ಶುಭ್ಮನ್ ಗಿಲ್ ಯಂಗ್ ಟ್ಯಾಲೆಂಡೆಡ್ ಕ್ರಿಕೆಟರ್. ಇಷ್ಟು ದಿನ ಬ್ಯಾಟಿಂಗ್ನಲ್ಲಿ ಮೋಡಿ ಮಾಡ್ತಿದ್ದ ಯಂಗ್ಮ್ಯಾನ್ ಈಗ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡುತ್ತಿದ್ದಾರೆ. ಹೆಡ್ ಕೋಚ್ ರಾಹುಲ್ ದ್ರಾವಿಡ್ ಇದಕ್ಕೆ ಸಾಥ್ ನೀಡಿದ್ದಾರೆ.
ವಿರಾಟ್ ಕೊಹ್ಲಿ ವರ್ಲ್ಡ್ ಕ್ರಿಕೆಟ್‌ನ ಒನ್ ಆಫ್ ದಿ ಬೆಸ್ಟ್ ಫೀಲ್ಡರ್. ಇವರು ಹಿಡಿಯುವ ಅದ್ಭುತ ಕ್ಯಾಚ್ಗಳನ್ನ ನೋಡುವುದೇ ಚೆಂದ. ಆದ್ರೆ ಇಂತಹ ಬೆಸ್ಟ್ ಫೀಲ್ಡರ್ಗೆ ಅದೇನಾಯಿತೊ ಗೊತ್ತಿಲ್ಲ. ಸ್ಲಿಪ್ನಲ್ಲಿ ಮೇಲಿಂದ ಮೇಲೆ ಕ್ಯಾಚ್ ಡ್ರಾಪ್ ಮಾಡ್ತಿದ್ದಾರೆ. ಕಳೆದ ವರ್ಷ ಬಾಂಗ್ಲಾ ಹಾಗೂ ಇತ್ತೀಚೆಗೆ ಮುಗಿದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸಿಲ್ಲಿಯಾಗಿ ಕ್ಯಾಚ್ಗಳನ್ನ ಕೈಬಿಟ್ಟು ಟೀಕೆಗೆ ಒಳಗಾಗಿದ್ದರು.
ಯಾವಾಗ ಕೊಹ್ಲಿ ಸ್ಲಿಪ್ನಲ್ಲಿ ಮಂಕಾದರೊ ಹೆಡ್ಕೋಚ್ ರಾಹುಲ್ ದ್ರಾವಿಡ್ ಅಲ್ಟರ್ನೇಟಿವ್ ಪ್ಲಾನ್ ರೂಪಿಸಿದರು. ಯಂಗ್ಗನ್ ಶುಭ್ಮನ್ ಗಿಲ್ಗೆ ಸ್ಲಿಪ್ ಕ್ಯಾಚ್ ಟ್ರೈನಿಂಗ್ ನೀಡಿದರು. ಅದು ವಾಂಖೆಡೆ ಪಂದ್ಯದ ಮುನ್ನ. ಕೊನೆಗೂ ದಿ ವಾಲ್ ತಾನಂದುಕೊಂಡಿದ್ದನ್ನ ಸಾಧಿಸಿದ್ದಾರೆ.
ಸ್ಲಿಪ್ನಲ್ಲಿ ಅದ್ಭುತ ಕ್ಯಾಚ್ ಹಿಡಿದು ಗಿಲ್ ಶೈನಿಂಗ್..!
ಗುರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸೋದು ಶಿಷ್ಯಂದಿರ ಕರ್ತವ್ಯ. ಅದರಲ್ಲಿ ರೈಸಿಂಗ್ ಸ್ಟಾರ್ ಶುಭ್ಮನ್ ಗಿಲ್ ಕೊನೆಗೂ ಸಕ್ಸಸ್ ಕಂಡರು. ವಾಂಖೆಡೆಯಲ್ಲಿ ಎರಡು ಸ್ಟನ್ನಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದರು. ಅದು ಸ್ಲಿಪ್ನಲ್ಲಿ. ಗಿಲ್ ಹಿಡಿದ ಈ ಕ್ಯಾಚಸ್ ಆಸೀಸ್ ಅಲ್ಪ ಮೊತ್ತಕ್ಕೆ ಕುಸಿಯಲು ಕೂಡ ಕಾರಣವಾಯಿತು.
ಡೇಂಜರಸ್ ಸ್ಟೋಯ್ನಿಸ್ಗೆ ಗೇಟ್ಪಾಸ್..!
ಅದು ಪಂದ್ಯದ 31.3ನೇ ಓವರ್. ಶಮಿ ಬಾಲ್ ಹಿಡಿದು ದಾಳಿಗಿಳಿದರು. ಡೇಂಜರಸ್ ಬ್ಯಾಟರ್ ಮಾರ್ಕಸ್ ಸ್ಟೋಯ್ನಿಸ್ ಬ್ಯಾಟ್ಗೆ ಸವರಿದ ಚೆಂಡು ಸ್ಲಿಪ್ನಲ್ಲಿದ್ದ ಗಿಲ್ ಕೈ ಸೇರಿತ್ತು. ತನ್ನ ಬಾಲ್ ಬಂದಿದ್ದೇ ತಡ ಪಂಜಾಬ್ ಪುತ್ತರ್ ಕ್ಯಾಚ್ ಹಿಡಿದು ಸ್ಟೋನೀಸ್ಗೆ ಪೆವಿಲಿಯನ್ ದಾರಿ ತೋರಿಸಿದರು.
ಗಿಲ್ ಕಮಾಲ್..ಅಬೋಟ್ ಶೂನ್ಯಕ್ಕೆ ಔಟ್.
