ಸದ್ಯ ವಿಶ್ವದೆಲ್ಲೆಡೆ ನಾಟು ನಾಟು ಹವಾ ಜೋರಾಗಿದೆ. ಈ ನಾಟು ನಾಟು ಫೀವರ್ ಕ್ರಿಕೆಟ್ ಲೋಕವನ್ನೂ ಬಿಟ್ಟಿಲ್ಲ. ಕ್ರಿಕೆಟ್ ಜಗತ್ತಿನ ಸಾಮ್ರಾಟ ಕಿಂಗ್ ಕೊಹ್ಲಿ ಕೂಡ ಈ ಸಾಂಗ್ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆದ್ರೆ ಸಾಂಗ್ನಲ್ಲಿ ಸಖತ್ ಸ್ಟೆಪ್ಸ್ ಹಾಕಿರೋ ರಾಮ್ಚರಣ್, ವಿರಾಟ್ ಕೊಹ್ಲಿಗೆ ಫಿದಾ ಆಗಿದ್ದಾರೆ. ಇಷ್ಟೇ ಅಲ್ಲ. ಫ್ಯಾನ್ಸ್ಗೆ ಬಿಗ್ ನ್ಯೂಸ್ ಕೊಟ್ಟಿದ್ದಾರೆ.
ಇಂಡೋ- ಆಸೀಸ್ ಮೊದಲ ಏಕದಿನ ಪಂದ್ಯದಲ್ಲಿ ಒಂದು ಬೌಂಡರಿ ಬಾರಿಸಿ ವಿರಾಟ್ ಕೊಹ್ಲಿ ಸುಸ್ತಾದ್ರು. ರೆಡ್ ಹಾಟ್ ಫಾರ್ಮ್ನಲ್ಲಿದ್ದ ಕಿಂಗ್ ಕೊಹ್ಲಿಯ ಆಟ 4 ರನ್ಗಳಿಗೆ ಅಂತ್ಯವಾಯಿತು. ಕ್ರಿಕೆಟ್ ಲೋಕದ ಸುಲ್ತಾನ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದ ಮಾತ್ರ ಮುಂಬೈ ವಾಂಖೆಡೆಯಲ್ಲಿ ನೆರೆದಿದ್ದ ಫ್ಯಾನ್ಸ್ ಬೇಸರಗೊಳ್ಳಲಿಲ್ಲ. ಯಾಕಂದ್ರೆ, ಪಂದ್ಯದ ಆರಂಭದಲ್ಲೇ ಕಿಂಗ್ ಕೊಹ್ಲಿ ಅಭಿಮಾನಿಗಳನ್ನ ರಂಜಿಸಿದ್ದರು.
ಪಂದ್ಯಕ್ಕೂ ಮುನ್ನ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕಿಂಗ್ ಕೊಹ್ಲಿ ಅಲ್ಲಿ ನೆರಿದಿದ್ದ ಫ್ಯಾನ್ಸ್ಗೆ ಸಖತ್ ಟ್ರೀಟ್ ಕೊಟ್ರು. ಕೊಹ್ಲಿ ಮಾತ್ರವಲ್ಲ, ಇಡೀ ವಿಶ್ವವೇ ನಾಟು ನಾಟು ಹಾಡಿಗೆ ಫಿದಾ ಆಗಿದೆ. ಇದರಿಂದ ಕ್ರಿಕೆಟ್ ಲೋಕ ಕೂಡ ಹೊರತಾಗಿಲ್ಲ. R.ಅಶ್ವಿನ್, ರವೀಂದ್ರ ಜಡೇಜಾ.. ಹೀಗೆ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ಗಳೆಲ್ಲ ಈ ಹಾಡಿಗೆ, ಡ್ಯಾನ್ಸ್ಗೆ ಫಿದಾ ಆಗಿದ್ದಾರೆ. ಚೆನ್ನೈ ಕ್ಯಾಂಪ್ನ ಯಂಗ್ಗನ್ಸ್ ಕೂಡ ಹೆಜ್ಜೆ ಹಾಕಿ ಆನಂದಿಸಿದ್ದಾರೆ.
ಸದ್ಯ ಇಡೀ ಪ್ರಪಂಚದಲ್ಲಿ ನಾಟು ನಾಟು ಹಾಡಿನದ್ದೇ ಫೀವರ್. ಈ ಹಾಡಿನ ಮುಡಿಗೆ ಪ್ರತಿಷ್ಟಿತ ಆಸ್ಕರ್ನ ಕಿರೀಟವೂ ಒಲಿದಿದೆ. ಈ ಹಾಡು ಇಷ್ಟು ಫೇಮಸ್ ಆಗಿದ್ದೇ, ಅದ್ರ ಡ್ಯಾನ್ಸ್ನಿಂದ. ಅದ್ರಲ್ಲೂ ರಾಮ್ಚರಣ್ ಸ್ಟೆಫ್ಸ್ಗೆ ಫಿದಾ ಆಗದವರೇ ಇಲ್ಲ.
ಕಿಂಗ್ ಕೊಹ್ಲಿ ಆಟಕ್ಕೆ ರಾಮ್ಚರಣ್ ಕ್ಲೀನ್ಬೋಲ್ಡ್.!
