ಕೊಪ್ಪಳ: 2023ರ ಚುನಾವಣೆ ಹಿನ್ನೆಲೆ ಸರ್ಕಾರಿ ಶಾಲೆಯಲ್ಲಿ ಪರೋಕ್ಷವಾಗಿ ಚುನಾವಣಾ ಪ್ರಚಾರದ ಕೂಗು ಕೇಳಿಬಂದಿದೆ. ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಶಾಲೆಯಲ್ಲೂ ಚುನಾವಣೆ ಪ್ರಚಾರ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಕ್ಕಳೆದುರು ಪ್ರಧಾನಿ ನರೇಂದ್ರ ಮೋದಿಯವರನ್ನು ಗುಣಗಾನ ಮಾಡಿದ್ದಾರೆ .
ಸ್ವಕ್ಷೇತ್ರದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಕಾರ್ಯಕ್ರಮದಲ್ಲಿ ಹಾಲಪ್ಪ ಆಚಾರ್ ಚುನಾವಣಾ ಪ್ರಚಾರ ಮಾಡಿದ್ದಾರೆ. ಪರೋಕ್ಷವಾಗಿ ಬಿಜೆಪಿ ಪರ ಚುನಾವಣೆ ಪ್ರಚಾರ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಹುರಿದುಂಬಿಸಿದ್ದಾರೆ.
ಹಾಲಪ್ಪ ಆಚಾರ್ ಗೆದಿಗೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಮೋದಿ ಬಗ್ಗೆ ಗುಣಗಾನ ಮಾಡುತ್ತಾ, ಶಾಲೆಯಲ್ಲೂ ಮತ ಪ್ರಚಾರ ಮಾಡಿದ್ದಾರೆ. ಸಚಿವರು ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
‘‘ಈ ದೇಶವನ್ನು ಅಭಿವೃದ್ಧಿಶೀಲಾ ದೇಶವನ್ನಾಗಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. 24×7 ಈ ದೇಶಕ್ಕಾಗಿ ತನ್ನನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಇರದೆ, ಒಂದು ನಿಮಿಷನೂ ವ್ಯರ್ಥ ಮಾಡುತ್ತಿಲ್ಲ. ಈ ದೇಶವನ್ನು ವಿಶ್ವದಲ್ಲಿ ನಂಬರ್ ಒನ್ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಹಗಲು ರಾತ್ರಿ ಈ ದೇಶಕ್ಕಾಗಿ ಕೆಲಸ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ನರೇಂದ್ರ ಮೋದಿ ನಮಗೆ ಬೇಕಾ ಬೇಡಾ?’’ ಎಂದು ಹಾಲಪ್ಪ ಆಚಾರ್ ಶಾಲಾ ಮಕ್ಕಳಿಗೆ ಪ್ರಶ್ನೆ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ‘‘ಬೇಕು ಅಂದ್ರೆ ಏನ್ ಮಾಡಬೇಕು? ಅಂತ ವಿದ್ಯಾರ್ಥಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಈಗ ಚುನಾವಣೆ ಬರುತ್ತೆ, ಊರನ್ಯಾಗ್ ನಿಮ್ಮಪ್ಪ, ನಿಮ್ಮವ್ವ ಎಲ್ಲರಿಗೂ ಹೇಳಿ. ನರೇಂದ್ರ ಮೋದಿ ಈ ದೇಶದೊಳಗೆ ಮುಂದುವರೆಬೇಕೋ? ಬೇಡವೋ?. ಈ ದೇಶ ಶ್ರೀಮಂತವಾಗಿರಬೇಕಂದ್ರ ಎಂಥ ನಿರ್ಣಯ ತೆಗೆದುಕೊಳ್ಳಬೇಕು ಅಂತಾ ಹೇಳಿ. ನೀವು ನಿಮ್ಮಪ್ಪ, ನಿಮ್ಮವ್ವ ಊರಿನ್ಯಾಗ್ನವರಿಗೆ ಹೇಳಿದ್ರಾ ಕರೆಕ್ಟ್ ಆಗುತ್ತೆ. ಇಲ್ಲಂದ್ರ ಇದು ಆಗುವುದಿಲ್ಲ. ಹಿಂದಿನ ಸರ್ಕಾರ ಹ್ಯಾಂಗಿತ್ತು, ಈಗಿನ ಸರ್ಕಾರ ಹ್ಯಾಂಗ್ ಕೆಲಸ ಮಾಡತೈತಿ. ನಿಮ್ಮ ತಾಯಿ, ನಿಮ್ಮ ತಂದೆ, ನಿಮ್ಮ ಅಣ್ಣತಮ್ಮಂದಿರಿಗೆ ಎಲ್ಲರಿಗೆ ಹೇಳಬೇಕು. ಇದನ್ನ ಬಿಡಿಸಿ ಹೇಳಿ. ಇನ್ನೇನು ಒಂದು ತಿಂಗಳೊಳಗ ಚುನಾವಣೆ ಬರುತ್ತದೆ. ನೀವು ನಿರ್ಣಯ ಹ್ಯಾಂಗ್ ತಗಳ್ಬೇಕು, ಈ ದೇಶ ವಿಶ್ವದಲ್ಲಿ ನಂಬರ್ ಓನ್ ಆಗ್ಬೇಕಾ? ಬೇಡವೋ?. ಆಗ್ಬೇಕೋ ಬೇಡವೋ ಮತ್ತೊಮ್ಮೆ ನರೇಂದ್ರ ಮೋದಿ ಎಂದು ನಿಮ್ಮೂರನ್ಯಾಗ್ ಹೇಳಿ ಎಂದು ಹಾಲಪ್ಪ ಆಚಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post