ಭಾರತ, ಆಸ್ಟ್ರೇಲಿಯಾ ನಡುವಿನ 3 ಏಕದಿನ ಪಂದ್ಯಗಳ ಸರಣಿಯ 2ನೇ ಮ್ಯಾಚ್ ಇವತ್ತು ಆಂಧ್ರದ ವಿಶಾಖಪಟ್ಟಣಂನ ವೈ.ಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗಲಿದ್ದು, ಈಗಾಗಲೇ ಟೀಮ್ ಇಂಡಿಯಾ ಸರಣಿಯಲ್ಲಿ 1-0 ದಿಂದ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ ಭಾರತವಿದೆ. ಸದ್ಯ ಇವತ್ತಿನ ಪಂದ್ಯದಲ್ಲಿ ಯಾಱರು 11 ರ ಬಳಗದಲ್ಲಿದ್ದಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ವೈಯಕ್ತಿಕ ಕಾರಣದಿಂದ ಮೊದಲ ಪಂದ್ಯ ಆಡಿರಲಿಲ್ಲ. ಸದ್ಯ 2 ನೇ ಮ್ಯಾಚ್ಗೆ ಮರಳಿದ್ದು, ತಂಡಕ್ಕೆ ಆನೆ ಬಲ ಬಂದಂತಾಗಿದೆ. ಕಳೆದ ಮ್ಯಾಚ್ನಲ್ಲಿ ಬ್ಯಾಟಿಂಗ್ ವೈಫಲ್ಯ ಕಾಡಿತ್ತು. ಇಶಾನ್ ಕಿಶನ್, ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಕೆ.ಎಲ್ ರಾಹುಲ್ ಮತ್ತು ಆಲ್ ರೌಂಡರ್ ಜಡೇಜಾ ಆಟದಿಂದ ತಂಡ ಗೆಲುವಿನ ನಗೆ ಬೀರಿತ್ತು. ಇನ್ನು ಕ್ಯಾಪ್ಟನ್ ರೋಹಿತ್ ತಂಡಕ್ಕೆ ರಿಟರ್ನ್ ಆಗಿದ್ದರಿಂದ ಇಶಾನ್ ಕಿಶನ್ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.
ಮೊದಲ ಪಂದ್ಯದ ಬೌಲಿಂಗ್ ಲೈನ್ ಅನ್ನೇ ಈ ಪಂದ್ಯದಲ್ಲೂ ಮುಂದುವರಿಸುವ ಸಾಧ್ಯತೆ ಇದ್ದು ಸ್ಪಿನ್ ಬೌಲಿಂಗ್ನಲ್ಲಿ ಇನ್ನೊಬ್ಬರನ್ನು ಕಣಕ್ಕೆ ಇಳಿಸಬಹುದು. ಆಸೀಸ್ನ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡವನ್ನ ಸ್ಟಿವ್ ಸ್ಮಿತ್ ಸಾರಥ್ಯದಲ್ಲಿ ಇವತ್ತು ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯವನ್ನ ಆಸ್ಟ್ರೇಲಿಯಾ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ಈ ಪಂದ್ಯ ಸ್ಟಿವ್ ಸ್ಮಿತ್ ಪಡೆ ಸೋತರೆ ಸರಣಿ ಭಾರತದ ವಶವಾಗಲಿದೆ.
ಟೀಮ್ ಇಂಡಿಯಾದ ಸಂಭಾವ್ಯ ಪಟ್ಟಿ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಚಹಾಲ್, ಅಕ್ಷರ್ ಪಟೇಲ್, ಉಮ್ರಾನ್ ಮಲಿಕ್ ಮತ್ತು ಜಯದೇವ್ ಉನದ್ಕಟ್.
ಆಸ್ಟ್ರೇಲಿಯಾದ ಸಂಭಾವ್ಯ ಪಟ್ಟಿ;
ಸ್ಟಿವ್ ಸ್ಮಿತ್ (ಕ್ಯಾಪ್ಟನ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಟ್ರಾವೀಸ್ ಹೆಡ್, ಮಾರ್ಶ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಕ್ಯಾಮರೂನ್ ಗ್ರೀನ್, ಮ್ಯಾಕ್ಸ್ವೆಲ್, ಸ್ಟೋನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಅಡೆಮ್ ಜಂಪಾ, ಅಗಾರ್, ಅಲೆಕ್ಸ್ ಕ್ಯಾರಿ ವಾರ್ನರ್, ನಾಥನ್ ಎಲ್ಲಿಸ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post