ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸದ್ಯ ಭಾರೀ ಸಂಚಲನ ಸೃಷ್ಟಿಸಿರೋದು ಉರಿಗೌಡ, ನಂಜೇಗೌಡ. ಇವರಿಬ್ಬರು ಟಿಪ್ಪುವನ್ನು ಕೊಂದ ಹೋರಾಟಗಾರರು ಅಂತ ಬಿಜೆಪಿ ಹೇಳ್ತಿದ್ರೆ ವಿಪಕ್ಷಗಳು ಕಾಲ್ಪನಿಕ ಅಂತಿವೆ. ಇದೆಲ್ಲದರ ಮಧ್ಯೆ ಇಬ್ಬರ ಹೆಸರಿನಲ್ಲಿ ಪುಸ್ತಕ ಪತ್ತೆಯಾಗಿದ್ದು ಟ್ವಿಸ್ಟ್ ಸಿಕ್ಕಿದೆ. ಉರಿಗೌಡ, ನಂಜೇಗೌಡ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಏಳದ ವಿವಾದಗಳಿಲ್ಲ. ರಣರಂಗದಲ್ಲಿ ರಾಜಕೀಯ ಪಟುಗಳು ಬಿಡದ ಪಟ್ಟುಗಳಿಲ್ಲ. ಈ ಪೈಕಿ ಭಾರೀ ವಿವಾದ ಹಾಗೂ ಅಷ್ಟೇ ಕುತೂಹಲ ಸೃಷ್ಟಿಸಿರುವುದು ಈ ಉರಿಗೌಡ, ನಂಜೇಗೌಡ ಹೆಸರು. ಇವರೇ ಟಿಪ್ಪು ಸುಲ್ತಾನ್ನನ್ನು ಕೊಂದು ಹಾಕಿದ್ದು ಅಂತ ಕೇಸರಿ ಕಲಿಗಳು ಬಿಂಬಿಸುತ್ತಿರುವುದು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮಾತ್ರವಲ್ಲದೇ ಇವರಿಬ್ಬರದ್ದು ಇದೇ ಎನ್ನಲಾದ ಇತಿಹಾಸವನ್ನು ಬಿಜೆಪಿ ನಾಯಕರು ತಲಾತಲದಲ್ಲಿ ಕೆದಕುತ್ತಿದ್ದು ತಲಾಶ್ಗೆ ಪ್ರತಿಫಲ ಸಿಕ್ಕಿದೆ.
ರಾಜ್ಯದಲ್ಲಿ ಹೆಚ್ಚಿದ ಉರಿಗೌಡ, ದೊಡ್ಡನಂಜೇಗೌಡ ಫೈಟ್
ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖವಿರುವ ಪುಸ್ತಕ ಪತ್ತೆ!?
ರಾಜ್ಯದಲ್ಲಿ ಉರಿಗೌಡ, ದೊಡ್ಡನಂಜೇಗೌಡ ಫೈಟ್ ಹೆಚ್ಚಾಗಿದ್ದು ಇದೇ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಗಳ ಪ್ರಯೋಗ ಆಗ್ತಾನೇ ಇದೆ. ಸದ್ಯ ಈ ವಾಕ್ಸಮರ ನೆಕ್ಸ್ಟ್ ಲೆವೆಲ್ಗೆ ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ನಾಯಕರ ವಾದಕ್ಕೆ ಪುಷ್ಟಿ ಎನ್ನುವಂತೆ ಉರಿಗೌಡ, ನಂಜೇಗೌಡರ ಬಗ್ಗೆ ಉಲ್ಲೇಖವಿರುವ ಪುಸ್ತಕ ಪತ್ತೆಯಾಗಿದೆ. ಡಾ.ದೇಜಗೌಡ ಅವರ ಸುವರ್ಣ ಮಂಡ್ಯ ಪುಸ್ತಕದಲ್ಲಿ ಇಬ್ಬರ ಹೆಸರು ಉಲ್ಲೇಖವಿದೆ. 2006ರಲ್ಲಿ ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ಪುಸ್ತಕದಲ್ಲಿ ಉರಿಗೌಡ, ದೊಡ್ಡನಂಜೇಗೌಡ ಬಗ್ಗೆ ಉಲ್ಲೇಖವಿದೆ. ಹೈದರಾಲಿ, ಟಿಪ್ಪು ವಿರುದ್ಧ ಉರಿಗೌಡ, ನಂಜೇಗೌಡ ಸೆಟೆದು ನಿಂತಿದ್ರು. ಧಾರ್ಮಿಕ ಹಾಗೂ ಭಾಷಾ ನೀತಿ ಕಾರಣದಿಂದ ಸೆಟೆದು ನಿಂತಿರುವ ಮಾಹಿತಿ ಇದೆ. ಟಿಪ್ಪು ತನ್ನ ಆಡಳಿತದಲ್ಲಿ ಪರ್ಷಿಯನ್ ಆಡಳಿತ ಭಾಷೆಯಾಗಿ ಘೋಷಣೆಯಾಗಿದ್ರಿಂದ ಗೌಡರು ಟಿಪ್ಪುವಿನ ವಿರುದ್ಧ ತಿರುಗಿ ಬಿದ್ದಿದ್ದರು ಎಂಬ ಅಂಶ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಿದೆ.
