ರಾಜಮೌಳಿ ನಿರ್ದೇಶನದ RRR ಸಿನಿಮಾದ ನಾಟು, ನಾಟು ಆಸ್ಕರ್ ಗೆದ್ದಾಯ್ತು. ಬೆಸ್ಟ್ ಒರಿಜಿನಲ್ ಸಾಂಗ್ ಇನ್ನೂ ಜಗತ್ತಿನಾದ್ಯಂತ ಸದ್ದು ಮಾಡುತ್ತಲೇ ಇದೆ. ಎಲ್ಲರೂ ಕಾಪಿ ಮಾಡುವ ನಾಟು, ನಾಟು ಹಾಡು ಮತ್ತು ಡ್ಯಾನ್ಸ್ ಮಾಡಿರೋ ಮೋಡಿ ಅಷ್ಟಿಷ್ಟಲ್ಲ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಇದನ್ನು ಓದಿ: ‘RRR’ ಸಿನಿಮಾದ ‘ನಾಟು ನಾಟು’ ಹಾಡಿಗೆ ಗ್ರ್ಯಾಮಿ, ಆಸ್ಕರ್ ಅವಾರ್ಡ್ ಸಿಗಲೇಬೇಕೆಂದ ಭಾರತದ ಸಂಗೀತ ಮಾಂತ್ರಿಕ!
ಇನ್ನು, ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳಲೆಂದು ಉಚಿತ ಪ್ರವೇಶವನ್ನು ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಅವಕಶವಿತ್ತು. ಹೀಗಾಗಿ ಉಳಿದ ಸದಸ್ಯರು ಎಂದು ಎಸ್‌ಎಸ್ ರಾಜಮೌಳಿ, ಪತ್ನಿ ರಮಾ ರಾಜಮೌಳಿ, ಮಗ ಕಾರ್ತಿಕೇಯ, ಕಾರ್ತಿಕೇಯ ಅವರ ಪತ್ನಿ, ರಾಮ್ ಚರಣ್ ದಂಪತಿ ಮತ್ತು ಜೂನಿಯರ್ ಎನ್‌ಟಿಆರ್ ಅವರಿಗಾಗಿ ಭಾರೀ ಮೊತ್ತದ ಟಿಕೆಟ್ ಅನ್ನು ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಎಸ್‌ಎಸ್ ರಾಜಮೌಳಿ ಆಸ್ಕರ್ 2023 ಪಾಸ್‌ಗಳನ್ನು ತೆಗೆದುಕೊಳ್ಳಲು ಭಾರಿ ಮೊತ್ತದ ಹಣವನ್ನು ಪಾವತಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಎಸ್‌ಎಸ್ ರಾಜಮೌಳಿ ಕುಟುಂಬ, ಜೂನಿಯರ್ NTR, ರಾಮ್ ಚರಣ್ ಮತ್ತು ಅವರ ಪತ್ನಿಗಾಗಿ ಬರೋಬ್ಬರಿ 1.44 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಪ್ರತಿ ಒಬ್ಬ ವ್ಯಕ್ತಿಗೆ 20.6 ಲಕ್ಷ ರೂಪಾಯಿ ದರದಂತೆ, ಒಟ್ಟು 1.44 ಕೋಟಿ ರೂಪಾಯಿಗಳಷ್ಟು ಹಣವನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.
ಒಟ್ಟಾರೆಯಾಗಿ ಆಸ್ಕರ್ ಪ್ರಶಸ್ತಿಯು ಸಿನಿಮಾ ರಂಗದಲ್ಲಿ ಸಾಧನೆಗೈದ ಕಲಾವಿದರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು. ಸದ್ಯ ಈ ವರ್ಷದ ಬಹುನಿರೀಕ್ಷಿತ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post