ಈತ ಟಿ20 ಕ್ರಿಕೆಟ್ನಲ್ಲಿ ಬೆಸ್ಟ್ ಬ್ಯಾಟಿಂಗ್ ಪರ್ಫಾರ್ಮರ್. ಯಾವುದೇ ಎಸೆತವನ್ನಾಗಲಿ ಲೀಲಾಜಾಲವಾಗಿ ಸಿಕ್ಸರ್ ಬಾರಿಸೋದು ಈತನ ಖಯಾಲಿ. ಒಂದು ಎಸೆತವನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಾರಿಸುವಲ್ಲಿ ಈತ ನಿಸ್ಸೀಮಾ. ಆದ್ರೆ ಏಕದಿನ ಫಾರ್ಮೆಟ್ಗೆ ಬಂದರೆ ಈತ ನಿಜಕ್ಕು ಆತನೇನಾ ಅನಿಸುತ್ತೆ. ಈತನ ಸಾಮರ್ಥ್ಯ ಪ್ರೂವ್ ಮಾಡಿಕೊಳ್ಳೋಕೆ ಇನ್ನೆಷ್ಟು ಚಾನ್ಸ್ ನೀಡಬೇಕು?.
ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನ ನಯಾ ಸೂಪರ್ ಸ್ಟಾರ್. ಈತನ ಬ್ಯಾಟಿಂಗ್ ಈತನ ಅನ್ ಪ್ರಿಡೆಕ್ಟಬಲ್ ಶಾಟ್ಸ್ಗೆ ಫಿದಾ ಆಗದ ಕ್ರಿಕೆಟ್ ಪ್ರೇಮಿಗಳೇ ಇಲ್ಲ. ಎಂಥಹ ಡೇಂಜರಸ್ ಬಾಲ್ಗು ಉತ್ತರ ನೀಡಬಲ್ಲ ಕೇಪೆಬಲಿಟಿ ಈತನಲ್ಲಿದೆ. ಒಂದೇ ಎಸೆತವನ್ನು ಅಷ್ಟ ದಿಕ್ಕೂಗಳಿಗೂ ಹೊಡೆಯುವ ಚಾಣಾಕ್ಷ. ಹೀಗಾಗಿಯೇ ಈತ ಟಿ20 ಕ್ರಿಕೆಟ್ ಸ್ಪೆಷಲಿಸ್ಟ್ಗಳ ಬಾಪ್. ಆದ್ರೆ ಏಕದಿನ ಫಾರ್ಮೆಟ್ನಲ್ಲಿ ಮಾತ್ರ ಎಲ್ಲವೂ ಉಲ್ಟಾ.
ಟಿ20ಯಲ್ಲಿ ಅಬ್ಬರಿಸಿ ಬೊಬ್ಬೆರೆದು. ಮಜಾ, ಮಜಾವಾಗಿ ಫಿಯರ್ಲೆಸ್ ಕ್ರಿಕೆಟ್ ಆಡೋ ಸೂರ್ಯಕುಮಾರ್. ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಇದಕ್ಕೆಲ್ಲ ಕಾರಣ ಈತ ಏಕದಿನ ಫಾರ್ಮೆಟ್ನಲ್ಲಿ ನೀಡ್ತಿರೋ ಪರ್ಫಾಮೆನ್ಸ್.
ಆಸೀಸ್ ವಿರುದ್ಧ ಸಿಕ್ಕ ಅವಕಾಶ ಕೈಚೆಲ್ಲಿದ ಸೂರ್ಯ!
ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ತಾನೇನು ಅನ್ನೋದನ್ನ ಫ್ರೂವ್ ಮಾಡೋಕೆ ಉತ್ತಮ ಅವಕಾಶವಾಗಿತ್ತು. ಆದ್ರೆ, ಈ ಅವಕಾಶವನ್ನ ಕೈಯಾರೆ ಹಾಳು ಮಾಡಿಕೊಂಡಿದ್ದು ಸೂರ್ಯಕುಮಾರ್ ಯಾದವ್.
ಆಸೀಸ್ ನೀಡಿದ್ದ 189 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಟೀಮ್ ಇಂಡಿಯಾ 16 ರನ್ಗಳಿಗೆ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಸೂರ್ಯಗೆ ಇನ್ನಿಂಗ್ಸ್ ಕಟ್ಟುವ ಸುವರ್ಣಾವಕಾಶ ದೊರೆತಿತ್ತು. ಆದ್ರೆ, ಸೂರ್ಯ ವಿಕೆಟ್ ಒಪ್ಪಿಸಿದ್ದು ಕೇವಲ ಶೂನ್ಯಕ್ಕೆ. ಇದೇ ಈಗ ಸೂರ್ಯಕುಮಾರ್ ಯಾದವ್ ಬಗ್ಗೆ ಪ್ರಶ್ನಿಸುವಂತೆ ಮಾಡುತ್ತಿದೆ.
