ಬೀದರ್: ಸ್ಕಾರ್ಪಿಯೋ ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನೊಪ್ಪಿರೋ ಘಟನೆ ಹುಲಸೂರ ತಾಲೂಕಿನ ರಾಷ್ರೀಯ ಹೆದ್ದಾರಿ ಸಮೀಪದ ಸೋಲದಾಬಕಾ ಗ್ರಾಮದ ಬಳಿ ನಡೆದಿದೆ. ವಿರೇಶ್ ಬಂಗರಗಿ ಮೃತ ದುರ್ದೈವಿ.
ಇದನ್ನು ಓದಿ: ಪೋಕ್ಸೋ ಕೇಸ್; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗೆ ಬರೋಬ್ಬರಿ 20 ವರ್ಷ ಜೈಲು
ಮೃತ ವ್ಯಕ್ತಿಯು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದ ನಿವಾಸಿ. ಸ್ಕಾರ್ಪಿಯೋ ವಾಹನದಲ್ಲಿ ಒಟ್ಟು ಆರು ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಆರು ಜನರ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ.
ಭಾಲ್ಕಿ ತಾಲೂಕಿನ ಸಿದ್ದಾಪುರ ವಾಡಿ ಗ್ರಾಮದ ಮದುವೆಗೆಂದು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸಾಗರ ರೇವಣ ಸಿದ್ಧ, ರಾಹುಲ್ ಮತ್ತು ಅನೀಲ್ ಕುಮಾರ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಅವರಿಗೆ ಹುಲಸೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಹುಲಸೂರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post