ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಭಾನುವಾರ ಸಂಜೆ 4.30 ರಿಂದ 6:00 ರವರೆಗೆ ಇರಲಿದೆ.
ಮೇಷ :
- ಸಂಗೀತ, ನೃತ್ಯ, ಕಲಾಭಿಮಾನಿಗಳಿಗೆ ಉತ್ತಮ ಮಾನ್ಯತೆ, ಅವಕಾಶ,ಅನುಕೂಲ ಇರುವ ದಿನ
- ಅನಿರೀಕ್ಷಿತ ಧನಲಾಭ ಜೊತೆಗೆ ಕಾಲಾಹರಣ ಆಗುವುದು
- ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಹಲವು ಅನುಕೂಲತೆಗಳಾಗುತ್ತದೆ
- ವಿದ್ಯಾರ್ಥಿಗಳಿಗೆ ಕೆಲವು ಸಹಾಯದ ಭರವಸೆ ಸಿಗಲಿದೆ
- ಋಣಾತ್ಮಕವಾದ ಚಿಂತನೆಗಳು ಅಧಿಕವಾಗಿರುತ್ತದೆ
- ಸಹೋದರರಲ್ಲಿ ಕಲಹ ತಾರಕಕ್ಕೇರಬಹುದು
- ಗಣಪತಿ ಆರಾಧನೆ ಮಾಡಿ
ವೃಷಭ :
ಸಣ್ಣ ಪುಟ್ಟ ಸಮಸ್ಯೆಗಳಿಂದ ತೊಂದರೆಯಾಗಬಹುದು ಜಾಗ್ರತೆವಹಿಸಿ
- ಶುಭ ಕೆಲಸಕ್ಕೆ ಹಾಕಿದ್ದ ಯೋಜನೆಯಲ್ಲಿ ವ್ಯತ್ಯಯಗಳಾಗುವುದರಿಂದ ಮಾನಸಿಕ ನೋವು ಉಂಟಾಗಲಿದೆ
- ಇಂದು ಸಿನಿಮಾ ರಂಗದವರಿಗೆ ಉತ್ತಮ ದಿನ
- ಸಂಬಂಧಿಗಳಿಂದ ಧನ ಸಹಾಯ ದೊರೆಯಬಹುದು
- ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ ಭಯ ಬೇಡ
- ವಿದ್ಯಾರ್ಥಿಗಳು ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಿ ಶುಭವಿದೆ
- ಮೂಲದೇವರ ಪ್ರಾರ್ಥನೆ ಮಾಡಿ
ಮಿಥುನ :
ಕ್ರೀಡಾಪಟುಗಳಿಗೆ ಶುಭವಾರ್ತೆಯಿದೆ ಜಗಳ ಮಾಡಬೇಡಿ
- ಬರಹಗಾರರು,ವರದಿಗಾರರು ಎಚ್ಚರಿಕೆ ವಹಿಸಬೇಕಾಗುತ್ತದೆ
- ಮಕ್ಕಳಿಂದ ಶುಭವಾರ್ತೆ ಕೇಳುವ ಯೋಗವಿದೆ
- ಸರ್ಕಾರಿ ಸವಲತ್ತು ದೊರೆಯುವಲ್ಲಿ ಕೆಲವು ಅಡ್ಡಿಗಳಾಗಬಹುದು
- ಮನೆಯವರ ಸಹಕಾರ ನೆಮ್ಮದಿಯನ್ನು ಕೊಡುತ್ತದೆ
- ಅರ್ಥಿಕವಾಗಿ ಸಮಾಧಾನದ ಜೀವನ ನಿಮ್ಮದಾಗುತ್ತದೆ
- ಸೂರ್ಯದೇವನನ್ನು ಪ್ರಾರ್ಥನೆ ಮಾಡಿ
ಕಟಕ :
ನೀವು ಗುರಿ ಸಾಧಿಸಬೇಕಾದ ಕೆಲಸವನ್ನು ನಿರ್ಭೀತರಾಗಿ ಪೂರ್ಣಮಾಡಿ
- ಹೊಗಳಿಕೆಗೆ ಮರುಳಾಗಬೇಡಿ ಅಪಾಯವಿದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಥವಾ ಇಂಜಿನಿಯರ್ಸ್ಗೆ ಶುಭವಿದೆ
- ಪ್ರಾಮಾಣಿಕವಾದ ಪ್ರಯತ್ನಕ್ಕೆ ಸರಿಯಾದ ಗೌರವ ಸಲ್ಲುತ್ತದೆ
- ಅಪೇಕ್ಷಿತ ಆಸೆಗಳು ಈಡೇರುವ ಸುಸಮಯ
- ಮಕ್ಕಳ ಅಭ್ಯುದಯ ನೋಡಿ ತುಂಬಾ ಸಂತೋಷ ಪಡುತ್ತೀರಿ
- ನರಸಿಂಹಸ್ವಾಮಿಯನ್ನು ಪ್ರಾರ್ಥಿಸಿ
