ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಅನ್ನೋದು ವರವು ಹೌದು ಶಾಪವೂ ಹೌದು. ಸೋಷಿಯಲ್ ಮೀಡಿಯಾದ ಮೂಲಕ ದೇಶ ವಿದೇಶಗಳಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳಬಹುದು. ಅದೇ ರೀತಿ ತಮ್ಮ ಸ್ಮಾರ್ಟ್ ಫೋನ್ ಬಳಸಿ ರೀಲ್ಸ್ ಮಾಡುವವರ ಸಂಖ್ಯೆ ಅಷ್ಟಿಷ್ಟಲ್ಲ. ರೀಲ್ಸ್ ಮಾಡುವ ಮೂಲಕ ಅದೆಷ್ಟೋ ಜನರು ದೇಶವ್ಯಾಪಿ ಸುದ್ದಿಯಾಗುತ್ತಾರೆ.
ಹೌದು ಅದೇ ರೀತಿ ಇಲ್ಲೊಬ್ಬ ವ್ಯಕ್ತಿಯು ಬ್ಲ್ಯಾಕ್ ಸ್ಕರ್ಟ್ ಧರಿಸಿ ಮುಂಬೈನ ಲೋಕಲ್ ಟ್ರೈನ್ನಲ್ಲಿ ಕ್ಯಾಟ್‌ವಾಕ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ‘ದಿ ಗೈ ಇನ್ ಎ ಸ್ಕರ್ಟ್’ ಎಂದು ಖ್ಯಾತಿ ಪಡೆದಿರೋ ಶಿವಂ ಭಾರದ್ವಾಜ್ ಎಂಬುವವರು ಇನ್ಸ್ಟಾಗ್ರಾಮ್ನಲ್ಲಿ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಇದನ್ನು ಓದಿ: ಫ್ಯಾನ್ಸ್ಗೆ ಸಿಹಿಸುದ್ದಿ ಕೊಡ್ತೀನಿ ಎಂದ ಹರಿಪ್ರಿಯಾ- ವಸಿಷ್ಠ ಸಿಂಹ ಜೋಡಿ..? ಏನದು..?
ಶಿವಂ ಫ್ಯಾಶನ್ ಬ್ಲಾಗರ್ ಮತ್ತು ಮೇಕಪ್ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಶಿವಂ ಅವರು ಕ್ಯಾಟ್‌ವಾಕ್ ಮಾಡಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿವಂ ಮುಂಬೈನ ಸ್ಥಳೀಯ ರೈಲಿನಲ್ಲಿ ಬ್ಲ್ಯಾಕ್ ಸ್ಕರ್ಟ್ ಮತ್ತು ಸನ್ ಗ್ಲಾಸ್ ಧರಿಸಿ ಕ್ಯಾಟ್‌ವಾಕ್ ಮಾಡಿದ್ದಾರೆ. ಇನ್ನು ಇವರು ಕ್ಯಾಟ್‌ವಾಕ್ ಮಾಡಿಕೊಂಡು ಹೋಗುತ್ತಿದ್ದನ್ನು ಕಂಡ ಸಹ ಪ್ರಯಾಣಿಕರು ಕಣ್ಣು ಮಿಟುಕಿಸದೇ ಅವರನ್ನೇ ನೋಡುತ್ತಿದ್ದರು. ಇದೇ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post