ರಾಜ್ಯದಲ್ಲಿ ಉರಿಗೌಡ, ನಂಜೇಗೌಡ ಕಿಡಿ ಹೊತ್ತಿಸಿದೆ. ತೆನೆ ಕೈ-ಕಮಲ ಕಲಿಗಳ ನಡುವೆ ವಿವಾದ ತಾರಕಕ್ಕೇರಿದೆ. ಕಾಲ್ಪನಿಕ ಮತ್ತು ಸತ್ಯದ ನಡುವೆ ಸಮರ ಶುರುವಾಗಿದೆ. ಎಲ್ಲರ ನಡುವೆ ಉರಿಗೌಡ, ನಂಜೇಗೌಡ ಸಿನಿಮಾ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ನಿರ್ಮಾಣ, ನಿರ್ದೇಶನ, ಕಲೆ ಎಲ್ಲಾ ಫೈನಲ್ ಆಗಿದೆ. ಆದ್ರೆ, ತಾರಾಗಣ ಆಯ್ಕೆ ಮಾತ್ರ ಬಾಕಿ ಇದೆ.
ಟಿಪ್ಪು ಸಮರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ್ನೆ ಮುಳುಗಿಸಿತ್ತು. ಟಿಪ್ಪು ಫೈಟ್ನಲ್ಲಿ ಇಟ್ಟ ಟ್ವಿಸ್ಟ್, ಬಿಜೆಪಿಗೆ ಸ್ವೀಟ್ ಸಿಕ್ಕಿತ್ತು. ಅದೇ ಸ್ವೀಟ್ಗಾಗಿ ಬಿಜೆಪಿ ಹಳೇ ಪಾಲಿಟಿಕ್ಸ್ನ ಟ್ರಿಕ್ಸ್ ಕೊಟ್ಟ ಕಮಲ ಪಡೆ, ಈ ಬಾರಿ ಮಂಡ್ಯದ ಮತ ಗೂಡು ಸೆಳೆಯಲು ಗೌಡಾಸ್ತ್ರ ಪ್ರಯೋಗಿಸ್ತಿದೆ. ಆ ಗೌಡಾಸ್ತ್ರದ ಭಾಗವೇ ಈ ನಿಗೂಢ ಹೆಸರು ಉರಿಗೌಡ ಮತ್ತು ನಂಜೇಗೌಡ.
ಗೌಡರ ಕೋಟೆ ಭೇದಿಸಲು ಟಿಪ್ಪು ವಿರುದ್ಧ ಗೌಡಾಸ್ತ್ರ ಪ್ರಯೋಗ!
ರಾಜ್ಯದಲ್ಲಿ ಹೆಚ್ಚಿದ ಉರಿಗೌಡ, ದೊಡ್ಡನಂಜೇಗೌಡ ಫೈಟ್ ತಾರಕಕ್ಕೇರಿದೆ. ಟಿಪ್ಪುವನ್ನ ಸಾರ್ವಜನಿಕ ಕಟಕಟೆಯಲ್ಲಿ ನಿಲ್ಲಿಸಿ ಮತ ಬಾಚುವ ತನ್ನ ಹಳೇ ಕಾಯಕಕ್ಕೆ ಬಿಜೆಪಿ ಕೈಹಾಕಿದೆ. ಸದ್ಯ ಈ 2 ಹೆಸರುಗಳು ಒಕ್ಕಲಿಗರ ಕೋಟೆಯಲ್ಲಿ ಬಿರುಗಾಳಿಯನ್ನೆ ಎಬ್ಬಿಸಿವೆ. ಎದ್ದ ಬಿರುಗಾಳಿಗೆ ತೆನೆ ಪಡೆ ಮತ್ತು ಕಾಂಗ್ರೆಸ್ ನಾಯಕರ ಸಿಟ್ಟು ಕಟ್ಟೆಯೊಡೆಯುವಂತೆ ಮಾಡಿದೆ. ಬಿಜೆಪಿ ಹುಟ್ಟು ಹಾಕಿರುವ ಈ ಅಸ್ತ್ರ ಸತ್ಯ ಎಂದು ಬಿಂಬಿಸಲು ಬಲಿಷ್ಠ ಮಾಧ್ಯಮವಾದ ಸಿನಿಮಾ ಮೂಲಕ ಆ್ಯಕ್ಷನ್ ಕಟ್ ಹೇಳಲು ಭರ್ಜರಿ ಸಿದ್ಧತೆ ನಡೆದಿದೆ.
