ಬೆಂಗಳೂರು: ಕಂಠಪೂರ್ತಿ ಕುಡಿದ ಅಂದ್ರೆ ಈ ಸಾಫ್ಟ್‌ವೇರ್ ಗಂಡನಿಗೆ ತಾನು ಏನ್ ಮಾಡ್ತಿದ್ದೇನೆ ಅನ್ನೋದು ಗೊತ್ತಾಗಲ್ಲವಂತೆ. ಕುಡಿಬೇಡ ಅಂದಿದ್ದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹರ್ಷ ಹಾಗೂ ಆತನ ಹೆಂಡತಿ ಸುಧಾರಾಣಿ ಇಬ್ಬರು ಟೆಕ್ಕಿಗಳು. ತಿಂಗಳಾದ್ರೆ ಸಾಕು ಇಬ್ಬರಿಗೂ ಕೈ ತುಂಬಾ ಸಂಬಳ ಬರ್ತಾ ಇತ್ತು. ಆದ್ರೆ ಕುಡಿತಕ್ಕೆ ದಾಸನಾದ ಹರ್ಷ ಇತ್ತೀಚೆಗೆ ಸಾಫ್ಟ್‌ವೇರ್ ಕೆಲಸವನ್ನು ಬಿಟ್ಟಿದ್ದ. ಈ ಸಾಫ್ಟ್‌ವೇರ್ ಗಂಡ ಕಂಠಪೂರ್ತಿ ಕುಡಿದ ಅಂದ್ರೆ ಆತ ಏನ್ ಮಾಡ್ತಾನೆ ಅಂತಾ ಆತನಿಗೆ ಗೊತ್ತಾಗಲ್ಲ. ಕುಡಿದ ಅಮಲಿನಲ್ಲಿ ಪ್ರತಿನಿತ್ಯ ಹೆಂಡತಿಗೆ ಮಾನಸಿಕ ಹಿಂಸೆ ನೀಡ್ತಿದ್ದ ಎನ್ನಲಾಗಿದೆ.
ಜಮೀನು ಮಾರಿದ್ದ ದುಡ್ಡಿನಲ್ಲಿ ಮಜಾ ಮಾಡಿದ
ಮೂಲತಃ ತುಮಕೂರು ನಿವಾಸಿಯಾದ ಹರ್ಷ 10 ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದಿದ್ದ. ಗಂಡ, ಹೆಂಡತಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು ದಂಪತಿಗೆ 12 ವರ್ಷದ ಮಗ ಕೂಡ ಇದ್ದಾನೆ. ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ್ದ ಹರ್ಷನಿಗೆ ಸಾಕಷ್ಟು ಹಣ ಬಂದಿತ್ತು. ಹಣ ಬಂದಿದ್ದೇ ಹರ್ಷ ಸಂಪೂರ್ಣವಾಗಿ ಬದಲಾಗಿದ್ದ. ಲಕ್ಷ, ಲಕ್ಷ ಸಂಬಳ ಬರೋ ಕೆಲಸವನ್ನೂ ಬಿಟ್ಟು ಕುಡಿತದ ದಾಸನಾಗಿದ್ದ.
ಇದನ್ನೂ ಓದಿ: ಸಿನಿಮಾ ಆಗಲಿದೆ ಉರಿಗೌಡ-ನಂಜೇಗೌಡ ಕಥೆ; ನಿರ್ದೇಶನ, ನಿರ್ಮಾಣ ಮಾಡೋದು ಯಾರು ಗೊತ್ತಾ?
ಮನೆಯಲ್ಲಿ ಕುಡಿದು ಹೆಂಡತಿ ಜೊತೆ ಜಗಳ
ಟೆಕ್ಕಿ ಹರ್ಷ ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಕುಡ್ಕೊಂಡು ಇರ್ತಿದ್ದನಂತೆ. ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ ಅಂದಾಗ ಹೆಂಡತಿ ಜೊತೆ ಜಗಳ ನಡೆಯುತ್ತಿತ್ತು. ಮಾರ್ಚ್ 17ರಂದು ಇದೇ ರೀತಿಯ ಜಗಳ ಆಗಿದ್ದು, ಹರ್ಷ ತನ್ನ ಹೆಂಡತಿಯನ್ನು ಗೋಡೆಗೆ ಗುದ್ದಿ ಕೊಲೆಗೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಡ, ಹೆಂಡತಿ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಧಾರಣಿ ಸಹೋದರನ ದೂರಿನ ಅನ್ವಯ RR ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post