ಚೊಚ್ಚಲ ವುಮೆನ್ಸ್ ಐಪಿಎಲ್ನಲ್ಲಿ ಆರ್ಸಿಬಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಸತತ ಐದು ಪಂದ್ಯ ಗೆದ್ದು ಕೊನೆಗೆ ಗೆಲುವಿನ ಹಳಿಗೆ ಮರಳಿತ್ತು.
ಸದ್ಯ ಸೋಲಿನಿಂದ ಕಂಗೆಟ್ಟ ತಂಡಕ್ಕೆ ಪ್ರತೀಕ್ ಕುಹಾದ್ ಹಾಡಿನ ಮೂಲಕ ಹುರಿದುಂಬಿಸಿದ್ದಾರೆ. ಆಟಗಾರ್ತಿಯರ ಮೈಂಡ್ ರಿಪ್ರೇಶ್ಗಾಗಿ ಖ್ಯಾತ ಸಿಂಗರ್ ಪ್ರತೀಕ್ರನ್ನ ಕರೆಸಿತ್ತು. ಪ್ರತೀಕ ಕುಹಾದ್ ಹಾಡನ್ನ ಇಡೀ ತಂಡ ಎಂಜಾಯ್ ಮಾಡಿದೆ.
ಹಾಡನ್ನ ಕೇಳಿದ ಆಟಗಾರ್ತಿಯರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಮೃತಿ ಮಂದಾನ ಪಡೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಉಳಿದ ಪಂದ್ಯಗಳನ್ನ ಜಯಿಸಿ ಚೊಚ್ಚಲ ಆವೃತ್ತಿಗೆ ಗುಡ್ಬೈ ಹೇಳುವ ಲೆಕ್ಕಚಾರದಲ್ಲಿದೆ.
#PlayBold #ನಮ್ಮRCB pic.twitter.com/TaIQdIRHkK
— Royal Challengers Bangalore (@RCBTweets) March 18, 2023
ಈಗಾಗಲೇ ಎರಡು ಪಂದ್ಯ ಗೆದ್ದಿರೋ ಆರ್ಸಿಬಿ ಕೊನೇ ಪಂದ್ಯಕ್ಕಾಗಿ ಕಾಯುತ್ತಿದೆ. ಮಾರ್ಚ್ 22ನೇ ತಾರೀಕು ನಡೆಯಲಿರೋ ಕೊನೇ ಪಂದ್ಯದ ಗೆಲುವಿನೊಂದಿಗೆ ಈ ಐಪಿಎಲ್ ಟೂರ್ನಿಗೆ ವಿದಾಯ ಹೇಳಲು ಆರ್ಸಿಬಿ ನಿರ್ಧರಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post