ಇಂದು ಆಂಧ್ರದ ವಿಶಾಖಪಟ್ಟಣಂ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಇದಾದ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಇಂಡಿಯಾ ಆಟಗಾರರ ವಿರುದ್ಧ ಬೇಸರ ಹೊರಹಾಕಿದ್ದಾರೆ.
ನಾವು ಸರಿಯಾಗಿ ಆಡಲಿಲ್ಲ, ಶೇ.100 ರಷ್ಟು ಶ್ರಮ ಹಾಕಲಿಲ್ಲ. ಇಂದು ನಮ್ಮ ದಿನ ಆಗಿರಲಿಲ್ಲ. ಸ್ಟಾರ್ಕ್ ತುಂಬಾ ಕ್ವಾಲಿಟಿ ಬೌಲರ್. ಎಷ್ಟೋ ವರ್ಷಗಳಿಂದ ಆಸ್ಟ್ರೇಲಿಯಾಗೆ ಇಂತಹ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ನಮಗೆ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ ಎಂದಿದ್ದಾರೆ.
ಖಂಡಿತಾ ನಾವು ಕೇವಲ 117ಕ್ಕೆ ಆಲೌಟ್ ಆಗೋ ಪಿಚ್ ಇದಾಗಿರಲಿಲ್ಲ. ಶುಭ್ಮನ್ ವಿಕೆಟ್ ಬಿದ್ದ ಬಳಿಕ ನನ್ನ ಮತ್ತು ಕೊಹ್ಲಿ ಪಾಟ್ನರ್ಶೀಪ್ನಲ್ಲಿ 35ಕ್ಕೂ ಹೆಚ್ಚು ರನ್ ಗಳಿಸಿದೆವು. ಚೆನ್ನಾಗಿಯೇ ಆಡುತ್ತಿದ್ದೆವು, ಅಷ್ಟರಲ್ಲೇ ನನ್ನ ವಿಕೆಟ್ ಬಿತ್ತು ಎಂದರು.
ನನಗೆ ನಿಜಕ್ಕೂ ಬೇಸರ ಆಯ್ತು. ನಮ್ಮ ಬ್ಯಾಟ್ಸ್ಮನ್ಗಳು ಸರಿಯಾಗಿ ರನ್ ಗಳಿಸಲಿಲ್ಲ. ನಾವು ಇನ್ನಷ್ಟು ಚೆನ್ನಾಗಿ ಆಡಬೇಕಿತ್ತು. ಮುಂದಿನ ಪಂದ್ಯ ಗೆಲ್ಲುತ್ತೇವೆ, ಎಲ್ಲರೂ ಆಡಿದ್ರೆ ಟೀಂ ಇಂಡಿಯಾಗೆ ಗೆಲುವು ಎಂದು ಹೇಳಿದರು.
ಟೀಂ ಇಂಡಿಯಾ ನೀಡಿದ್ದ 117 ರನ್ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 11 ಓವರ್ಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 121 ರನ್ ಚಚ್ಚಿ ಗೆದ್ದು ಬೀಗಿದೆ. ಆಸೀಸ್ ಪರ ಟ್ರಾವೀಸ್ ಹೆಡ್ 51, ಮಿಚೆಲ್ ಮಾರ್ಷ್ 66 ರನ್ ಗಳಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post