ಸಿಂಹ :
ಕಟ್ಟಡದ ನಿರ್ಮಾಣ ಅಥವಾ ದುರಸ್ತಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ದಿನ
- ಸರ್ಕಾರಿ ಕೆಲಸಗಳು ಸರಾಗವಾಗಿ ನಡೆಯಲಿವೆ
- ವಸ್ತು ಖರೀದಿಯಲ್ಲಿ ಸ್ವಲ್ಪ ಜಾಗ್ರತೆವಹಿಸಿ
- ಹಣ ಹೂಡಿಕೆಯನ್ನು ಮಾಡಬೇಕಾದರೆ ಹೆಚ್ಚಿನ ಗಮನವಹಿಸಿ
- ಕಮೀಶನ್ ಏಜೆಂಟ್ಸ್ಗಳಿಗೆ ಗಣನೀಯ ಲಾಭ,ಆದಾಯ ಕಾಣುವ ದಿನವಾಗಿದೆ
- ಯಾವುದೇ ಸಮಸ್ಯೆಗಳಿಗೆ ಸಿಲುಕಿಕೊಳ್ಳದ ಕೆಲಸಗಳನ್ನು ಮಾಡಿ
- ಆಂಜನೇಯಸ್ವಾಮಿಯ ಸ್ಮರಣೆ ಮಾಡಿ
ಕನ್ಯಾ :
ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ
- ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
- ಜಾಣ್ಮೆಯಿಂದ ಕೆಲಸ ನಿರ್ವಹಿಸಿ ನಾಟಕೀಯವಾಗಿ ವರ್ತಿಸಬೇಡಿ
- ವಿದ್ಯಾರ್ಥಿಗಳಿಗೆ ಪೋಷಕರಿಂದಲೇ ಹಿನ್ನಡೆಯಾಗುವ ಸಾಧ್ಯತೆ
- ಅವಿವಾಹಿತರಿಗೆ ವಿವಾಹ ವಿಚಾರ ಮುನ್ನಲೆಗೆ ಬರಬಹುದು
- ಸ್ವಯಂಕೃತ ಅಪರಾಧಗಳು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ ಗಮನಿಸಿ
- ದುರ್ಗಾದೇವಿ ಆರಾಧನೆ ಮಾಡಿ
ತುಲಾ :
ಆಧ್ಯಾತ್ಮಿಕ ಚಿಂತನೆಗಳು, ಹಲವಾರು ಸಾಧಕರ ಭೇಟಿ ಆಗಲಿದೆ
- ನಿದ್ರಾಭಂಗದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗುವುದು
- ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ಅವಕಾಶ ಇರುತ್ತದೆ
- ಬಂಧುಗಳಿಂದ ಕೆಲವು ವಿಚಾರದಲ್ಲಿ ಸಹಕಾರ ಸಿಗಲಿದೆ
- ಮಾನಸಿಕವಾಗಿ ಯಾವುದೇ ರೀತಿಯ ಗೊಂದಲಗಳು ಬೇಡ
- ನಿಮ್ಮ ನಿರ್ಧಾರಗಳು ಅಂತಿಮವಾಗಿದ್ದರೆ ನಿಮಗೆ ಒಳ್ಳೆಯದು
- ರಾಹು ಮತ್ತು ಸುಬ್ರಹ್ಮಣ್ಯನಿಗೆ ಅರ್ಚನೆ ಮಾಡಿಸಿ
ವೃಶ್ಚಿಕ :
ಬಂಧುಗಳಿಂದ ಮಾನಹಾನಿ,ಅವಮಾನ ಆಗುವುದರಿಂದ ಬೇಸರ ಆಗಲಿದೆ
- ಕುಟುಂಬದಲ್ಲಿ ಬೇರೆ ಬೇರೆ ತಿರುವುಗಳು ಉಂಟಾಗಬಹುದು
- ಸತಿಪತಿಗಳ ಅನ್ಯೋನ್ಯತೆಯಿದ್ದರೆ ಮಾತ್ರ ನೆಮ್ಮದಿ ಇರಲಿದೆ
- ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಪೋಷಕರು ಅವರಿಗೆ ಶುಭ ಹಾರೈಸಬೇಕು
- ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ
- ಹಲವಾರು ಸವಾಲುಗಳು ನಿಮಗೆ ಅಡ್ಡಿ ಅನಿಸಬಹುದು
- ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು :
ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಆತಂಕಬೇಡ
- ದೈವ ಚಿಂತನೆಯಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ
- ಬಂಧುಗಳು ನಿಮ್ಮ ಸಹಾಯಕ್ಕೆ ನಿಲ್ಲುವುದರಿಂದ ಸಮಾಧಾನ ಆಗಲಿದೆ
- ಶ್ರಮಕ್ಕೆ ತಕ್ಕ ಪ್ರತಿಫಲ ಅಪೇಕ್ಷಿಸಬಹುದು ದಿನ
- ಯಾರಿಗೂ ಯಾವ ಉಪದೇಶ ಮಾಡದಿರಿ ಒಳ್ಳೆಯದಾಗುತ್ತದೆ
- ನಿಮ್ಮ ರೀತಿ-ನೀತಿ,ನಿಯತ್ತು ನಿಮ್ಮನ್ನು ಕಾಪಾಡುವುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮಕರ :
ಬೇರೆಯವರ ಮಾತು ನಿಮಗೆ ಸಿಹಿ ಅನಿಸಿದರೂ ಅಪಾಯವಿದೆ
- ನಿಮ್ಮ ಶಕ್ತಿಮೀರಿ ಬೆಳೆಯಲು ಅವಕಾಶವಿದೆ
- ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ
- ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಬಹುದು ಜಾಗ್ರತೆವಹಿಸಿ
- ಕಾರ್ಮಿಕರ ಸಮಸ್ಯೆಯಿಂದ ನಿಮಗೆ ತೊಂದರೆಯಾಗಬಹುದು
- ಬಂಧುಗಳ ಜೊತೆ ಮಾತುಕತೆಯಿಂದ ವಿರಸ ಉಂಟಾಗಲಿದೆ
- ನವಗ್ರಹರ ಆರಾಧನೆ ಮಾಡಿ
ಕುಂಭ :
ಸೋಮಾರಿತನ,ಆಲಸ್ಯ ನಿಮಗೆ ತೊಂದರೆಗಳನ್ನುಂಟು ಮಾಡಬಹುದು
- ಬಂಧುಗಳು ಅಸಹಕಾರ ತೋರುತ್ತಾರೆಂಬ ಅಪನಂಬಿಕೆ ನಿಮ್ಮ ಮನಸ್ಸಲ್ಲಿರುತ್ತದೆ
- ಉದ್ಯೋಗದ ಬದಲಾವಣೆ ಲಾಭ ಮತ್ತು ಸಂತೋಷ ತರಬಹುದು
- ನ್ಯಾಯಯುತವಾದ ಹೋರಾಟಕ್ಕೆ ಜಯವಿದೆ ಮುಂದುವರೆಯಿರಿ
- ಅಕಾಲ ಭೊಜನದಿಂದ ಕೋಪ ಬರಲಿದೆ ಆಯಾಸವು ಆಗಲಿದೆ
- ಮಕ್ಕಳು,ಮನೆಯವರಿಂದ ಸ್ವಲ್ಪ ಸಮಾಧಾನ ಸಿಗುವುದು
- ತಾಪಸಮನ್ಯುವಿನ ಪ್ರಾರ್ಥನೆ ಮಾಡಿ
ಮೀನಾ :
ಆಧ್ಯಾತ್ಮಿಕ ಚಿಂತನೆಗಳು, ಧಾರ್ಮಿಕ ಭಾವನೆಗಳು ನಿಮಗೆ ಸಹಾಯ ಮಾಡಲಿದೆ
- ಸಹೋದರರ ಮಧ್ಯೆ ಸಾಮರಸ್ಯವಿರಲಿ
- ನಕಾರಾತ್ಮಕ ಯೋಚನೆಗಳಿಂದ ದೂರವಿರಿ
- ಬೇರೆಯವರ ಸಾಲದ ಜವಾಬ್ದಾರಿ ನಿಮ್ಮ ಹೆಗಲೇರಬಹುದು
- ನಿಮ್ಮ ಒಳ್ಳೆತನ ನಿಮ್ಮನ್ನು ಕಾಪಾಡಲಿದೆ
- ಇಂದು ಅತಿ ಕೋಪ ಅತಿ ಆಲಸ್ಯ ಯಾವುದೂ ಬೇಡ
- ಉಗ್ರನರಸಿಂಹಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post