ಇನ್ನು ವಾಂಖೆಡೆ ಮ್ಯಾಚ್ನಲ್ಲಿ ಗಿಲ್ ಕ್ಯಾಚ್ ಶೋ ಇಲ್ಲಿಗೆ ನಿಲ್ಲಲಿಲ್ಲ. ಇದಾದ ಎರಡು ಓವರ್ಗೆ ಯಂಗ್ಮ್ಯಾನ್ ಮತ್ತೊಂದು ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಸೀನ್ ಅಬೋಟ್ರ ಅದ್ಭುತ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಅಬೋಟ್ ಖಾತೆ ತೆರೆಯುವ ಮುನ್ನವೇ ಗೂಡು ಸೇರಿದರು.
ಬ್ಯಾಟಿಂಗ್ನಲ್ಲಿ ಹೀರೋ ಆಗುವ ಚಾನ್ಸ್ ಮಿಸ್..!
ಇನ್ನು ಫೀಲ್ಡಿಂಗ್ನಲ್ಲಿ ಹೀರೋ ಆದಂತೆ ಬ್ಯಾಟಿಂಗ್ನಲ್ಲಿ ಹೀರೋ ಆಗುವ ಬೆಸ್ಟ್ ಚಾನ್ಸ್ ಗಿಲ್ಗಿತ್ತು. ಬಟ್, ಚಿನ್ನದ ಅವಕಾಶಗಳನ್ನ ಯುವ ಬ್ಯಾಟರ್ ಕೈಚೆಲ್ಲಿದ್ರು. 20 ರನ್ಗೆ ಔಟಾದ ಗಿಲ್ಗೆ 2 ಕ್ಯಾಚ್ ಜೀವದಾನ ಸಿಕ್ಕಿತ್ತು. 2 ರನ್ ಆಗಿದ್ದಾಗ ವಿಕೆಟ್ ಕೀಪರ್ ಇಂಗ್ಲೀಷ್ ಕ್ಯಾಚ್ ಕೈಚೆಲ್ಲಿದ್ರೆ 7 ರನ್ ಗಳಿಸಿದ್ದಾಗ ಮತ್ತೊಂದು ಜೀವದಾನ ಲಭಿಸಿತು. ಸ್ಲಿಪ್ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್ ಗಿಲ್ರ ಟಫ್ ಕ್ಯಾಚ್ ಅನ್ನ ಡ್ರಾಪ್ ಮಾಡಿದರು.
ಇದನ್ನು ಓದಿ: ಟೀಮ್ ಇಂಡಿಯಾಕ್ಕೆ ರೋಹಿತ್ ಶರ್ಮಾ ಬ್ಯಾಕ್; ಕಿಶನ್ ತಂಡದಿಂದ ಹೊರ ಹೋಗ್ತಾರಾ?
ಇದಿಷ್ಟೇ ಅಲ್ಲ, 6ನೇ ಓವರ್ನಲ್ಲಿ ಮತ್ತೊಂದು ಲೈಫ್ ಚಾನ್ಸ್ ಸಿಗ್ತು. ಸೀನ್ ಅಬೊಟ್ ಬೌಲಿಂಗ್ನಲ್ಲಿ LBW ಬಲೆಗೆ ಬಿದ್ದರು. ಮೈನ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಗಿಲ್ ಡಿಆರ್ಎಸ್ಗೆ ಮೊರೆ ಹೋದರು. ಇದರಲ್ಲಿ ಪ್ಲೇಬಾಯ್ಗೆ ಕೊನೆಗೆ ಸಕ್ಸಸ್ ಸಿಕ್ಕಿತು.
ಹೀಗೆ ಒಂದಲ್ಲ, ಎರಡಲ್ಲ. ಮೂರು ಚಿನ್ನದಂತ ಜೀವದಾನ ಕೈಚೆಲ್ಲಿದ ಶುಭ್ಮನ್ ಗಿಲ್ ಕೊನೆಗೆ 20 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. ವಾಂಖೆಡೆಯಲ್ಲಿ ಗಿಲ್ ವಂಡರ್ ಸೃಷ್ಟಿಸ್ತಾರೆ ಅನ್ನುವ ಕೋಟ್ಯಾನು ಕೋಟಿ ಅಭಿಮಾನಿಗಳ ಆಸೆ ಭಗ್ನಗೊಂಡಿತು.
ಇಂದಾದ್ರು ಆಸೀಸ್ ಬೇಟೆಯಾಡ್ತಾರಾ ರೈಸಿಂಗ್ ಸ್ಟಾರ್..?
ಪ್ರಚಂಡ ಫಾರ್ಮ್ನಲ್ಲಿರೋ ಗಿಲ್ ಇದೇ ವರ್ಷ ಒಂದು ವಿಶ್ವದಾಖಲೆಯ ಡಬಲ್ ಸೆಂಚುರಿ ಮತ್ತು ಎರಡು ಶತಕ ಸಿಡಿಸಿದ್ದಾರೆ. ಆದ್ರೆ ವಾಂಖೆಡೆಯಲ್ಲಿ ಅಬ್ಬರಿಸುವ ನಿರೀಕ್ಷೆ ಸುಳ್ಳಾಯಿತು. ಇಂದು ವಿಶಾಖಪಟ್ಟಣಂನಲ್ಲಿ 2ನೇ ಒನ್ ಡೇ ನಡೆಯಲಿದೆ. ಗಿಲ್ ಮೇಲೆ ಬಹಳಷ್ಟು ನಿರೀಕ್ಷೆ ಇದ್ದು ಮತ್ತೊಂದು ಬಿಗ್ ಇನ್ನಿಂಗ್ಸ್ ಮೂಡಿ ಬರುತ್ತಾ ಅನ್ನೋದನ್ನ ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post