ಈ ಪ್ರಶ್ನೆ ಕೇಳ್ತಿರೋದು ಜಸ್ಟ್ ಮೊನ್ನೆಯ ಬ್ಯಾಟಿಂಗ್ ವೈಫಲ್ಯದಿಂದ ಮಾತ್ರ ಅಲ್ಲ. ಕಳೆದ 2 ವರ್ಷಗಳಿಂದ ಏಕದಿನ ಫಾರ್ಮೆಟ್ನಲ್ಲಿ ಸೂರ್ಯಕುಮಾರ್ ನೀಡ್ತಿರುವ ಪ್ರದರ್ಶನದಿಂದಾಗಿ. ಯಾಕಂದ್ರೆ. ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಆರಂಭದಲ್ಲಿ 6 ಪಂದ್ಯಗಳ ಗುಡುಗಿದ್ದು ಬಿಟ್ರೆ, ಆ ಬಳಿಕ ಸೂರ್ಯ ಮಿಂಚಿದ್ದು ಇರಲಿ, ಕನಿಷ್ಠ ಪಕ್ಷ ತಂಡಕ್ಕೆ ಆಸರೆಯು ಆಗಲಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಸೂರ್ಯ ಬ್ಯಾಟ್ನಿಂದ ಮೊದಲ 6 ಏಕದಿನ ಪಂದ್ಯಗಳಲ್ಲಿ 2 ಅರ್ಧಶತಕ ಬಂದಿದ್ದು ಬಿಟ್ಟರೆ, ಉಳಿದೆಲ್ಲವು ಠುಸ್ ಪಟಾಕಿ ಆಗಿವೆ.
ಒನ್ ಡೇಯಲ್ಲಿ ಸೂರ್ಯ ಸಾಧನೆ
ಹೌದು! ಕೊನೆ 10 ಏಕದಿನ ಇನ್ನಿಂಗ್ಸ್ಗಳಿಂದ 123 ರನ್ಗಳಿಸಿರುವ ಸೂರ್ಯಕುಮಾರ್ ಯಾದವ್, ಅಜೇಯ 34 ರನ್ ಗಳಿಸಿದ್ದು ಬೆಸ್ಟ್ ಪರ್ಫಾಮೆನ್ಸ್ ಆಗಿದೆ. 13.66 ಸರಾಸರಿಯಲ್ಲಿ ರನ್ಗಳಿಸಿರುವ ಸೂರ್ಯ, 116.03 ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಈ ಕೊನೆ 10 ಇನ್ನಿಂಗ್ಸ್ಳಿಂದ ಸೂರ್ಯ ಒಂದಂಕಿ ಮೊತ್ತ ದಾಟಿದ್ದು ಜಸ್ಟ್ 4 ಬಾರಿ ಮಾತ್ರ. ಹೀಗಾದರು ಮುಂಬೈಕರ್ಗೆ ಟೀಮ್ ಮ್ಯಾನೇಜ್ಮೆಂಟ್ ಕೃಪಾಕಟಾಕ್ಷ ತೋರಿಸ್ತಿದೆ. ಇದು ನಿಜಕ್ಕು ಅಭಿಮಾನಿಗಳನ್ನ ಪ್ರಶ್ನಿಸುವಂತೆ ಮಾಡಿದೆ.
ಮತ್ತೆರೆಡು ಚಾನ್ಸ್ ಫಿಕ್ಸ್.. ಅಬ್ಬರಿಸ್ತಾರಾ SKY?
ಸದ್ಯ ಶ್ರೇಯಸ್ ಅಲಭ್ಯತೆಯಲ್ಲಿ ಬದಲಿ ಆಟಗಾರನನ್ನ ನೇಮಿಸದ ಸೆಲೆಕ್ಷನ್ ಕಮಿಟಿ, ಒಂದು ರೀತಿ ಸೂರ್ಯಕುಮಾರ್ ಯಾದವ್ಗೆ ವರದಾನವಾಗುವಂತೆ ಮಾಡಿದೆ. ಇದಕ್ಕೆ ಕಾರಣ ಸದ್ಯ ತಂಡದಲ್ಲಿ ಸೂಕ್ತ ಮಿಡಲ್ ಆರ್ಡರ್ ಬ್ಯಾಟರ್ನ ಕೊರತೆ ಇದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಪಂದ್ಯದಲ್ಲಿ ಸೂರ್ಯನೇ ಮುಂದುವರಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಸಿಗುವ ಈ ಇನ್ನೊಂದು ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳುವ ಸುವರ್ಣಾವಕಾಶ ಸೂರ್ಯಗೆ ಇದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸದ್ಬಳಕೆ ಮಾಡಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post