ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೂ ಅಂಪೈರ್ ನಿತಿನ್ ಮೆನನ್ಗೂ ಅವಿನಭಾವ ಸಂಬಂಧ. ನಿತಿನ್ ಮೆನನ್ ಯಾವಾಗಲೂ ವಿರಾಟ್ ಕೊಹ್ಲಿ ವಿಚಾರದಲ್ಲಿ ವಿವಾದಾತ್ಮಕ ತೀರ್ಪು ನೀಡುವುದರಿಂದಲೇ ಸುದ್ದಿಯಲ್ಲಿ ಇರುತ್ತಾರೆ.
ಇದು ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಕೂಡ ಮುಂದುವರೆದಿತ್ತು. ಹಾಗಾಗಿ 4ನೇ ಟೆಸ್ಟ್‌ನಲ್ಲಿ ಕೊಹ್ಲಿ ಅಂಪೈರ್ ನಿತಿನ್ ಮೆನನ್ ಕಾಲೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೊನೇ ಟೆಸ್ಟ್‌ನಲ್ಲಿ 2ನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಪ್ಯಾಡ್ಗೆ ಚೆಂಡು ಬಿದ್ದಿತ್ತು.
ಆಗ ಅಶ್ವಿನ್ ಎಲ್‌ಬಿಡಬ್ಲ್ಯೂ ಔಟ್ ನೀಡುವಂತೆ ಅಪೀಲ್ ಮಾಡಿದ್ದರು. ಆದರೆ ಅಂಪೈರ್ ನಿತಿನ್ ಮೆನನ್ ನಾಟೌಟ್ ನೀಡಿದರು. ಆಗ ಕೊಹ್ಲಿ ನಿತಿನ್ ಮೆನನ್ ಬಗ್ಗೆ ವ್ಯಂಗ್ಯವಾಡಿದರು. ನಾನಾಗಿದ್ರೆ ಔಟ್ ಆಗಿರ್ತಿದ್ದೆ, ಅದೇ ಸ್ಥಾನದಲ್ಲಿ ನಾನು ಇದ್ದಿದ್ರೆ ನಿತಿನ್ ಔಟ್ ಕೊಡೋರು ಎಂದಿದ್ದರು. ಈಗ ಮತ್ತೆ ಸೀನ್ ಸದ್ಯ ನಡೆಯುತ್ತಿರೋ ಆಸ್ಟ್ರೇಲಿಯಾದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮುಂದುವರಿದಿದೆ.
ನತನ್ ಎಲ್ಲೀಸ್ ಮಾಡಿದ 15ನೇ ಓವರ್ 2ನೇ ಎಸೆತದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯೂ ಆದರು. ಆಗ ಹಿಂದೆ ಮುಂದೆ ನೋಡದೆ ಮರು ಮಾತಾಡದೆ ನಿತಿನ್ ಮೆನನ್ ಔಟ್ ಎಂದು ನೀಡಿದ್ರು. ಇದನ್ನು ರಿವ್ಯೂವ್ ಕೂಡ ಮಾಡಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಿತಿನ್ ಅವರನ್ನು ಕೊಹ್ಲಿ ಫ್ಯಾನ್ಸ್ ಟ್ರೋಲ್ ಮಾಡಿದ್ದಾರೆ.
Virat Kohli 🤝 Nitin Menon 🤝 LBW.
What a story this has been, Nitin menon don't even think twice when Kohli is infront of him 🥲#INDvsAUS pic.twitter.com/ZrVEycTOPD
— Akshat (@AkshatOM10) March 19, 2023
ಇನ್ನು, ಕೊಹ್ಲಿ ಇಂದಿನ ಮ್ಯಾಚ್ನಲ್ಲಿ ಸೆಟಲ್ ಆಗಿದ್ದರು. 35 ಬಾಲ್ನಲ್ಲಿ 4 ಫೋರ್ ಸಮೇತ 31 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ಆದರೆ, ಕೊನೆಗೂ ವಿವಾದಾತ್ಮಕ ತೀರ್ಪಿಗೆ ಬಲಿ ಪಶುವಾದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post