ಅಯ್ಯೋ.. ಕಾಲ ಬದಲಾಗಿದೆ. ದಿನಕ್ಕೊಂದು ವಿಚಿತ್ರ ಸುದ್ದಿಗಳು ಬೆಳಕಿಗೆ ಬರುತ್ತವೆ. ಅದರಲ್ಲೂ ಕಲಿಯುಗ ಕಳೆದು ಸಂಗಮದ ಕಾಲದಲ್ಲಿದ್ದರು ಮನುಷ್ಯರಿಗೆ ಬಾಲ ಮೂಡಿರುವುದು, ಸೊಂಡಿಲು ಬಂದಿರುವ ಘಟನೆ ಈಗಾಗಲೆ ಬೆಳಕಿಗೆ ಬಂದಿದೆ. ಆದರೀಗ ಮಹಿಳೆಯೊಬ್ಬಳಿಗೆ ಗಡ್ಡ ಬೆಳೆದಿದೆಯಂತೆ. ಅಂದಹಾಗೆಯೇ ಭಾರತದಲ್ಲೇ ಬೆಳಕಿಗೆ ಬಂದ ಪ್ರಕರಣ ಇದಾಗಿದೆ.
ಪ್ರಸ್ತುತ ಸಮಾಜದಲ್ಲಿ ಗಂಡಸಿಗೆ ಕೂದಲು ಉದುರುವ ಸಮಸ್ಯೆ ಒಂದಾದರೆ, ಇತ್ತ ಮಹಿಳೆಯರಿಗೆ ಮುಖದಲ್ಲಿ ಕೂದಲು ಬರುವ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಆದರೆ ಬೋಲು ತಲೆಯವರನ್ನಾದರೂ ಹೆಣ್ಣು ಮಕ್ಕಳು ಒಪ್ಪಿಕೊಂಡು ಮದುವೆಯಾಗುತ್ತಾರೆ. ಆದರೆ ಮುಖದಲ್ಲಿ ಕೂದಲು ಇರುವ ಹೆಣ್ಣು ಮಕ್ಕಳನ್ನು ಗಂಡಸರು ಒಪ್ಪುವುದು ತೀರಾ ಕಡಿಮೆ.
ಪಂಜಾಜ್ ಮೂಲದ ಈ ಮಹಿಳೆಯ ಹೆಸರು ಮಂದೀಪ್ ಕೌರ್. ಹಾರ್ಮೋನ್ ತೊಂದರೆಯಿಂದ ಮಂದೀಪ್ ಮುಖದಲ್ಲಿ ಕೂದಲು ಬೆಳೆದಿದೆ. ಆದರೆ ಇದನ್ನು ಕಂಡ ಪತಿ ಆಕೆಗೆ ಡಿವೋರ್ಸ್ ನೀಡಿದ್ದಾನೆ. 34 ವರ್ಷದ ಈ ಮಹಿಳೆ ಮುಖದಲ್ಲಿ ಬಂದ ಕೂದಲನ್ನ ಸಂಪೂರ್ಣವಾಗಿ ಹೋಗಲಾಡಿಸಲು ಚಿಕಿತ್ಸೆ ಮೊರೆ ಹೋಗಬಹುದು. ಆದರೆ ಮಂದೀಪ್ ಮಾತ್ರ ಏನೇ ಆಗಲಿ ಕೂದಲನ್ನು ಹಾಗೆಯೇ ಬಿಡುವ ನಿರ್ಧಾರಕ್ಕೆ ಬಂದಿದ್ದಾಳೆ.
ಮಂದೀಪ್ 2012ರಲ್ಲಿ ವಿವಾಹವಾದಳು. ಆದರೆ ಆಕೆಯ ಮುಖದಲ್ಲಿ ಬರುತ್ತಿರುವ ಕೂದಲನ್ನು ಕಂಡು ಗಂಡ ಡಿವೋರ್ಸ್ ನೀಡಿ ದೂರವಾಗಿದ್ದಾರೆ. ಅಸಹಜವಾಗಿ ಹಾರ್ವೋನ್ ತೊಂದರೆಯಿಂದ ಬಂದ ಗಡ್ಡದಿಂದಾಗಿ 12 ವರ್ಷ ಜೊತೆಗಿದ್ದ ಗಂಡ ಕೈ ಕೊಟ್ಟಿದ್ದಾನೆ. ಆದರೆ ಇವೆಲ್ಲ ನೋವುಗಳಿದ್ದರು ತಲೆ ಕೆಡಿಸಿಕೊಳ್ಳದ ದಿಟ್ಟ ಮಹಿಳೆ ಮಂದೀಪ್ ಕೌರ್ ಗಡ್ಡ, ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post