ತನ್ನ ಡ್ಯಾನ್ಸ್, ನಟನೆಯಿಂದಲೇ ವಿಶ್ವವನ್ನ ಗೆದ್ದಿರೋ ರಾಮ ಚರಣ್, ಕಿಂಗ್ ಕೊಹ್ಲಿಗೆ ಕ್ಲೀನ್ಬೋಲ್ಡ್ ಆಗಿದ್ದಾರೆ. ವಿರಾಟ್ ಕೊಹ್ಲಿಯ ಆಟ, ಛಲದ ಹೋರಾಟ, ಅಗ್ರೆಸ್ಸಿವ್ನೆಸ್, ಲೈಫ್ ಸ್ಟೈಲ್ ಫಿಟ್ನೆಸ್ಗೆ ಫಿದಾ ಆಗಿರೋ ರಾಮಚರಣ್ ಇದೀಗ ಮನದಾಸೆಯನ್ನ ಹೊರ ಹಾಕಿದ್ದಾರೆ.
Virat naatu naatu step vesthunadu ga @tarak9999 @AlwaysRamCharan @imVkohli#NaatuNaatu pic.twitter.com/3sLOIYiUMT
— AK🐾 (@Arun_2_) March 17, 2023
ಕೊಹ್ಲಿ ಪಾತ್ರಕ್ಕೆ ಬಣ್ಣ ಹಚ್ಚೋಕೆ ರಾಮ್ಚರಣ್ ರೆಡಿ.!
RRR ಚಿತ್ರ ರಿಲೀಸ್ ಆದ ಬಳಿಕ ತೆಲುಗಿನ ಸ್ಟಾರ್ ರಾಮ್ಚರಣ್ ಸಿನಿಮಾ ಲೋಕದ ಟಾಪ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ನಾಟು ನಾಟು ಹಾಡಿಗೆ ಒಲಿದ ಮೇಲಂತು ರಾಮ್ಚರಣ್ ಪ್ರಸಿದ್ಧಿ ವಿಶ್ವದೆಲ್ಲೆಡೆ ಪಸರಿಸಿದೆ. ಇಂಥಾ ರಾಮ್ಚರಣ್ ಲೆಜೆಂಡ್ ವಿರಾಟ್ ಕೊಹ್ಲಿಯ ಪಾತ್ರಕ್ಕೆ ಬಣ್ಣಹಚ್ಚೋಕೆ ರೆಡಿಯಾಗಿದ್ದಾರೆ. ಈ ಆಸೆಯನ್ನ ರಾಮ್ಚರಣ್ ಹೊರಹಾಕಿದ್ದು, ಕ್ರಿಕೆಟ್ ಲೋಕದ ಸುಲ್ತಾನನ ಬಯೋಪಿಕ್ನಲ್ಲಿ ಬಣ್ಣ ಹಚ್ಚೋ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.
RC-16ನಲ್ಲಿ ವಿರಾಟ್ ಕೊಹ್ಲಿಯ ಅವತಾರ.?
RRRನಲ್ಲಿ ವಿಶ್ವದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಮ್ಚರಣ್ ಸದ್ಯ, ಮತ್ತೊಂದು ಬಿಗ್ ಪ್ರಾಜೆಕ್ಟ್ನಲ್ಲಿ ವರ್ಕ್ ಮಾಡ್ತಿದ್ದಾರೆ. ತಮ್ಮ 15ನೇ ಚಿತ್ರದಲ್ಲಿ ಐ, ರೋಬೋಟ್ ಚಿತ್ರ ನಿರ್ದೆಶಿಸಿ ಸೈ ಅನ್ನಿಸಿಕೊಂಡಿರೋ ಶಂಕರ್ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅದಾದ ಬಳಿಕ ವಿರಾಟ್ ಕೊಹ್ಲಿಯ ಬಯೋಪಿಕ್ ಮಾಡೋದು ರಾಮ್ಚರಣ್ ಆಸೆಯಾಗಿದೆ.
ವಿಶ್ವದ ಸೂಪರ್ ಸ್ಟಾರ್ ಆಗಿ ಬೆಳೆದಿರೋ ರಾಮ್ಚರಣ್ ಇದೀಗ ನಿವೃತ್ತಿಗೂ ಮುನ್ನವೇ ಲೆಜೆಂಡ್ ಆಗಿ ಗುರುತಿಸಿಕೊಂಡಿರೋ ಕೊಹ್ಲಿಯ ಪಾತ್ರಕ್ಕೆ ಬಣ್ಣ ಹಚ್ಚೋ ಆಸೆಯನ್ನೇನೊ ವ್ಯಕ್ತಪಡಿಸಿದ್ದಾರೆ. ಆದ್ರೆ ಇದಕ್ಕೆ ಕೊಹ್ಲಿ ಒಪ್ತಾರಾ? ಕೊಹ್ಲಿ ಒಪ್ಪಿದರು ಇದಕ್ಕೆ ಆ್ಯಕ್ಷನ್ ಕಟ್ ಹೇಳೋದ್ಯಾರು?. ಎಂಬೆಲ್ಲಾ ಪ್ರಶ್ನೆಗಳಿವೆ. ಇವಕ್ಕೆಲ್ಲಾ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post