ಉರಿಗೌಡ, ನಂಜೇಗೌಡ ಸಿನಿಮಾ ಪೋಸ್ಟರ್ ರಿಲೀಸ್
ಇನ್ನು ಅತ್ತ ಇಬ್ಬರು ನಾಯಕರ ಬಗೆಗಿನ ಅಂಶ ಪುಸ್ತಕದಲ್ಲಿ ಪತ್ತೆಯಾಗ್ತಿದ್ದಂತೆ ಇತ್ತ ಕೇಸರಿ ಪಾಳಯ ಅಧಿಕೃತವಾಗಿ ಸಿನಿಮಾ ಪೋಸ್ಟರ್ನ್ನೇ ರಿಲೀಸ್ ಮಾಡಿದೆ. ಉರಿಗೌಡ ನಂಜೇಗೌಡ ಹೆಸರಿನ ಸಿನೆಮಾದ ಮುಹೂರ್ತ ಇದೇ ಮೇ 18 ರಂದು ನಡೆಯಲಿದೆ. ಸಚಿವ ಮುನಿರತ್ನ ನಿರ್ಮಾಣದಲ್ಲಿ ಚಿತ್ರ ತೆರೆಗೆ ಬರಲಿದೆ.
ಇವೆಲ್ಲಾ ಕಾಲ್ಪನಿಕ ಕಥೆ.. ಬಿಜೆಪಿಗೆ ಕುಮಾರಸ್ವಾಮಿ ಟಾಂಗ್!
ಇನ್ನು ಉರಿಗೌಡ, ನಂಜೇಗೌಡರಿಂದ ಒಕ್ಕಲಿಗರ ಮತಗಳನ್ನ ಹೊಡೆಯಲು ಅಸಾಧ್ಯ. ಇವೆಲ್ಲಾ ಕಾಲ್ಪನಿಕ ಕಥೆ. ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು ಅಂತ ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಒಟ್ಟಾರೆ ಇದುವರೆಗೂ ಕೇವಲ ಬಾಯಿ ಮಾತಿನಲ್ಲಿ ಉರಿಗೌಡ, ನಂಜೇಗೌಡ ಹೆಸರನ್ನು ಹೇಳಿದ್ದ ಕೇಸರಿ ಕಲಿಗಳು ಸದ್ಯ ಪುಸ್ತಕವನ್ನು ಪತ್ತೆ ಹಚ್ಚಿದ್ದಾರೆ. ಮಾತ್ರವಲ್ಲದೇ ಸತ್ಯ ಘಟನೆ ಆಧಾರಿತ ಅಂತ ಹೇಳಿ ಸಿನಿಮಾ ಮುಹೂರ್ತಕ್ಕೂ ಮುನ್ನುಡಿ ಬರೆದಿದ್ದಾರೆ. ಅಂತಿಮವಾಗಿ ಇದು ಯಾವ ಮಟ್ಟಕ್ಕೆ ಹೋಗುತ್ತೆ ಕಾದು ನೋಡ್ಬೇಕು. ರಾಜ್ಯದಲ್ಲಿ ಹೆಚ್ಚಿದ ಉರಿಗೌಡ, ನಂಜೇಗೌಡ ಫೈಟ್; ಕಾಲ್ಪನಿಕ ಮತ್ತು ಸತ್ಯ.. ಇವೆರಡಲ್ಲಿ ಯಾವ್ದು ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post