ಕಲಬುರಗಿ: ಅಕಾಲಿಕ ಗಾಳಿ-ಮಳೆಗೆ ವಿದ್ಯುತ್ ಶಾಕ್ ಹೊಡೆದು ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಚಿಂಚೋಳಿ ಪಟ್ಟಣದ ಧನಗರಗಲ್ಲಿ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ಝರಣಮ್ಮ (45), ಮಹೇಶ್ (22) ಮತ್ತು ಸುರೇಶ್ (20) ಎಂದು ಗುರುತಿಸಲಾಗಿದೆ.
ಚಿಂಚೋಳಿಯಲ್ಲಿ ತಡರಾತ್ರಿ ಭಾರೀ ಗಾಳಿ ಸಹಿತ ಮಳೆಯ ಅಬ್ಬರ ಜೋರಾಗಿತ್ತು. ಗಾಳಿಗೆ ರಭಸಕ್ಕೆ ಸರ್ವಿಸ್ ವಿದ್ಯುತ್ ವೈರ್ ಕಟ್ಟಾಗಿ ಈ ದುರ್ಘಟನೆ ನಡೆದಿದೆ. ತಾಯಿ ಇಬ್ಬರು ಮಕ್ಕಳು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೆಲಕ್ಕೆ ಬಿದ್ದಿದ್ದ ಸರ್ವಿಸ್ ವೈರ್ ನಿಂದ ಕರೆಂಟ್ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ತಾಯಿಗೆ ವಿದ್ಯುತ್ ಶಾಕ್ ಹೊಡೆಯುತ್ತಿದ್ದನ್ನು ಕಂಡ ಮಕ್ಕಳು ಆಕೆಯನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ ಮೂವರು ಶಾಕ್ನಿಂಸ ಸಾವನ್ನಪ್ಪಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post