ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಸದ್ಯ ಬಂಧನದ ಭೀತಿ ಎದುರಾಗಿದೆ. ಅಧಿಕಾರದ ಅವಧಿಯಲ್ಲಿ ಇಮ್ರಾನ್ ಮಾಡಿದ್ದ ಹಗರಣವೊಂದು ಸದ್ಯ ಅವರಿಗೆ ಉರುಳಾಗಿ ಪರಿಣಮಿಸಿದೆ. ಮೊದಲ ಬಾರಿ ಇಮ್ರಾನ್ರನ್ನ ಬಂಧನದಿಂದ ದೂರಮಾಡಿದ್ದ ಅಭಿಮಾನಿಗಳು ನಿನ್ನೆ ಹೈಡ್ರಾಮ ಸೃಷ್ಟಿಸಿ ರಕ್ಷಣೆ ಮಾಡಿದ್ದಾರೆ.
ಇಮ್ರಾನ್ ಪರ ಬೆಂಬಲಿಗರು, ಪಿಟಿಐ ಕಾರ್ಯಕರ್ತರು ರಸ್ತೆ ಮಧ್ಯೆ ಕೆಂಪು ಬಾವುಟ ಹಿಡಿದು ಘೋಷಣೆ ಕೂಗಿದ್ದಾರೆ. ಪೊಲೀಸರ ಮೇಲೆಯೇ ದಾಳಿ ಮಾಡಿದ್ದಾರೆ. ಮಾಜಿ ಪ್ರಧಾನಿ ಮನೆ ಮುಂದೆ ದೊಡ್ಡ ಹೈಡ್ರಾಮವೇ ನಡೆಯಿತು.
ತೋಷಖಾನ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿಗೆ ಬಂಧನ ಭೀತಿ
ತೋಷಖಾನ ಪ್ರಕರಣದಲ್ಲಿ ಆರೋಪಿಯಾಗಿರುವ ಇಮ್ರಾನ್ ಖಾನ್ ಬಂಧಿಸಲು ನಿನ್ನೆ ಲಾಹೋರ್ ಪೊಲೀಸರು ಜಮನ್ ಪಾರ್ಕ್ ರೆಸಿಡೆನ್ಸಿಯಲ್ಲಿರುವ ಅವರ ಮನೆ ಬಳಿ ತೆರಳಿದ್ದರು. ಆದ್ರೆ ಮನೆ ಬಳಿ ತೆರಳಿದ್ದ ಪೊಲೀಸರಿಗೆ ಬೀಗ ಜಡಿದಿದ್ದ ಗೇಟ್ ಸ್ವಾಗತಕೋರಿತ್ತು. ಇಲ್ಲೂ ಕೂಡ ಬುಲ್ಡೋಜರ್ ಅಬ್ಬರಿಸಿತ್ತು. ಕಾಂಪೌಂಡ್ ಒಡೆದು ಒಳ ನುಗ್ಗಿದ ಪೊಲೀಸರು ಮನೆ ಒಳಗೆ ಪ್ರವೇಶ ಮಾಡಲು ಯತ್ನಿಸಿದರು. ಈ ವೇಳೆ ಪೊಲೀಸರನ್ನ ಕೆಲ ಕಾರ್ಯಕರ್ತರು ತಡೆಯಲು ಮುಂದಾದ್ರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದರು. ಬಳಿಕ 30ಕ್ಕೂ ಅಧಿಕ ಪಿಟಿಐ ಕಾರ್ಯಕರ್ತರನ್ನ ಬಂಧಿಸಿದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದರು.
ಇಷ್ಟೆಲ್ಲಾ ಆದ ಬಳಿಕ ಇಮ್ರಾನ್ ಮನೆ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಅವರನ್ನ ಕಾರಿನ ಮೂಲಕ ಮನೆಯಿಂದ ಹೊರ ಕರೆದುಕೊಂಡು ಹೋದರು. ರಸ್ತೆಯಲ್ಲಿ ಬೃಹತ್ ಱಲಿ ನಡೆಸುವ ಮೂಲಕ ಹೂಮಳೆ ಸುರಿಸಿ ಇಮ್ರಾನ್ರನ್ನ ಸೇಫ್ ಆಗಿ ಇಸ್ಲಮಾಬಾದ್ಗೆ ಸೇರಿಸಿದರು.
ಇಮ್ರಾನ್ ಖಾನ್ ಬಂಧನಕ್ಕೆ 2ನೇ ಬಾರಿಗೆ ಫೀಲ್ಡಿಗಿಳಿದ ಪೊಲೀಸರು ಪ್ರತಿಭಟನೆ ಬಿಸಿಗೆ ಬರಿಗೈಯಲ್ಲಿ ವಾಪಸ್ಸಾಗಬೇಕಾಯ್ತು. ಬಂಧನಕ್ಕೊಳಗಾಗಿ ಜೈಲು ಹಕ್ಕಿಯಾಗಬೇಕಿದ್ದ ಇಮ್ರಾನ್ಗೆ 2ನೇ ಬಾರಿ ಅಭಿಮಾನಿಗಳು ರಕ್ಷಿಸಿಕೊಂಡ್ರು. 3ನೇ ಬಾರಿಯಾದ್ರು ಇಮ್ರಾನ್ ಖಾನ್ ಕೈಗೆ ಪೊಲೀಸರು ಕೋಳ ತೊಡಿಸ್ತಾರಾ? ಅಥವಾ ಸೆಪ್ಪು ಮೋರೆ ಹಾಕಿಕೊಂಡು ನಿನ್ನೆಯಂತೆ ವಾಪಸ್ ಆಗ್ತಾರಾ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post