದ್ದರು. ನರೇಂದ್ರಸ್ವಾಮಿ ಮಾತಾಡಿರೋ ಈ ವಿಡಿಯೋ ಮಂಡ್ಯದ ಮೂಲೆ, ಮೂಲೆಗೂ ವೈರಲ್ ಆಗಿತ್ತು.
ಜೆಡಿಎಸ್ ಪುಟ್ಗೋಸಿ ಪಕ್ಷ ಎಂಬ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲೇ ತಿರುಗೇಟು ಕೊಟ್ಟಿದ್ದಾರೆ. ಈ ಚುನಾವಣೆ ಆದ ಮೇಲೆ ಯಾವುದು ಪುಟ್ಗೋಸಿ ಪಕ್ಷ ಅಂತಾ ಜನ ಹೇಳ್ತಾರೆ. ಇವರೆಲ್ಲರನ್ನು ಜನ ಎಲ್ಲಿಗೆ ಕಳುಹಿಸ್ತಾರೆ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ. ಇನ್ನು ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡಲು ಕ್ಷೇತ್ರವೇ ಸಿಗ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕು ಎಂದು ಕ್ಲಿಯರ್ ಆಗಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರಾ. ಮೊದಲು ಅವರ ಪುಟ್ಗೋಸಿ ಹೇಗಿದೆ ಅಂತಾ ನೋಡಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಉರಿಗೌಡ- ನಂಜೇಗೌಡ ವಿವಾದಕ್ಕೆ ನಿರ್ಮಲಾನಂದ ಶ್ರೀ ಎಂಟ್ರಿ; ನಾಳೆ ಮಹತ್ವದ ನಿರ್ಧಾರ
ಪುಟ್ಗೋಸಿ ಪಕ್ಷ ಎಂದ ನರೇಂದ್ರ ಸ್ವಾಮಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಳವಳ್ಳಿ- ಮದ್ದೂರು ರಸ್ತೆ ತಡೆದು ಪುಟ್ಗೋಸಿ ಪಕ್ಷವೆಂಬ ಹೇಳಿಕೆ ವಾಪಸ್ ಪಡೆದು ಕ್ಷಮೆಯಾಚಿಸಲು ಒತ್ತಾಯಿಸಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರಗೊಂಡ ಮಾಜಿ ಸಚಿವ ನರೇಂದ್ರಸ್ವಾಮಿ ಎಚ್ಚೆತ್ತುಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ಷಮೆಯಾಚಿಸಿದ ನರೇಂದ್ರಸ್ವಾಮಿ, ನಾನು ಒಂದು ಪಕ್ಷದ ಹೆಸರು ಬಳಸಿಲ್ಲ. ಪಕ್ಷದ ಹೆಸರು ಬಳಸಿದ್ರೆ ನಾನು ತಲೆ ಬಾಗುತ್ತೇನೆ. ಆ ಸಂದರ್ಭದಲ್ಲಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡ್ತಿದ್ರು. ಆ ವೇಳೆ ಮಾತಿನ ಭರದಲ್ಲಿ ಮಾತನಾಡಿದ್ದೇನೆ. ಈ ಮಾತನ್ನು ನಾನು ಸುಳ್ಳು ಅನ್ನೋದಿಲ್ಲ. ಯಾರ ಮನಸ್ಸಿಗೆ ನೋವಾಗಿದ್ದರೆ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಅದಕ್ಕೆ ಅಂತ್ಯವಾಡುತ್ತಿದ್ದೇನೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post