ಉರಿಗೌಡ, ನಂಜೇಗೌಡ ಸಿನಿಮಾ ಪೋಸ್ಟರ್ ರಿಲೀಸ್
2023ರ ಕುರುಕ್ಷೇತ್ರ ಗೆಲ್ಲಲು ಕುರುಕ್ಷೇತ್ರ ಸಿನಿಮಾ ನಿರ್ಮಾಣ ಮಾಡಿದ್ದ ಶಾಸಕ ಮುನಿರತ್ನ ಆಗಮನವಾಗಿದೆ. ಕೇಸರಿ ಪಾಳಯ ಅಧಿಕೃತವಾಗಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದೆ. ಉರಿಗೌಡ, ನಂಜೇಗೌಡ ಹೆಸರಿನ ಸಿನಿಮಾಕ್ಕೆ ಮೇ 18 ರಂದು ಮುಹೂರ್ತ ಫಿಕ್ಸ್ ಮಾಡಲಾಗಿದೆ. ಸಚಿವ ಮುನಿರತ್ನ ನಿರ್ಮಾಣದಲ್ಲಿ ಈ ಚಿತ್ರ ತೆರೆಗೆ ಬರಲಿದೆ.
ಉರಿಗೌಡ ನಂಜೇಗೌಡ!
- 1750-1799ರಲ್ಲಿನ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ
- ಉರೀಗೌಡ- ನಂಜೇಗೌಡ ಹೆಸರಿನಲ್ಲೇ ಸಿನಿಮಾ ಬಿಡುಗಡೆ
- ಮುನಿರತ್ನರ ವೃಷಭಾದ್ರಿ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ
- ಸಚಿವ ಅಶ್ವತ್ಥ್ ನಾರಾಯಣ್ ಹೇಳಿರುವ ಚಿತ್ರಕಥೆಯ ಫಿಲ್ಮ್
- ಉರೀಗೌಡ-ನಂಜೇಗೌಡ ಚಿತ್ರಕ್ಕೆ ಆರ್.ಎಸ್.ಗೌಡ ನಿರ್ದೇಶನ
- ಆರ್.ಅಶೋಕ್ ಮತ್ತು ಸಿ.ಟಿ ರವಿ ಅರ್ಪಿಸುವ ಚಲನಚಿತ್ರ
ಚಿತ್ರದ ಬ್ಯಾಗ್ರೌಂಡ್ ಡಿಸೈನ್ ಸಿದ್ಧವಾಗಿದ್ದು, ಪಾತ್ರಗಣದ ಆಯ್ಕೆ ಮಾತ್ರ ಬಾಕಿ ಇದೆ. ಮೇ 18 ರಂದು ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣದ ಮುಹೂರ್ತ ನೆರವೇರಲಿದೆ. ಚುನಾವಣೆಗೆ ದಿನಗಣನೆ ಇದ್ದರು ಸಿನಿಮಾ ನಿರ್ಮಾಣಕ್ಕೆ ಕಮಲಾಧಿಪತಿಗಳು ಮುಂದಾಗಿದ್ದು, ಚುನಾವಣೆ ಹೊತ್ತಲ್ಲಿ ಉರೀಗೌಡ-ನಂಜೇಗೌಡ ಮೂಲಕ ಪಾಲಿಟಿಕ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post